ಬೆಳಗಾವಿ, ಏ.14: ಬೆಳಗಾವಿಯಲ್ಲಿ ಇಂದು ಸಂತೋಷ್ ಕುಟುಂಬದವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನ್ನಡುತ್ತ ಸಂತೋಷ್ ಸಾವಿನ ಹಿಂದೆ ಮಹಾನಾಯಕನ ಕೈವಾಡ ಇದೆ ಎಂದು ಜಾರಕಿಹೊಳಿ ಹೇಳಿದರು.
ಆ ಮಹಾನಾಯಕ ಯಾರು ಎಂದು ಮಾಧ್ಯಮದವರ ಪ್ರಶ್ನೆಗೆ ಮುಂದಿನ ಸೋಮವಾರ ಎಲ್ಲವನ್ನು ಬಿಚ್ಚುಡುತ್ತೇನೆಂದು ತಿಳಿಸಿದರು. ನನ್ನ ಸಿಡಿ ಕೇಸು ಹಾಗು ಸಂತೋಷನ ಸಾವಿನ ರೂವಾರಿಯೇ ಆ ಮಹಾನಾಯಕ ಎಂದು ಹೇಳಿದರು. ಸಂತೋಷ್ ಸಾವಿನ ಸುತ್ತ ಅನುಮಾನದ ಹುತ್ತ. ಸಂತೋಷ್ ನಮ್ಮ ಕಾರ್ಯಕರ್ತ ಎಂದು ಹೇಳಿದರು. ಪೋಲೀಸ್ ತನಿಖೆಯಿಂದ ನಿಜ ಹೊರಬರಲಿದೆಂದು ಹೇಳಿದರು. ಇದು ಕಾಣದ ಕೈಗಳ ಕೈವಾಡ ಎಂದೇಳಿದರು.
Varthajala daily, Bengaluru

0 Comments