50 ದಶಕಗಳ ಹಿಂದೆ ಮೊಬೈಲ್ ಎಂಬ ಪರಿಕರ ಸಾಧನದ ಬಗ್ಗೆ ಕಲ್ಪನೆಯೆ ಇರಲಿಲ್ಲ. ಜೀವನದ ಎಲ್ಲಾ ವ್ಯವಹಾರಗಳು ಸುಗಮವಾಗಿಯೆ ಸಾಗುತ್ತಿತ್ತು. ನಾವು ಸುಖ-ನೆಮ್ಮದಿಯಿಂದಲೆ ಜೀವಿಸುತ್ತಿದ್ದೆವು. ಹೊಸ ಹೊಸ ವೈಜ್ಞಾನಿಕ ಸಂಶೋಧನೆ ಅವಿಸ್ಕಾರಗಳಲೊಂದು ಮೊಬೈಲ್ ಮೊದ ಮೊದಲು ಉಳ್ಳವರ ಐಶ್ವರ್ಯವಂತರ ಜೀವನದ ಐಷಾರಾಮಿ ಜೀವನದ ಭಾಗವಾಗಿದ್ದ ಮೊಬೈಲ್ ಇಂದು ಎಲ್ಲರಿಗೂ ಬೇಕಾದ ವಸ್ತುವಾಗಿ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ.
ಆಕಸ್ಮಿಕವಾಗಿ ಮೊಬೈಲ ಸೇವೆ, ಅನಿರ್ದಿಷ್ಟ ಅವಧಿತನಕ ಲಭ್ಯತೆ ಇಲ್ಲದೆ ಹೋದರೆ. ಈ ಜಗತ್ತು ಹೇಗಿರುತ್ತದೆ ಎಂದರೆ ಕಲ್ಪನೆ ಮಾಡಿಕೊಳ್ಳಲು ಹೆದರುತ್ತೇವೆ. ಜಗತ್ತಿನ ಜೀವನ ವ್ಯವಸ್ಥೆ, ವ್ಯವಹಾರ ವ್ಯಾಪಾರ ಎಲ್ಲವೂ ಸ್ಧಂಭ ಭೂತವಾಗಿ, ಹೋಗುತ್ತದೆ. ಬಹುತೇಕ ಜನರು ಮಾನಸಿ ಕಾಯಿಲೆಗಳಾದ ಖಿನ್ನತೆ, ನಿರಾಶೆ, ಹತಾಶೆ, ಚಡಪಡಿಕೆ ಮತ್ತು ಆತಂಕಕ್ಕೆ ಗುರಿಯಾಗುತ್ತಾರೆ. ಆರ್ಥಿಕ ವ್ಯವಸ್ಥೆ ಕುಸಿಯುತ್ತದೆ. ಒಂದು ಅಲ್ಲ ಸಾವಿರಾರು ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಇದೊಂದು ಕಲ್ಪಪನೆಯಲ್ಲಿ, ವಾಸ್ತವಿಕ ಸತ್ಯದರ್ಶನವಾಗಿದೆ. ಸೌರ ಜ್ವಾಲೆಯ ಸುನಾಮಿ ಭೂವಾತಾವರಣದ ಸಮೀಪ ಹಾದು ಹೋದರೆ ಉಪಗ್ರಹಗಳಿಗೆ ಹಾನಿಯಾಗಿ, ಮೊಬೈಲ್ ಸೇವೆ ತತ್ಕಾಲಿಕವಾಗಿ ಸ್ಥಗಿತವಾಗಲಿದೆ. ಅದನ್ನು ಸರಿಪಡಿಸಲು ಸಹಜಸ್ಥಿತಿಗೆ ತರಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಜನರು ಇದನ್ನು ಸಹಿಸಿಕೊಳ್ಳಲು ಅಥವಾ ಪರ್ಯಾಯ ವ್ಯವಸ್ಥೆಗೆ ಹೊಂದಿಕೊಳ್ಳ ಬಲ್ಲರೆ ಎಂಬುದೆ ಒಂದು ಯಕ್ಷ ಪ್ರಶ್ನೆಯಾಗಿದೆ.
