Ticker

6/recent/ticker-posts

Ad Code

Responsive Advertisement

ಕ್ರೈಸ್ತ ಸಮುದಾಯದಿಂದ ಭಾರಿ ಪ್ರತಿಭಟನೆ

ಕ್ರೈಸ್ತ ಸಮುದಾಯದಿಂದ ಭಾರಿ ಪ್ರತಿಭಟನೆಯನ್ನು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಯೋಜಿಸಿದ್ದರು

ರಾಜ್ಯ ಸರ್ಕಾರದ ದಾಖಲೆಗಳ ಪ್ರಕಾರ ಕ್ರೈಸ್ತ ಸಮುದಾಯವು ಕೇವಲ 11.30 ಲಕ್ಷ ಇದ್ದು ಕಳೆದ ಹತ್ತು ವರ್ಷಗಳ ಸರಾಸರಿಯನ್ನು ನೋಡಿದರೆ 4.28 ಜನಸಂಖ್ಯೆ ಇಂದು ಕೇವಲ 2.5 ಆಗಿದೆ ಹೀಗಿದ್ದಾಗ ಮತಾಂತರ ಮಾಡುತ್ತಿದ್ದಾರೆ ಎಂದು ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಕರ್ನಾಟಕದ ರೈತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ  ಡಿಸೋಜರವರು ತಿಳಿಸಿದರು
ಕ್ರೈಸ್ತರು ಮತಾಂತರ ಮಾಡುತ್ತಿದ್ದಾರೆ ಎಂದು ಕೇವಲ  ಕೆಲವರು ಇಂದು ಸಾರ್ವಜನಿಕವಾಗಿ ಪತ್ರಿಕಾ ಹೇಳಿಕೆ ಮತ್ತು ಟಿವಿ ಮಾಧ್ಯಮಗಳ ಮೂಲಕ ಆರೋಪ ಮಾಡುತ್ತಿದ್ದಾರೆ ಮಾಡುತ್ತಿರುವ ಆರೋಪಗಳನ್ನು ಗಮನದಲ್ಲಿ ಇಡುವುದಾದರೆ ಕ್ರೈಸ್ತ ಸಮುದಾಯದ ಸಂಖ್ಯೆ 35 ಲಕ್ಷ ಆಗುತ್ತಿತ್ತು ಅಲ್ಲವೇ ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು ಆಗುತ್ತಿದ್ದಲ್ಲಿ ಸರ್ಕಾರಕ್ಕೆ ಆಗ್ರಹಿಸಿದರು
ಮತಾಂತರ ಮಾಡುತ್ತಿದ್ದಾರೆ ಎನ್ನುವುದಾದರೆ ರಾಜ್ಯದ ಬುದ್ಧಿಜೀವಿಗಳು ಭಾರತೀಯ ಜನತಾ ಪಕ್ಷದ ಗಣ್ಯಾತಿಗಣ್ಯ ಮುಖಂಡರುಗಳು ಶ್ರೀಶ್ರೀಶ್ರೀ ಸ್ವಾಮೀಜಿಗಳು ಪ್ರತಿಭಟನೆ ಮಾಡುತ್ತಿದ್ದರು ಅವರು ಯಾರು ಪ್ರತಿಭಟನೆ ಮಾಡುತ್ತಿಲ್ಲ ಹಣ ತೆಗೆದುಕೊಂಡು ಕೆಲಸ ಇಲ್ಲದ ಮುತಾಲಿಕ್ ಮತ್ತು ಒಂದಿಬ್ಬರು ವಿನಾಕಾರಣ ಯಾವುದೇ ದಾಖಲೆಗಳಿಲ್ಲದೆ ಆರೋಪ ಮಾಡುತ್ತಿದ್ದಾರೆ ಇದರಿಂದ ಕ್ರೈಸ್ತ ಸಮುದಾಯಕ್ಕೆ ಸಮುದಾಯಕ್ಕೆ ಬಾರಿ ನೋವನ್ನುಂಟು ಮಾಡಿದೆ ಎಂದು ರಾಜ್ಯದ ಕ್ರೈಸ್ತ ಸಮುದಾಯದ ಪರಮೋಚ್ಚ ಆರ್ಚ್ ಬಿಷಪ್ ಪರವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಫಾದರ್ ಸೀರಿಯಲ್ ರವರು ತಮ್ಮ ನೋವನ್ನು ತೋಡಿಕೊಂಡರು
