Ticker

6/recent/ticker-posts

Ad Code

Responsive Advertisement

ಮೇ 30ರಿಂದ ಬಳ್ಳಾರಿಯಲ್ಲಿ ಮಾವು ಮೇಳ

ಬಳ್ಳಾರಿ,ಮೇ 26: ತೋಟಗಾರಿಕೆ ಇಲಾಖೆಯಿಂದ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕಿಸಾನ್ ಭಾಗಿದಾರಿ ಪ್ರಾಥಮಿಕ ಹಮಾರಿ ಕ್ಯಾಂಪೈನ್ ಆಶಯದಂತೆ ತೋಟಗಾರಿಕೆ ಇಲಾಖೆ ಹಾಗೂ ಹಾಪ್ ಕಾಮ್ಸ್ ಸಹಯೋಗದಲ್ಲಿ ಮೇ 30ರಿಂದ ಜೂನ್1ವರೆಗೆ ತಾಲೂಕು ಕಚೇರಿ ಆವರಣದಲ್ಲ್ಲಿ ಮಾವು ಮೇಳ-2022 ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರಾದ ಎಸ್.ಪಿ ಭೋಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ರೈತರು ಬೆಳೆದಿರುವ ಮಾವು ಬೆಳೆಯನ್ನು ಗ್ರಾಹಕರಿಗೆ ನೇರ ಮಾರಾಟ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಈ ಮಾವಿನ ಮೇಳದಲ್ಲಿ ಮಾವಿನ ಹಣ್ಣಿನ ಉತ್ಕøಷ್ಟ ತಳಿಗಳಾದ ಆಲ್ಫಾನ್ಸೋ, ಮಲ್ಲಿಕಾ, ಮಲಗೋವ, ರಸಪುರಿ, ದಶೆಹರಿ, ಬೆನೆಶನ್ ಸೇರಿದಂತೆ ವಿವಿಧ ಬಗೆಯ ಮಾವಿನ ಹಣ್ಣಿನ ತಳಿಗಳನ್ನು ಜಿಲ್ಲೆಯ ಹಣ್ಣಿನ ಗ್ರಾಹಕರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ಕøಷ್ಟ ಗುಣಮಟ್ಟದ ತಳಿಗಳನ್ನು ಪರಿಚಯಿಸಿ ಮತ್ತು ತಲುಪಿಸಲು ಹಾಗೂ ಮಾವಿನ ಹಣ್ಣಿನ ಸ್ವಾದದ ಸವಿಯನ್ನು ಸವಿಯಲು ಅನುವಾಗಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಮೇಳದಲ್ಲಿ ದೇಶಾದ್ಯಂತ ಪ್ರಸಿದ್ಧಿ ಪಡೆದಿರುವ ಹಾಗೂ ಕರ್ನಾಟಕ ರಾಜ್ಯಾದ್ಯಂತ ಪ್ರಚಲಿತದಲ್ಲಿರುವ ಸುಮಾರು 300 ಕ್ಕೂ ಹೆಚ್ಚು ತಳಿಗಳ ಪ್ರದರ್ಶನ,  ರೈತರ ಹಿತದೃಷ್ಟಿಯಿಂದ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ.

ಆದ್ದರಿಂದ ಸದರಿ ಮಾವಿನ ಮೇಳದಲ್ಲಿ ರೈತರು, ಹಣ್ಣಿನ ಗ್ರಾಹಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ  ತೋಟಗಾರಿಕೆ ಇಲಾಖೆ ಕಚೇರಿ ಹಾಗೂ ದೂ.08392-278179ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.



 


Post a Comment

0 Comments

Ad Code

Responsive Advertisement