ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡುಶ್ರೀರಾಘವೇಂದ್ರ ಸ್ವಾಮಿಗಳಮಠದಲ್ಲಿಪ್ರತಿವರ್ಷ ದಂತೆ ಪರಮಪೂಜ್ಯ108 ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ, ವಾದೀಂದ್ರಾಚಾರ್ಯರ, ಜಿ, ಕೆ ಆಚಾರ್ಯರ ನೇತೃತ್ವದಲ್ಲಿ ಅರ್ಚಕರಿಂದ ವಿಶೇಷವಾಗಿ "ಲೋಕಕಲ್ಯಾಣ"ಕ್ಕಾಗಿ ಸೇವಾಕರ್ತರುಗಳ ಹೆಸರಿನಿಂದ ಹಾಗೂ ಭಕ್ತರನ್ನು ಉದ್ದೇಶಿಸಿ, ಸಂಕಲ್ಪಿಸಿ ಶ್ರೀ ಗುರು ರಾಯರಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಶ್ರೀ ಗುರು ರಾಯರ ಬೃಂದಾವನಕ್ಕೆ ಪಂಚಾಮೃತಾಭಿಷೇಕ ಹಾಗೂ "ಶ್ರೀಗಂಧಲೇಪನ"ದ ಅಲಂಕಾರ ದೊಂದಿಗೆ ವಿಶೇಷವಾಗಿ ಅಲಂಕರಿಸಲಾಯಿತು,
ಈ ಸಂದರ್ಭದಲ್ಲಿ ಶ್ರೀ ಮಠದ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಹೋಮ, ಪಾರಾಯಣ ಹಾಗೂ ಉತ್ಸವಗಳೊಂದಿಗೆ ಭಕ್ತರಿಗೆ ಅನ್ನಸಂತರ್ಪಣೆಯು ನೆರವೇರಿತು, ಭಕ್ತಾದಿಗಳು ಹಾಗೂ ಶ್ರೀಮಠದಸಿಬ್ಬಂದಿಗಳು ಶ್ರೀ ಗುರುರಾಯರ ಸೇವೆಯಲ್ಲಿ ಭಾಗವಹಿಸಿ ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು ಎಂದು ಕಿಶೋರ್ ಆಚಾರ್ಯ ತಿಳಿಸಿದರು.

.jpeg)
.jpeg)
0 Comments