Ticker

6/recent/ticker-posts

Ad Code

Responsive Advertisement

ಆಸಿಡ್ ದಾಳಿ ಆರೋಪಿಯನ್ನು ಬಿಡಬೇಡಿ

ತನ್ನ ಪ್ರೀತಿ ಮಾಡಲಿಲ್ಲ ಎನ್ನುವ ಕಾರಣಕ್ಕೆ ಯುವತಿಯ ಮೇಲೆ ಆಸಿಡ್ ದಾಳಿ ನಡೆಸಿದ ಅಪರಾಧಿಯನ್ನು ಸುಮ್ಮನೆ ಬಿಡಬೇಡಿ ಎಂದು ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಆಗ್ರಹಪಡಿಸಿದರು.ಆಸಿಡ್ ದಾಳಿ ಅತ್ಯಂತ ಅಮಾನವೀಯ. ನಮ್ಮ ತಾಯಿ ಮೇಲೆಯೂ ಇಂಥ ದಾಳಿ ನಡೆದಿತ್ತು. ಆ ನೋವು ಎಂಥದ್ದು ಎಂಬುದು ನನಗೆ ಮತ್ತು ನಮ್ಮ ಕುಟುಂಬಕ್ಕೆ ಗೊತ್ತಿದೆ. ಅಪರಾಧಿಯನ್ನು ಬಂಧಿಸಿ ಕಠಿಣವಾಗಿ ಶಿಕ್ಷೆಗೆ ಗುರಿ ಮಾಡಬೇಕು ಎಂದು ಅವರು ಹೇಳಿದರು.ಮಾನವೀಯ ಸಂಬಂಧಗಳ ಬಗ್ಗೆ ಗೌರವ ಕಡಿಮೆ ಆಗುತ್ತಿದೆ. ಅದಕ್ಕೆ ಕಾರಣಗಳು ಹಲವು. ಆಸಿಡ್ ದಾಳಿಗೆ ಗುರಿಯಾದ ಹೆಣ್ಣುಮಗಳ ಪರಿಸ್ಥಿತಿ ನಿಜಕ್ಕೂ ನೋವಿನ ಸಂಗತಿ. ಮೈಸೂರಿನಲ್ಲಿ ಕುಡಿಯಲಿಕ್ಕೋ ಅಥವಾ ಸ್ಕೂಟರ್ ಖರೀದಿ ಮಾಡಲು ಹಣ ಕೊಡಲಿಲ್ಲ ಅಂತ ಅಕ್ಕನ ಮಗುವನ್ನೇ ಗೋಡೆಗೆ ಎಸೆದು ಸಾಯಿಸಿದ ಘಟನೆ ನಡೆದಿದೆ.‌ ಇಂತಹ ಸಮಾಜವನ್ನು ಕಟ್ಟುತ್ತಿದ್ದಾರೆ, ಆ ಹೆಣ್ಣು ಮಗಳು ಪ್ರೀತಿ ಮಾಡಿಲ್ಲ ಅಂತ ಆಸಿಡ್ ದಾಳಿ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಕಿಡಿಕಾರಿದರು.

Post a Comment

0 Comments

Ad Code

Responsive Advertisement