Ticker

6/recent/ticker-posts

Ad Code

Responsive Advertisement

ಸೇಂಟ್ ಜೋಸೆಫ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ 25 ನೇ ವಾರ್ಷಿಕ ಘಟಿಕೊತ್ಸವ

ಬೆಂಗಳೂರು, ಮೇ 13, (ಕರ್ನಾಟಕ ವಾರ್ತೆ) :ಸೆಂಟ್ ಜೋಸೆಫ್ ಇನ್ಸ್ಟಿಟ್ಯೂಟ್ ಆಫ್ ಮೇನೆಜ್ಮೆಂಟ್ ನ [ಎಸ್.ಜೆ.ಐ.ಎಂ] 25 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ 2022 ರ ಮೇ 14 ರಂದು ಸಂಸ್ಥೆಯ ಲೊಯೊಲಾ ಆಡಿಟೋರಿಯಂನಲ್ಲಿ ನಡೆಯಿತು. ಘಟಿಕೋತ್ಸವ ಉದ್ದೇಶಿಸಿ ಗೌರವಾನ್ವಿತ ರಾಜ್ಯಪಾಲರಾದ  ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿದರು. ಕರ್ನಾಟಕ ಜೆಸ್ಯೂಟ್ ನ ಪ್ರಾಂತೀಯ ಮುಖ್ಯಸ್ಥರಾದ ಡಿಯೋನಿಸಿಯಸ್ ವಾಜ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ. ಮನೋಜ್ ಡಿಸೋಜಾ ಅವರು ಉಪಸ್ಥಿತರಿದ್ದರು.

ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಮಾತನಾಡಿ, ಪಿಜಿಡಿಎಂ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ಎಲ್ಲಾ ಪದವಿಧರರಿಗೆ ಅಭಿನಂದನೆ ಸಲ್ಲಿಸಿದರು ಮತ್ತು ಇವರ ಮುಂದಿನ ಪ್ರಯತ್ನಗಳು ಯಶಸ್ವಿಯಾಗಲಿ ಎಂದು ಹಾರೈಸಿದರು.  

ಬಡತನ, ನಿರುದ್ಯೋಗ, ರೋಗ ನಿರ್ಮೂಲನೆ, ಇಂಧನ, ಜಲ ಸಂರಕ್ಷಣೆ ಮತ್ತಿತರೆ ದೇಶ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸುವತ್ತ ತಮ್ಮ ಗಮನವಿರಲಿ. ಈ ಸವಾಲುಗಳನ್ನು ಗೆಲ್ಲಲು ತಮ್ಮ ಶಿಕ್ಷಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.  

ನಾವೀನ್ಯತೆ, ಪಾರದರ್ಶಕ, ಹೆಚ್ಚು ಯಶಸ್ವಿ ಮತ್ತು ಸಮರ್ಥನೀಯವಾಗಿ ಸಮಸ್ಯೆಗಳ ನಿವಾರಣೆಗೆ ತಮ್ಮ ಶಿಕ್ಷಣವನ್ನು ಬಳಸಿಕೊಳ್ಳುವಂತೆ ಪದವೀಧರ ವಿದ್ಯಾರ್ಥಿಗಳಿಗೆ ಸಲಹೆ ನೀಡಿ ತಮ್ಮ ಘಟಿಕೋತ್ಸವ ಭಾಷಣ ಪೂರ್ಣಗೊಳಿಸಿದರು.  

ಎಸ್.ಜಿ.ಐ.ಎಂ ಕಾಲೇಜಿನ 174 ವಿದ್ಯಾರ್ಥಿಗಳು ಪದವಿ ಪಡೆದಿದ್ದು, ಈ ಪೈಕಿ ಮೊದಲ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ 12 ವಿದ್ಯಾರ್ಥಿಗಳು ರಾಜ್ಯಪಾಲರಿಂದ ಪದಕಗಳನ್ನು ಮತ್ತು ಪ್ರಮಾಣ ಪತ್ರಗಳನ್ನು ಪಡೆದರು.

ಬೆಂಗಳೂರಿನಲ್ಲಿರುವ ಸೆಂಟ್ ಜೋಸೆಫ್ ಇನ್ಸ್ಟಿಟ್ಯೂಟ್ ಆಫ್ ಮೇನೇಜ್ಮೆಂಟ್ ಭಾರತದ ಪ್ರಮುಖ ಬಿ- ಸ್ಕೂಲ್ ಸ್ಥಾನಮಾನ ಪಡೆದುಕೊಂಡಿದ್ದು, ಜಾಗತಿಕವಾಗಿ ಗುಣಮಟ್ಟದ ಶಿಕ್ಷಣಕ್ಕೆ ಖ್ಯಾತಿ ಪಡೆದಿರುವ ಜೆಸ್ಯೂಟ್ಸ್ ಸಂಸ್ಥೆ ಈ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಿದೆ.  ಎಸ್.ಜೆ.ಐ.ಎಂ ಕರ್ನಾಟಕದ ಅತ್ಯಂತ ಪುರಾತನ ಬುಸಿನೆಸ್ ಸ್ಕೂಲ್ ಆಗಿದ್ದು, 50 ವರ್ಷಗಳ ಪರಂಪರೆಯನ್ನು ಹೊಂದಿದೆ. ಸಮಾಜ ಮತ್ತು ಉತ್ತಮ ಪರಿಸರದ ಬಗ್ಗೆ ಕಾಳಜಿ ಹೊಂದಿರುವ, ಸಮಗ್ರತೆ ಮತ್ತು ನೈತಿಕ ನಡಾವಳಿಕೆಯಲ್ಲಿ ನೈತಿಕ ಜವಾಬ್ದಾರಿಯುತ ನಾಯಕರನ್ನು ರೂಪಿಸುವುದು ಸಂಸ್ಥೆಯ ಜವಾಬ್ದಾರಿಯಾಗಿದೆ.


Post a Comment

0 Comments

Ad Code

Responsive Advertisement