ಮಾಹಿತಿ ಹಕ್ಕು ಕಾರ್ಯಕರ್ತ
ಡಾ. ಕೋಡೂರ್ ವೆಂಕಟೇಶ್ ಹಾಗೂ
ಶ್ರೀ ವೀರೇಶ್ ಬೆಳ್ಳೂರು
“ಜೆ.ಎಂ. ರಾಜಶೇಖರ ದತ್ತಿ ಪ್ರಶಸ್ತಿ”
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಿನಾಂಕ 06-04-2022 ರಂದು ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ “ಮಾಹಿತಿ ಹಕ್ಕು ತಜ್ಞ ಜೆ.ಎಂ. ರಾಜಶೇಖರ ದತ್ತಿ ಪ್ರಶಸ್ತಿ”ಗೆ 2021ರ ಸಾಲಿಗೆ ಮಾಹಿತಿ ಹಕ್ಕು ಕಾರ್ಯಕರ್ತರಾದ ಡಾ. ಕೋಡೂರ್ ವೆಂಕಟೇಶ್ ಅವರನ್ನು ಹಾಗೂ 2022ರ ಸಾಲಿಗೆ ಮಾಹಿತಿ ಹಕ್ಕು ಕಾರ್ಯಕರ್ತರಾದ ಶ್ರೀ ವೀರೇಶ್ ಬೆಳ್ಳೂರು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರಶಸ್ತಿಯ ಮೊತ್ತ ತಲಾ ರೂ. 5,000 (ಐದು ಸಾವಿರ ಮಾತ್ರ) ನಗದು. ಇದರ ಜೊತೆಗೆ ಸ್ಮರಣಿಕೆೆ ಹಾಗೂ ಫಲ ತಾಂಬೂಲಗಳನ್ನೂ ಒಳಗೊಂಡಿರುತ್ತದೆ.
ಬೆಂಗಳೂರಿನವರಾದ ಡಾ. ಕೋಡೂರ್ ವೆಂಕಟೇಶ್‌ರವರು ಒಬ್ಬ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತರು, ಶಿಕ್ಷಣ ತಜ್ಞರು ಹಾಗೂ ಕಾರ್ಯತಂತ್ರ ವಿಶ್ಲೇಷಕರು. ಮಾಹಿತಿ ಹಕ್ಕು ಕಾರ್ಯಕರ್ತರಾದ ಇವರೊಬ್ಬ ಚುರುಕಾದ ಮತ್ತು ಪ್ರಬುದ್ಧ ಶಿಕ್ಷಣ ತಜ್ಞರಾಗಿದ್ದಾರೆ. ಅಂತೆಯೇ ಸಂಶೋಧಕರು, ಪುಸ್ತಕಗಳ ಲೇಖಕರು ಕೂಡ. ಸಾಮಾಜಿಕ ಚಟುವಟಿಕೆಗಳಲ್ಲಿ, ಮಾನವ ಹಕ್ಕುಗಳ ವಕೀಲರಾಗಿ, ಪ್ರೇರಕರಾಗಿ, ಕಾರ್ಯತಂತ್ರದ ವ್ಯವಹಾರಗಳ ವಿಶ್ಲೇಷಕರಾಗಿ ಹಾಗೂ ಕಾನೂನು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಭಾಷೆಗಳಲ್ಲಿ ಅನೇಕ ಪುಸ್ತಕಗಳನ್ನು ಬರೆದ ಲೇಖಕರು.
ಇವರಿಗೆ ಸಂದ ಪ್ರಶಸ್ತಿಗಳು : ಕರ್ನಾಟಕ ರಾಜ್ಯ ಪ್ರಶಸ್ತಿ, ಆಲ್ಬರ್ಟ್ ನೆಲ್ಸನ್ ಜೀವಮಾನ ಸಾಧನೆ ಪ್ರಶಸ್ತಿ, 12 ಸ್ವರ್ಣ ಮೆಡಲ್‌ಗಳ ಪುರಸ್ಕಾರ, ಉದ್ಯೋಗ ರತ್ನ, ಇಂದಿರಾ ಪ್ರಿಯದರ್ಶಿನಿ, ಮದರ್ ತೆರೆಸಾ ಇನ್ನು ಪ್ರಶಸ್ತಿಗಳು ಶ್ರೀಯುತರು ಭಾಜನರಾಗಿದ್ದಾರೆ.
