ಬಳ್ಳಾರಿ ಏ 22. ಬಳ್ಳಾರಿ ನಗರದ ಹವಂಬಾವಿ ಹತ್ತಿರ ಉಪ ಕಾಲುವೆ ಮೇಲೆ ಹಾಕುತ್ತಿರುವ ರಸ್ತೆಯು ಜಲ ಸಂಪನ್ಮೂಲ ನೀರಾವರಿ ಇಲಾಖೆ ಸಂಬಂಧಪಟ್ಟ ಸೇವಾ ರಸ್ತೆಯಾಗಿದ್ದು, ಈ ರಸ್ತೆಯ ಎರಡು ಬದಿಗಳಲ್ಲಿ ಸುಮಾರು 50 ಅಡಿ ಸೇವಾ ರಸ್ತೆ, ಆದರೆ ಲೋಕೋಪಯೋಗಿ ಇಲಾಖೆಯವರು ಒಂದು ಕಡೆ ರಸ್ತೆ ಮತ್ತು ಒಳಚರಂಡಿ ಗುಂಡಿಗಳನ್ನು ಹಾಕಿದ್ದಾರೆ. ಮತ್ತೊಂದು ಕಡೆ ಗುಂಡಿಗಳನ್ನು ಹಾಕಿ ರಸ್ತೆಯನ್ನು ಹಾಕುತ್ತಿದ್ದಾರೆ. ಈ ರಸ್ತೆ ಹಾಕುವುದಕ್ಕೆ ನಮ್ಮ ಸಂಘದ ಪರವಾಗಿ ಯಾವ ಆಕ್ಷೇಪಣೆ ಇಲ್ಲಾ, ಸುಂದರ ನಗರಕ್ಕೆ ನಾವು ಸಹಕಾರ ನೀಡುತ್ತೇವೆ.
ಕೇವಲ ರಸ್ತೆ ಹಾಕುತ್ತಿರುವ ರಸ್ತೆಗೆ ಅಡ್ಡ ಬರುವ ಮನೆಗಳನ್ನು ತೆರವುಗೊಳಿಸಬೇಕಾಗಿ ತಮ್ಮಲ್ಲಿ ಕೋರಿಕೊಳ್ಳುತ್ತೇವೆ. ಈ ಕೆಲಸ ತಾವಾಗಿರಬಹುದು, ತುಂಗಾಭದ್ರ ಮಂಡಳಿ (ಟಿ.ಬಿ. ಡ್ಯಾಂ) ಅಧಿಕಾರಿಗಳಾಗಿರಬಹುದು, ಜಲಸಂಪನ್ಮೂಲ ನೀರಾವರಿ ಇಲಾಖೆ ಅಧಿಕಾರಿ-ಗಳಾಗಿರಬಹುದು. ಒಂದು ರಸ್ತೆ ಸುಂದರವಾಗಿ ಕಾಣಬೇಕಾದರೆ ಅಡ್ಡಾದಿಡ್ಡಿಯಾಗಿ ಇದ್ದ ಮನೆಗಳನ್ನು (ಅನಧೀಕೃತವಾಗಿ ಸರ್ಕಾರಿ ಸೇವಾ ರಸ್ತೆಯಲ್ಲಿ ಹಾಕಿರುವ ಮನೆಗಳು) ತೆರವುಗೊಳಿಸಿ, ರಸ್ತೆ ಹಾಕಿದರೆ ಸುಂದರವಾಗಿ ಕಾಣುತ್ತದೆ. ಇಲ್ಲದಿದ್ದಲ್ಲಿ ಈ ರಸ್ತೆ ಹಾಕುವುದರಲ್ಲಿ ಯಾವುದೇ ಅರ್ಥವಿಲ್ಲಾ.
ಈ ವಿಷಯದಲ್ಲಿ ಬಳ್ಳಾರಿ ಉಸ್ತುವಾರಿ ಸಚಿವರು, ಬಳ್ಳಾರಿ ನಗರ ಶಾಸಕರು ಮತ್ತು ಆಯಾ ವಾರ್ಡ್‍ಗಳ ಸಂಬಂಧಪಟ್ಟ ಮಹಾನಗರಪಾಲಿಕೆ ಸದಸ್ಯರು ತಿಳಿದು ತಿಳಿಯದಂತೆ ಮೌನವೇಕೆ ? ಈ ವಿಷಯದಲ್ಲಿ ಎಲ್ಲಾ ಮನೆಗಳು ಅಕ್ರಮವಾಗಿ ಹಾಕಿಕೊಂಡಂತಹ ಮನೆಗಳನ್ನು ತೆರವುಗೊಳಿಸಬೇಕಾಗಿ ಕೋರುತ್ತಿಲ್ಲಾ, ರಸ್ತೆ ಸುಂದರವಾಗಿ ಕಾಣಲು ರಸ್ತೆಗೆ ಅಡ್ಡವಾಗಿ ಇರುವ ಕೇವಲ ಮನೆಗಳನ್ನು ಮಾತ್ರ ತೆರವುಗೊಳಿಸುವ ವಿಷಯದಲ್ಲಿ ಆಡಳಿತ ನಾಯಕರು, ಸರ್ಕಾರಿ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಕೋರಿಕೊಳ್ಳುತ್ತೇವೆ.
ತಾವುಗಳು ಒಬ್ಬ ಶಿಸ್ತಿನ ಅಧಿಕಾರಿಯಾಗಿ ರಸ್ತೆ ಕಾಮಗಾರಿ ನಿಲ್ಲಿಸಿ ಸಂಬಂಧಪಟ್ಟ ಇಲಾಖೆಯಿಂದ ರಸ್ತೆಗೆ ಅಡ್ಡ ಇರುವ ಮನೆಗಳನ್ನು ತೆರವುಗೊಳಿಸಿ, ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಅಭಿಯಂತರರ ಮೇಲೆ, ಗುತ್ತಿಗೆದಾರರ ಮೇಲೆ ಕಾನೂನುಬದ್ಧವಾಗಿ ಕ್ರಮಕೈಗೊಂಡು, ಹೀಗೆ ರಸ್ತೆ ಕಾಮಗಾರಿ ಮುಂದುವರೆದರೆ ಸಂಬಂಧಪಟ್ಟ ಇಲಾಖೆಯಿಂದ ಬರುವಂತಹ ಗುತ್ತಿಗೆದಾರರ ಹಣವನ್ನು ಪಾವತಿಯಾಗದಂತೆ ಕ್ರಮಕೈಗೊಳ್ಳಬೇಕೆಂದು ಹಾಗೂ ಸುಂದರವಾಗಿ ನಗರಕ್ಕೆ ಒಂದು ಸುಂದರವಾದ ರಸ್ತೆಯನ್ನು ಹಾಕುವಂತೆ ಉಪ ಆಯುಕ್ತರಾದ ಆಕಾಶ್ ಶಂಕರ್ ಅವರಿಗೆ ಮನವಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.
0 Comments