ಬೆಂಗಳೂರು, ಮೇ 25, (ಕರ್ನಾಟಕ ವಾರ್ತೆ) : ಕರ್ನಾಟಕ ಲಲಿತಕಲಾ ಅಕಾಡೆಮಿಯು ಹೈದ್ರಾಬಾದ್‍ನಲ್ಲಿ ಗ್ರಾಫಿಕ್ ಕಲಾ ಪ್ರದರ್ಶನಕ್ಕೆ ನಿಯಮಗಳನುಸಾರ ಚಿತ್ರಕಲಾವಿದರಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಕರ್ನಾಟಕದ ನಿವಾಸಿಗಳಾಗಿರುವ ಅಥವಾ ಕಳೆದ ಐದು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿರುವ ಕಲಾವಿದರು ಈ ಕಲಾಪ್ರದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಗ್ರಾಫಿಕ್ ಕಲಾ ಪ್ರದರ್ಶನಕ್ಕೆ ಆಯ್ಕೆಯಾದ ಕಲಾವಿದರಿಗೆ ಪ್ರಮಾಣ ಪತ್ರ ಹಾಗೂ ಕ್ಯಾಟಲಾಗ್ ನೀಡಲಾಗುವ್ಯದು. ಗ್ರಾಫಿಕ್ ಕಲಾ ಪ್ರದರ್ಶನದಲ್ಲಿ ಭಾಗವಹಿಸಲಿಚ್ಚಿಸುವ ಕಲಾವಿದರು ವೃತ್ತಿಪರ ಕಲಾವಿದರಾಗಿರಬೇಕು.
ಗ್ರಾಫಿಕ್ ಕಲಾಪುದರ್ಶನಕ್ಕೆ ಆಯ್ಕೆಯಾಗುವ ಕಲಾಕೃತಿಗಳನ್ನು ಅಕಾಡೆಮಿಯಲ್ಲಿ ಆಯಾ ಸಮಿತಿಯು ಆಯ್ಕೆ ಮಾಡಲಿದ್ದು, ಅಕಾಡೆಮಿಯ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ. ಈ ಕಲಾಪ್ರದರ್ಶನದಲ್ಲಿ ಭಾಗವಹಿಸಲಿಚ್ಚಿಸುವ ಕಲಾವಿದರು ತಮ್ಮ ಕಲಾಕೃತಿಗಳ ಛಾಯಾಚಿತ್ರಗಳನ್ನು ನಿಗದಿತ ಅರ್ಜಿಯೊಂದಿಗೆ ಸಲ್ಲಿಸಬೇಕು. ಆಯ್ಕೆ ಸಮಿತಿಯು ಮೂಲಕೃತಿಗಳ ಅಳತೆ ಕನಿಷ್ಠ 18ಘಿ 24 ಛಾಯಾಚಿತ್ರ ಆಧರಿಸಿ ಆಯ್ಕೆ ಮಾಡಿದ ನಂತರ ಮೂಲಕೃತಿಗಳನ್ನು ಕಳುಹಿಸಬೇಕಾಗುತ್ತದೆ.
ಅನುಸೂಚಿಯನ್ನು ಸರಿಯಾಗಿ ಭರ್ತಿಮಾಡಿ ಮೂಲ ಕಲಾಕೃತಿ, ಛಾಯಾಚಿತ್ರಗಳೊಂದಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಅರ್ಜಿಯನ್ನು 03.05.2022ರೊಳಗೆ (ಸರ್ಕಾರಿ ರಜಾ ದಿನಗಳನ್ನು ಹೊರತು ಪಡಿಸಿ) ಕಳುಹಿಸಬೇಕು. ಅವಧಿ ಮುಗಿದ ನಂತರ ಬರುವ ಯಾವುದೇ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ತಡವಾದ ಅಂಚೆ, ಕೊರಿಯರ್‍ಗಳಿಗೆ ಅಕಾಡೆಮಿಯು ಜವಾಬ್ದಾರಿಯಾಗಿರುವುದಿಲ್ಲ.
ವ್ಯಕ್ತಿ ಪರಿಚಯ, ದೂರವಾಣಿ/ಮೊಬೈಲ್ ಸಂಖ್ಯೆ/ಆಧಾರ್ ಸಂಖ್ಯೆ, ಇ-ಮೇಲ್ ಹಾಗೂ ಕಲಾವಿದರ ಭಾವಚಿತ್ರದೊಂದಿಗೆ, ಕಲಾಕೃತಿಯ ಛಾಯಾಚಿತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸುವುದು. ಆಯ್ಕೆಯಾದ ಕಲಾವಿದರು ಅರ್ಜಿ ನಮೂನೆಯಲ್ಲಿ ತಮ್ಮ ಕಲಾಕೃತಿಯ ಮಾಧ್ಯಮದ ವಿವರಗಳನ್ನು ಸ್ಪಷ್ಟವಾಗಿ ತಿಳಿಸುವುದು. ಅರ್ಜಿಯನ್ನು ಅನ್ ಲೈನ್ ಮೂಲಕವೂ www.lalitkala.karnataka.gov.in ನಲ್ಲಿ ಪಡೆಯಬಹುದು.
ಅರ್ಜಿಗಳನ್ನು ರಿಜಿಸ್ಟಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002, ಹಾಗೂ ಕೊರಿಯರ್ ಮೂಲಕ 03.06.2022 ರೊಳಗಾಗಿ ಅರ್ಜಿಯನ್ನು ತಲುಪಿಸಬೇಕು. ಕಳುಹಿಸಲ್ಪಡುವ ಲಕೋಟೆಯ ಮೇಲೆ ಗ್ರಾಫಿಕ್ ಕಲಾಪ್ರದರ್ಶನಕ್ಕಾಗಿ ಅರ್ಜಿ ಎನ್ನುವುದನ್ನು ಸ್ಪಷ್ಟವಾಗಿ ಬರೆದಿರಬೇಕು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
0 Comments