Ticker

6/recent/ticker-posts

Ad Code

Responsive Advertisement

Flash News: ಮುಖ್ಯಮಂತ್ರಿ ರವರಿಂದ ವೈಯಕ್ತಿಕ ಮನೆಗಳ ಬಹುಮಹಡಿ ಕಟ್ಟಡ ಉದ್ಘಾಟನೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಲ್ಲೇಶ್ವರಂ ವಾರ್ಡ್ ವ್ಯಾಪ್ತಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ರವರ 131ನೇ ಜನ್ಮ ದಿನಾಚರಣೆ ಮತ್ತು ಪಟೇಲ್ ಭೈರಹನುಮಯ್ಯ ಕೊಳಚೆ ಪ್ರದೇಶದ ಫಲಾನುಭವಿಗಳಿಗೆ ನಿರ್ಮಾಣಗೊಂಡಿರುವ ವೈಯಕ್ತಿಕ ಮನೆಗಳ ಬಹುಮಹಡಿ ಕಟ್ಟಡ ಉದ್ಘಾಟನೆ ಹಾಗೂ ನಿರ್ಮಾಣಗೊಳ್ಳಲಿರುವ ಬಹುಮಹಡಿ ಕಟ್ಟಡ, ಮೈಸೂರು ಲ್ಯಾಂಪ್ಸ್ ಬಳಿ ರೈಲ್ವೆ ಕೆಳಸೇತುವೆ ಕಾಮಗಾರಿ, ಯಶವಂತಪುರ ರೈಲ್ವೆ ಮೇಲುಸೇತುವೆ ಅಗಲೀಕರಣ ಕಾಮಗಾರಿ, ಮಲ್ಲೇಶ್ವರಂ 18ನೇ ಅಡ್ಡ ರಸ್ತೆಯ ನಿರ್ಮಲ ರಾಣಿ ಶಾಲೆಯ ಬಳಿ ರೈಲ್ವೆ ಪಾದಚಾರಿ ಕೆಳಸೇತುವೆ ಕಾಮಗಾರಿಯ ಶಂಕುಸ್ಥಾಪನೆಯನ್ನು ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಎಸ್. ಬೊಮ್ಮಾಯಿ ರವರು ಇಂದು ನೆರವೇರಿಸಿದರು.


ಈ ವೇಳೆ ಸ್ಥಳೀಯ ಶಾಸಕರು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಸಚಿವರಾದ ಡಾ. ಸಿ.ಎನ್.ಅಶ್ವತ್ ನಾರಾಯಣ್, ತೋಟಗಾರಿಕಾ ಸಚಿವರಾದ ಶ್ರೀ ಮುನಿರತ್ನ, ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ ಡಿ.ವಿ.ಸದಾನಂದ ಗೌಡ, ಮಾನ್ಯ ಆಡಳಿತಗಾರರಾದ ಶ್ರೀ ರಾಕೇಶ್ ಸಿಂಗ್, ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತ, ಬೆಂಗಳೂರು ನಗರ ಜಿಲ್ಲಾಧಿಕಾರಿಯಾದ ಶ್ರೀ ಜೆ.ಮಂಜುನಾಥ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Varthajala daily, Bengaluru


Post a Comment

0 Comments

Ad Code

Responsive Advertisement