ಬಳ್ಳಾರಿ ಏ 25. ಬಳ್ಳಾರಿಯ ಶ್ರೀರಾಂಪುರ್ ಕಾಲೋನಿ ಸರ್ಕಾರಿ ಶಾಲೆಯ ಕ್ರೀಡಾಂಗಣದಲ್ಲಿ 24:04:2022 ರಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ SಖP -2022 ಕ್ರಿಕೆಟ್ ಟ್ರೋಫಿಯನ್ನು ಆಯೋಜಿಸಲಾಗಿತ್ತು, ಹಾಗೂ ಮುಖ್ಯ ಅತಿಥಿಯಾಗಿ ಕೆ.ಪಿ.ಸಿ.ಸಿ.ರಾಜ್ಯ ಪ್ರದಾನ ಕಾರ್ಯದರ್ಶಿಯಾದ ಜೆ.ಎಸ್.ಆಂಜಿನೇಯುಲುರವರನ್ನು ಆಹ್ವಾನಿಸಿ ಇವರ ಸಮ್ಮುಖದಲ್ಲಿ ಫೈನಲ್ ಪಂದ್ಯದಲ್ಲಿ ವಿಜೇತರಾದ ಡಿ.ಕೆ.ಎಸ್.ಟೀಮ್‍ಗೆ ಹಾಗೂ ರನ್ನರ್ ಅಪ್ ಟೀಮ್ ಗೆ ಕೆ.ಪಿ.ಸಿ.ಸಿ.ರಾಜ್ಯ ವಕ್ತಾರರಾದ ವೆಂಕಟೇಶ್ ಹೆಗಡೆ ಟ್ರೋಫಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಬಹುಜನ ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷರಾದ ಬಿ.ನರಸಿಂಹ ಬಾಬು ರವರು ಹಾಗೂ ಶ್ರೀರಾಂಪುರ ಕಾಲೋನಿಯ ದಲಿತ ಮುಖಂಡ ನಾಗರಾಜ್ ರವರು ಹಾಗೂ ಚಂದ್ರ ರವರು ಹಾಗೂ ಹಿರಿಯ ಮುಖಂಡರಾದ ಲಕ್ಷ್ಮಿ ನಾರಾಯಣ ರವರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

0 Comments