Ticker

6/recent/ticker-posts

Ad Code

Responsive Advertisement

ಮಲ್ಲೇಶ್ವರ 8ನೇ ಅಡ್ಡ ರಸ್ತೆಯಲ್ಲಿ ಅಧೋಗತಿಯತ್ತ 'ವಿದ್ಯುತ್ ಕಂಬ'

ಬೆಂಗಳೂರು: ಬೆಸ್ಕಾಂ ಎಂದರೆ ಸಾರ್ವಜನಿಕರ ಭಾಷೆಯಲ್ಲಿ ಬೆಳಕು ಕೊಡುವ ಶಕಿಧಾತು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಮಾಯಾನಗರಿ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಜನರ ಪಾಲಿನ ಬೆಳಕಾಗಬೇಕಾದ ಬೆಸ್ಕಾಂ ಸಂಸ್ಥೆ ಯಮ ಲೋಕದ ದೂತನಾಗಲು ಹೊರಟಿರುವಂತೆ ಕಾಣುತ್ತಿದೆ. 






ಬೆಂಡಾಗಿ ಬಾಗಿ ಸಾರ್ವಜನಿಕರಿಗೆ ನಮಸ್ಕರಿಸುವಂತಿದೆ ವಿದ್ಯುತ್ ಕಂಬ

ಅಯ್ಯೋ ದೇವರೆ ಇದೇನಿದು ಅಂತ ಆಶ್ಚರ್ಯ ಪಡುತ್ತೀರಾ, ಹೌದು.... ಮಲ್ಲೇಶ್ವರ ಬೆಂಗಳೂರಿನ ಉತ್ತರ ಭಾಗದ ಜನರಿಗೆ ಮುದ ನೀಡುವ ಭಾಗವೆಂದರೂ ತಪ್ಪಾಗಲಾರದು. ಹೇಗೆ ಮಲ್ಲೇಶ್ವರದಲ್ಲಿ ಮನಸ್ಸಿಗೆ ಮುದ ಸಿಗುತ್ತದೆಯೋ ಅದೇ ರೀತಿಯಾಗಿ ವಿದ್ಯುತ್ ಕಂಬಗಳಿಂದ ಜೀವ ಭಯ ಕೂಡ ಇದೆ ಎಂದರೆ ಆಶ್ಚರ್ಯಪಡಬೇಕಾಗಿಲ್ಲ. ಈಗಾಗಲೇ ಎಲ್ಲರಿಗು ತಿಳಿದಿರುವ ಹಾಗೆ ಮಲ್ಲೇಶ್ವರ ಸುತ್ತಮುತ್ತ ರಸ್ತೆ ಕಾಮಗಾರಿ ನಡೆಯುತ್ತಿದೆ. ಅದಕ್ಕೆ ಸಹಕಾರಿಯಾಗಲೆಂದು ವಿದ್ಯುತ್ ಕಂಬಗಳ ದುರಸ್ತಿ, ಬದಲಾಯಿಸುವುದು ಹೀಗೆ ಹಲವಾರು ಅವಶ್ಯ ಕಾರ್ಯಗಳು ನಡೆಯುತ್ತಿದೆ. ವಿಚಿತ್ರವೆಂದರೆ ವಿದ್ಯುತ್ ಕಂಬಗಳು ತುಂಬ ವಯಸ್ಸಾಗಿರುವ/ಮುರಿದು ಬೀಳುವ ಹಂತಕ್ಕೆ ಬಂದಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. 

ಇದು ಮಲ್ಲೇಶ್ವರದ ಯಾವುದೋ ಒಂದು ಗಲ್ಲಿಯ ಪರಿಸ್ಥಿತಿಯಲ್ಲ. ಮಲ್ಲೇಶ್ವರದ ಹಲವೆಡೆ ಈ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಕಂಬ ಬೀಳುವ/ಬಾಗುವ ಹಂತಕ್ಕೆ ಬಂದು ಕೂತಿದೆ. ಈಗಾಗಲೇ ಮಳೆಗಾಲವು ಆರಂಭವಾಗುವ ಸಮಯ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಸಂಬಂಧಪಟ್ಟ ಬೆಸ್ಕಾಂ ಸಂಸ್ಥೆಯ ಕೆಲ ಸಿಬ್ಬಂದಿಗಳು ಕಂಡುಕಾಣದಂತೆ ಇರುವುದು ಎಂತಹ ಸೋಜಿಗದ ಸಂಗತಿ. ವಿದ್ಯುತ್ ತಂತಿಗಳು ಎಲ್ಲೆಂದರಲ್ಲಿ ನೇತಾಡುತ್ತಿವೆ. ಮುಂದಿನ ದಿನಗಳಲ್ಲಿ ಆಗುವಂತಹ ಅನಾಹುತಕ್ಕೆ ಸಂಸ್ಥೆಯು ಜವಾಬ್ದಾರಿಯಾಗಿರುತ್ತದೆ. ಎರಡು ಪಂಚು ಒಂದು ಲಂಚು, ಇನ್ನಿತರೆ ಸೌಲಭ್ಯಗಳನ್ನು ಪಡೆದುಕೊಂಡು ಸುಖಪಡುವ ಕೆಲ ಸಿಬ್ಬಂದಿ ಹಾಗು ಅಧಿಕಾರಿಗಳ ಕಣ್ಣು ತೆರೆಯಬೇಕಿದೆ. ವಿದ್ಯುತ್ ಕಂಬಗಳು ಉರುಳಿ ಬಿದ್ದು ಆಗಬಾರದಂತಹ ಅನಾಹುತವಾಗುವ ಮುಂಚೆ ಬೆಸ್ಕಾಂ ಸಿಬ್ಬಂದಿಗಳು ಎಚ್ಚೆತ್ತುಕೊಂಡರೆ ಒಳಿತು ಎಂಬುದು ಸಾರ್ವಜನಿಕರ ಅಭಿಪ್ರಾಯ. 

