ಬಾಗಲಗುಂಟೆ ಠಾಣಾ ಸರಹದ್ದಿನ ಮುನೇಶ್ವರನಗರ, 2ನೇ ಕ್ರಾಸ್, 4ನೇ ಮುಖ್ಯರಸ್ತೆಯಲ್ಲಿನ ತಮ್ಮ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆಂದು ಹೋಗಿದ್ದು, ಅದೇ ದಿನ ಸಂಜೆ ಕೆಲಸ ಮುಗಿಸಿಕೊಂಡು ಬಂದು ನೋಡಲಾಗಿ, ಯಾರೋ ಕಳ್ಳರು ಮನೆಯ ಬಾಗಿಲ ಬೀಗ ಮುರಿದು ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವುವಾಗಿರುವ ಚಿನ್ನಾಭರಣಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಹಗಲು ಕನ್ನಾ ಕಳವು ಪ್ರಕರಣ ದಾಖಲಾಗಿರುತ್ತದೆ.
ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿಯು ಹಳೆಯ ಎಂ.ಓ. ಆಸಾಮಿಯಾಗಿದ್ದು, ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಂಡು ಹಗಲಿನ ವೇಳೆಯಲ್ಲಿ ಬಾಗಿಲ ಬೀಗ ಹೊಡೆದು ಕಳವು ಮಾಡುವ ಪ್ರವೃತ್ತಿ ಹೊಂದಿರುತ್ತಾನೆ. ಆರೋಪಿಯು ಈ ಹಿಂದೆ ರಾಜಗೋಪಾಲನಗರ, ಹೊಳಲ್ಕೆರೆ, ಹೊಸದುರ್ಗ, ಭದ್ರಾವತಿ ಪೊಲೀಸ್ ಠಾಣೆಗಳಲ್ಲಿನ ಹಗಲು ಕನ್ನಾ ಕಳವು ಪ್ರಕರಣಗಳಲ್ಲಿ ಭಾಗಿ ಜೈಲಿಗೆ ಹೋಗಿ ಬಂದಿರುತ್ತಾನೆ. ಆರೋಪಿಯು ಜೈಲಿನಿಂದ ಬಂದ ಮೇಲೂ ಸಹಾ ಕಳವು ಮಾಡುವ ಪ್ರವೃತ್ತಿ ಮುಂದುವರೆಸಿಕೊಂಡು ಬಂದಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ಆರೋಪಿಯ ಬಂಧನದಿಂದ ಬಾಗಲಗುಂಟೆ ಪೊಲೀಸ್ ಠಾಣೆ-2 ಮತ್ತು ಮಾದನಾಯಕನಹಳ್ಳಿ ಪೊಲೀಸ್ ಠಾಣೆ-1 ಹಗಲು ಕನ್ನಾ ಕಳವು ಪ್ರಕರಣ ಸೇರಿದಂತೆ ಒಟ್ಟು 3 ಪ್ರಕರಣಗಳು ಪತ್ತೆಯಾಗಿರುತ್ತವೆ.
ಈ ಮೇಲ್ಕಂಡ ಪ್ರಕರಣಗಳಲ್ಲಿ ಶ್ರೀ ಅರುಣ್ ನಾಗೇಗೌಡ, ಎಸಿಪಿ, ಯಶವಂತಪುರ ಉಪ ವಿಭಾಗದ ರವರ ಮಾರ್ಗದರ್ಶನದಲ್ಲಿ ಶ್ರೀ ಸಂದೀಪ್ ಪಿ ಕೌರಿ, ಪೊಲೀಸ್ ಇನ್ಸ್‍ಪೆಕ್ಟರ್, ಬಾಗಲಗುಂಟೆ ಪೊಲೀಸ್ ಠಾಣೆ, ಪೊಲೀಸ್ ಸಬ್ ಇನ್ಸ್‍ಪೆಕ್ಟರ್‍ಗಳಾದ ಶ್ರೀ ಪ್ರಭು ಕೆ.ಎಲ್., ಶ್ರೀ ನಾಗೇಶ್ ಹೆಚ್.ವಿ., ಹಾಗೂ ಸಿಬ್ಬಂದಿಯವರಾದ ಹೆಚ್.ಸಿ. ಶ್ರೀ ಶ್ರೀನಿವಾಸ್, ಶ್ರೀ ಕುಮಾರಸ್ವಾಮಿ, ಶ್ರೀ ಈಶ್ವರ ಕೆ.ಬಾರ್ಕಿ, ಶ್ರೀ ಬಿ.ಜಿ. ಗಿರೀಶ್ ಮತ್ತು ಪಿ.ಸಿ.ಯವರಾದ ಶ್ರೀ ಮಲ್ಲಿಕಾರ್ಜುನ್ ಬಿರಾದಾರ, ಶ್ರೀ ಪುರುಷೋತ್ತಮ, ಶ್ರೀ ಪ್ರಕಾಶ್ ಕಿಲಾರಿ, ಶ್ರೀ ಮಹಂತಯ್ಯ ಜಿ., ಶ್ರೀ ಈಶ್ವರ ಸಣ್ಣಕ್ಕಿ ಶ್ರೀ ಪುತ್ತೇಶ ಬೆಳ್ಳಂಕಿರವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

0 Comments