"ಟಿ ಟಿ ಡಿ ಹೆಚ್ ಡಿ ಪಿ ಪಿ ವತಿಯಿಂದ ಏಪ್ರಿಲ್ 30 ರಂದು ವಯ್ಯಾಲಿಕಾವಲ್ 16ನೇ ಅಡ್ಡರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (TTD) ದಲ್ಲಿ ಏರ್ಪಡಿಸಿದ್ದ "ಊಂಜಲ್ ಸಂಗೀತೋತ್ಸವ" ಗಾಯನ ಕಾರ್ಯಕ್ರಮದಲ್ಲಿ, ವಿದುಷಿ ಶ್ರೀಮತಿ ಮಾಲಾ ವೆಂಕಟೇಶ್ ಮತ್ತು ಇವರ ಶಿಷ್ಯೆ ಕು|| ಸ್ಫೂರ್ತಿ ಗುರುಪ್ರಸಾದ್ ಇವರುಗಳು ಅನ್ನಮಾಚಾರ್ಯರ ಕೀರ್ತನೆಗಳನ್ನು ಹಾಗೂ ಹರಿದಾಸರ ಪದಗಳನ್ನು ಪ್ರಸ್ತುತ ಪಡಿಸಿದರು.
ವಾದ್ಯ ಸಹಕಾರದಲ್ಲಿ, ಶ್ರೀ ಅನಿರುದ್ಧ ಶ್ರೀಧರ್ ಕೀ-ಬೋರ್ಡ್ ನಲ್ಲಿ, ಶ್ರೀ ಕೃತಿಕ್ ಕಾರಂತ್ ತಬಲಾದಲ್ಲಿ ಸಾಥ್ ನೀಡಿದರು.

0 Comments