ಕ್ರೈಸ್ತ ಸಮುದಾಯದ ಪರವಾಗಿ ಕೇಳಿಬರುತ್ತಿರುವ ಮತಾಂತರ ಮತ್ತು ಶಾಲೆಗಳಲ್ಲಿ ಕಡ್ಡಾಯ ಬೋಧನೆ ಹಾಗೂ ಇನ್ನಿತರ ಆರೋಪಗಳ ಸತ್ಯಾಸತ್ಯತೆಯನ್ನು ಅರಿಯಲು ರಾಜ್ಯ ಸರ್ಕಾರ ನಿವೃತ್ತ ನ್ಯಾಯಾಧೀಶರನ್ನು ಅಥವಾ ಹಿರಿಯ ತನಿಕಾ ಏಜೆನ್ಸಿಯನ್ನು ನೇಮಕ ಮಾಡಿದರೆ ಸತ್ಯತೆ ಹೊರಬೀಳಲಿದೆ ಸಮುದಾಯದ ಮೇಲೆ ಆಗುವ ಕಡಿವಾಣ ಹಾಕಬಹುದು ಎಂದು ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಫಾದರ್ ಸಂತೋಷ್ ಅವರು ತಿಳಿಸಿದರು
ವಿದೇಶಗಳಲ್ಲಿ ಹಿಂದೂ ಧರ್ಮದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಹರೇ ರಾಮ ಕೃಷ್ಣ ಅವರು ಹಾಗೂ ಇತರರು ಹಿಂದೂ ಧರ್ಮವನ್ನು ಪ್ರಚಾರ ಮಾಡುತ್ತಾರೆ ಅಲ್ಲಿ ಅವರಿಗೆ ಯಾವುದೇ ರೀತಿಯ ಬೆದರಿಕೆ ಹಲ್ಲೆಗಳು ನಡೆಯುವುದಿಲ್ಲ ರಾಜ್ಯದಲ್ಲಿ ಮತ ಪ್ರಚಾರ ಮಾಡಿದರೆ ಮತಾಂತರ ಎಂದು ಹಲ್ಲೆ ಮಾಡುತ್ತಾರೆ ನೈತಿಕ ಪೊಲೀಸ್ಗಿರಿ ಮಾಡುತ್ತಾ ಸಂದರ್ಭದಲ್ಲಿ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಾರೆ ಇಂತಹ ಗಂಭೀರ ಪ್ರಕರಣಗಳು ನಡೆಯುತ್ತಿದ್ದರೂ ಸರ್ಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳದೆ ಇರುವುದರಿಂದ ಮುತಾಲಿಕ್ ಹಾಗೂ ಕೆಲವರು ರಾಜ್ಯ ರೋಷವಾಗಿ ಕ್ರೈಸ್ತ ಧರ್ಮದವರ ಮೇಲೆ ದಾಳಿ ಮಾಡುತ್ತಾರೆ ವಿಗ್ರಹಗಳನ್ನು ಒಡೆದುಹಾಕುತ್ತಾರೆ ವಾತಾವರಣದಲ್ಲಿರುವ ಸಮುದಾಯಕ್ಕೆ ಸಾಂತ್ವನ ಹೇಳಲು ಮುಖ್ಯಮಂತ್ರಿಗಳು ಕೂಡಲೇ ಉನ್ನತ ಮಟ್ಟದ ಸಭೆಯನ್ನು ಕರೆದು ವಾತಾವರಣವನ್ನು ತಿಳಿ ಮಾಡಬೇಕು ಎಂದು  ಗುರುವಾಗಿರುವ ಡೇವಿಡ್ ರವರು ಸರ್ಕಾರಕ್ಕೆ ಮನವಿ ಮಾಡಿದರು ಈ ಕಾರ್ಯಕ್ರಮದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಸಮುದಾಯದ ಮುಖಂಡರು ಭಾಗವಹಿಸಿದ್ದರು

Post a Comment

0 Comments

Ad Code

Responsive Advertisement