* * * *
ಶ್ರೀ ವೀರೇಶ್ ಬೆಳ್ಳೂರು ಅವರು ಮಾಹಿತಿ ಹಕ್ಕು ಅಧ್ಯಯನ ಕೇಂದ್ರ, ಬೆಂಗಳೂರು ಇದರ ಟ್ರಸ್ಟಿಯಾಗಿ ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ, ಕೆನರಾ ಬ್ಯಾಂಕ್ ಹಾಗೂ ಅನೇಕ ಸ್ವಯಂ ಸೇವಾ ಸಂಸ್ಥೆಗಳಲ್ಲಿ ನಾಲ್ಕು ದಶಕಗಳಿಗೂ ಹೆಚ್ಚಿನ ಕಾಲ ಸೇವೆ ಸಲ್ಲಿಸಿರುವ ಇವರು ಕರ್ನಾಟಕ ರಾಜ್ಯ 2002ರಲ್ಲಿ ಜಾರಿಗೊಳಿಸಿದ ಕರ್ನಾಟಕ ಮಾಹಿತಿ ಹಕ್ಕು ಕಾನೂನು ಇದರ ಅನುಷ್ಠಾನ ಹಾಗೂ ಜಾರಿಗಾಗಿ ಶ್ರಮಿಸಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮ 2005 ಜಾರಿಗೊಂಡ ನಂತರ ರಾಜ್ಯಾದ್ಯಂತ ಪ್ರವಾಸ ಮಾಡಿ ಅನೇಕ ತರಬೇತಿ ಶಿಬಿರಗಳಲ್ಲಿ ಏರ್ಪಡಿಸಿ ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ತರಬೇತಿ ನೀಡಿದ್ದಾರೆ. ಆ್ಯಕ್ಟಿವ್ ಸಿಟಿಜೆನ್ ನೆಟ್‌ವರ್ಕ್ ಇದರ ಟ್ರಸ್ಟಿಯಾಗಿಯೂ ಕಾರ್ಯನಿರ್ವಹಿಸುತ್ತಿರುವ ಇವರು ಪರಿಸರ ಸಂರಕ್ಷಣೆಗೆ ಸಂಬAಧಿಸಿದ ಹಲವಾರು ವರದಿಗಳನ್ನು ಪ್ರಕಟಿಸಿ ಸಾರ್ವಜನಿಕರಲ್ಲಿ ಸಾಮಾಜಿಕ ಅರಿವನ್ನು ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಮಾಹಿತಿಹಕ್ಕಿನ ಅರಿವನ್ನು ಮೂಡಿಸುವ ಸಮ್ಮೇಳನಗಳು, ವಿಚಾರಗೋಷ್ಠಿಗಳು, ಕಾರ್ಯಾಗಾರಗಳು ಹಾಗೂ ತರಬೇತಿ ಶಿಬಿರಗಳನ್ನು ನಡೆಸಿರುವ ಇವರನ್ನು ರಾಜ್ಯ ಸರ್ಕಾರ “ರಾಜ್ಯ ಸಂಪನ್ಮೂಲ ವ್ಯಕ್ತಿಯನ್ನಾಗಿ” ಗುರುತಿಸಿದೆ. ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಪ್ರಕಟಣೆಗಳು : ಮಾಹಿತಿಹಕ್ಕು ಮಾರ್ಗದರ್ಶಿ, ಮಾಹಿತಿ ಹಕ್ಕು ಹಾಗೂ ವೈಯಕ್ತಿಕ ಮಾಹಿತಿ, ಮೇಲ್ವನವಿ ಸಲ್ಲಿಸುವುದು ಹೇಗೆ, ಮಾಹಿತಿ ಹಕ್ಕು ಹಾಗೂ ಪೊಲೀಸ್, ಮಾಹಿತಿಹಕ್ಕು ಅಧಿನಿಯಮ 2005 ಹಾಗೂ ನಿಯಮಗಳು, ಸೆಕ್ಷನ್ 4 ಪ್ರಕಟಿಸುವುದು ಹೇಗೆ, ಆರ್.ಟಿ.ಐ. ಮತ್ತು ಸಬ್ ರಿಜಿಸ್ಟಾರ್.... ಮುಂತಾದ ಪುಸ್ತಕಗಳನ್ನು ಸಾರ್ವಜನಿಕರಿಗಾಗಿ ಪ್ರಕಟಿಸಿರುತ್ತಾರೆ
ಮಾಹಿತಿ ಹಕ್ಕು ತಜ್ಞ ಜೆ.ಎಂ. ರಾಜಶೇಖರ ದತ್ತಿ ಪ್ರಶಸ್ತಿ ಆಯ್ಕೆ ಸಮಿತಿಯ ಸಭೆಯಲ್ಲಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ ರಾಮಲಿಂಗಶೆಟ್ಟಿ, ಗೌರವ ಕೋಶಾಧ್ಯಕ್ಷರಾದ ಶ್ರೀ ಬಿ.ಎಂ. ಪಟೇಲ್‌ಪಾಂಡು ಅವರುಗಳು ಉಪಸ್ಥಿತರಿದ್ದರು.
0 Comments