ಪ್ರತಿಷ್ಠಿತ ಮಲ್ಲೇಶ್ವರದ 8ನೇ ಕ್ರಾಸ್‍ನಲ್ಲಿ (ಮಹೇಶ್ವರಿ ದೇವಸ್ಥಾನಕ್ಕೆ ಹೊಂದಿಕೊಂಡಂತೆ) ವಿದ್ಯುತ್ ಕಂಬವೊಂದು ಸಾರ್ವಜನಿಕರು ಹೆಚ್ಚಾಗಿ ಓಡಾಡುವ ಸ್ಥಳದಲ್ಲೇ ಈಗೋ ನಾಳೆಯೋ ಎಂಬಂತೆ ಹಾರಾಡುವಂತೆ ಕಾಣಸಿಗುತ್ತದೆ.

ದಿನನಿತ್ಯ ಎಡಬಿಡದೆ ಸಾರ್ವಜನಿಕರು ತಿರುಗಾಡುವ ಸ್ಥಳವಿದು. ಇಲ್ಲಿನ ಕಂಬದ ಪರಿಸ್ಥಿತಿ ದೇವರಿಗೆ ಪ್ರೇತಿ. ಯಾವಾಗ ಈ ವಿಧ್ಯುತ್ ಕಂಬವು ಬಿದ್ದು ಹೋಗುತ್ತದೆಯೋ ಎನ್ನುವ ಭಯದಲ್ಲಿ ಅಕ್ಕಪಕ್ಕದ ವ್ಯಾಪಾರಿಗಳು ಪತ್ರಿಕಾ ಕಾರ್ಯಾಲಯಕ್ಕೆ ದೂರು ನೀಡಿದ್ದಾರೆ.

ಒಂದಂತು ನಿಜ ಯಾವುದೇ ಸಂದರ್ಭದಲ್ಲಿಯಾದರೂ ಬಿದ್ದಲ್ಲಿ ಅಮಾಯಕ ಸಾರ್ವಜನಿಕರು ಬಲಿಯಾಗುವುದು ನಿಶ್ಚಿತ. ಇನ್ನಾದರು ಈ ಕೂಡಲೇ ನಿದ್ದೆ ಮಾಡುತ್ತಿರುವ / ಕಂಡುಕಾಣದಂತಿರುವ ಸಂಬಂಧಪಟ್ಟ ಬೆಸ್ಕಾಂ ಸಿಬ್ಬಂದಿಗಳಿಗಾಗಲಿ ಅಥವ ಅಧಿಕಾರಿಗಳಾಗಲಿ ಇತ್ತ ಗಮನಹರಿಸುವುದು ಒಳಿತು. ಮುಂದೆ ಆಗುವ ಅನಾಹುತವನ್ನು ತಪ್ಪಿಸಬಹುದೆಂದು ಸಾರ್ವಜನಿಕರ ಅಳಲು. ತಿಂಗಳಾದರೆ ಬೆಸ್ಕಾಂ ಸಿಬ್ಬಂದಿಗಳು ಬಿಲ್ಲು ವಸೂಲಿ ಮಾಡಲು ತೋರುವ ಆಸಕ್ತಿ ಸಾರ್ವಜನಿಕರ ಕ್ಷೇಮದ ಬಗ್ಗೆಯೂ  ಇದ್ದರೆ ಒಳಿತು ಎಂಬುದು ಸಾರ್ವಜನಿಕರ ಅಂಬೋಣ.


Post a Comment

0 Comments

Ad Code

Responsive Advertisement