ಈಗ ರಷ್ಯಾ-ಉಕ್ರೇನ್ ಯುದ್ಧ ಬಹು ದೀರ್ಘವಾದರೆ ಶತ್ರುಗಳನ್ನು ಮಣಿಸಲು ರಷ್ಯಾ ಅಥವಾ ಅಮೇರಿಕಾ ಅಥವಾ ಮಿತ್ರ ರಾಷ್ಟ್ರಗಳು ಕೃತಕ ಉಪಗ್ರಹಗಳ ಮೇಲೆದಾಳಿ ಮಾಡಿದರೆ ಆಗಲೂ ಮೊಬೈಲ್ ಸೇವೆ ಇಲ್ಲದಾಗುತ್ತದೆ. ಇದು ಬಹಳ ದೀರ್ಘ ಕಾಲದತನಕ ಸೇವೆಗೆ ಅಡಚಣೆಯಾಗುತ್ತದೆ. ಇದು ಅಣುಬಾಂಬ್ ದಾಳಿಗಿಂತಲೂ ಹೆಚ್ಚಿನ ನಷ್ಟ-ಜಗತ್ತಿನ ಮೇಲೆ ಬೀರಲಿದೆ. ಇದಕ್ಕೇನು ಪರ್ಯಾಯಾಯ ಮಾರ್ಗ.
ಈಗಿನಿಂದಲೆ ಪ್ರತಿಯೊಬ್ಬರು ವಾರಕ್ಕೆ ಒಂದು ದಿನ ಮೊಬೈಲ್ ಬಳಕೆಗೆ ರಜೆಹಾಕಿ ಮೊಬೈಲನಿಂದ ದೂರವಿರುವ ಅಭ್ಯಾಸ ರೂಢಿಸಿಕೊಳ್ಳ. ಇದು ಆರೋಗ್ಯದ ದೃಷ್ಟಿಯಿಂದಲ್ಲೂ ಉತ್ತಮ ಫಲಿತಾಂಶ ನೀಡಲಿದೆ.
ಲ್ಯಾಂಡ್ ಲೈನ್ ಫೋನ್‍ಗಳನ್ನು ಬಳಕೆಯನ್ನು ಮುಂದುವರಿಸಿ, ಆಪ್ತಕಾಲದಲ್ಲಿ ನಮ್ಮ ಸಂಪರ್ಕ ಸಾಧನವಾಗಿ ಕೆಲಸಮಾಡುತ್ತದೆ.
ವಿಜ್ಞಾನಿಗಳು ಸಂಶೋಧಕರು ಈ ನಿಟ್ಟಿನಲ್ಲಿ ಯೋಚಿಸಿ ಜಗತ್ತಿಗೆ ಮೊಬೈಲ್ ಸೇವೆ ನಿಂತಾಗಲೂ ಪರ್ಯಾಯಾಯವಾಗಿ ಯಾವುದನ್ನು ಬಳಸಿ ಜೀವನ ಸಹಜವಾಗಿ ನಡೆಸಲು ಅಗತ್ಯವಾದ ಕಾರ್ಯಕ್ರಮವನ್ನ ರೂಪಿಸಿ ಜಾರಿಗೆ ತರಬೇಕು.
ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ. ನಾವು ಯಾವುದೇ ಒಂದು ಸಾಧನ ಸಾಮಗ್ರಿಗೆ ವಸ್ತುವಿಗೆ. ಇಂಧನಕ್ಕೆ ಪರಾವಲಂಭಿಗಳಾಗದೆ ಮುಂದೆ ಬರುವ ಆಪತ್ತುಗಳನ್ನು ಉಳಿಸಿ ಇಂದಿನಿಂದಲೆ ಜನ ಜಾಗೃತಗೊಳಿಸಿ. ಸಹಜ ಜೀವನದ ಮಾರ್ಗದಲ್ಲಿ ಬದುಕುವ ಕಲೆಯನ್ನು ನಮ್ಮದಾಗಿಸಿಕೊಳ್ಳಬೇಕು.
ಲೇಖಕರು: ಕೆ. ರಾಜಣ್ಣ
ಮಾಲೂರು
0 Comments