Ticker

6/recent/ticker-posts

Ad Code

Responsive Advertisement

ಮೂಲಭೂತ ಸೌಕರ್ಯ ಇಲ್ಲದ ನಾಗರಬಾವಿ ಬಸ್ ನಿಲ್ದಾಣ

"ಮೂಲಭೂತ ಸೌಕರ್ಯ  ಇಲ್ಲದ   ನಾಗರಬಾವಿ  ಬಸ್ ನಿಲ್ದಾಣ " - ಬಸ್ ನಿಲ್ದಾಣ ನಾಮಫಲಕದ ಮುಂಭಾಗದಲ್ಲಿ ರಾಶಿ ರಾಶಿ ---- ಆರಕ್ಷಕ ಪಡೆಯ ಬ್ಯಾರಿಕೇಡ್-----?? ಇತ್ತ ನೋಡಿ ಕ್ಷೇತ್ರದ ಶಾಸಕರೇ ??





ಬೆಂಗಳೂರು : ಗೋವಿಂದರಾಜ ನಗರ ವಿಧಾನ ಸಭಾ  ಕ್ಷೇತ್ರದ   ಹೊರವರ್ತುಲ  ರಸ್ತೆ  ನಾಗರ ಬಾವಿ   ಬಸ್ ನಿಲ್ದಾಣ ನಾಮಫಲಕದ ಮುಂಭಾಗದಲ್ಲಿ ರಾಶಿ ರಾಶಿ ---- ಆರಕ್ಷಕ ಪಡೆಯ ಬ್ಯಾರಿಕೇಡ್   ಅನಾಥ ಶವದ ರೀತಿಯಲ್ಲಿ ಬ್ಯಾರಿಕೇಡ್ ಮಲಗಿದ್ರೆ ಬಸ್ ನಿಲ್ದಾಣ ದಲ್ಲಿ ಬಸ್ ಇಳಿದು ಬರುವ ಜನರ ಪರದಾಟ ಒಂದೆಡೆ ಆದರೆ ಮತ್ತೊಂದೆಡೆ ಬಸ್ ಹತ್ತುವವರು ನಿಲ್ಲಲು ಜಾಗ ವಿಲ್ಲದೆ ಸರ್ಕಸ್ ಮಾಡುತ್ತಾ ಇರುವ ದೃಶ್ಯ ಪ್ರತಿ ನಿತ್ಯ ನೋಡಲು ಸಿಗುವ ತಾಣವೇ ಗೋವಿಂದರಾಜ ನಗರ ವಿಧಾನ ಸಭಾ  ಕ್ಷೇತ್ರದ   ಹೊರವರ್ತುಲ  ರಸ್ತೆ  ನಾಗರ ಬಾವಿ  ಬಸ್ ನಿಲ್ದಾಣ !! ,

ಗೋವಿಂದರಾಜ ನಗರ ವಿಧಾನ ಸಭಾ  ಕ್ಷೇತ್ರದ   ಹೊರವರ್ತುಲ  ರಸ್ತೆ  ನಾಗರ ಬಾವಿ  ಬಸ್ ನಿಲ್ದಾಣ ದಲ್ಲಿ  ನಿಮ್ಮಗೆ  ಉಚಿತವಾಗಿ  ಕಸ -  ಕಡ್ಡಿಗಳು  ಹಾಗು   ನೀರು  ಕುಡಿದು  ಎಸೆದ  ಪ್ಲಾಸ್ಟಿಕ್  ಬಾಟಲಿಗಳು  ಹಾಗು ಒಡೆದು ಎಸೆದ ದೊಡ್ಡ ದೊಡ್ಡ ಗಾತ್ರದ  ಸಿಮೆಂಟ್ ನ  ತುಂಡು  ಅವೆಲ್ಲರ  ನಡುವೆ   ದಟ್ಟಣೆಯ  ವಾಹನ  ಸಂಚಾರ  ಇರುವ  ನಗರದ  ಪ್ರಮುಖ  ರಸ್ತೆ  ಇದಾಗಿದೆ  !! ಆದರೆ  ಬಿಬಿ,ಎಂ,ಪಿ  ಮಾತ್ರ   ಸಮಸ್ಯೆ ಆಗರವಾದ  ನಾಗರಬಾವಿ ಯ ಬಸ್ ನಿಲ್ದಾಣದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುವ ಪ್ರಮುಖ ಅಂಶ ಎಂದರೆ ತಪ್ಪಾಗಲಾರದು ??

ನಾಗರಿಕರಿಗೆ ಬೇಕಾಗುವ " ಮೂಲಭೂತ ಸೌಕರ್ಯ  ಇಲ್ಲದ   ನಾಗರ ಬಾವಿ  ಬಸ್ ನಿಲ್ದಾಣ " ಎಂದರೆ ಪ್ರಾಯಶಃ ತಪ್ಪಾಗಲಾರದು ? ಬಸ್ ಗಾಗಿ ಕಾದು ನಿಲ್ಲುವ ಪ್ರಯಾಣಿಕರು ಹಾಗು ವಿದ್ಯಾರ್ಥಿ ಗಳು , ವಿದ್ಯಾರ್ಥಿನಿಯರು , ಮಹಿಳೆಯರು , ಕೆಲಸಕ್ಕೆ ಹೋಗುವ ನೌಕರರು , ಕೂಲಿ ಕಾರ್ಮಿಕರು ಬಿಸಿಲಿನ ಬೇಗೆಗೆ ಬಿ,ಬಿ,ಎಂ.ಪಿಗೆ ಹಾಗು ರಾಜ್ಯ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತ ನಿಂತಿರುವ ದೃಶ್ಯ ಸಾಮಾನ್ಯ ಪ್ರತಿನಿತ್ಯ!!

ಮಳೆ ಬಂದರೆ ಬಸ್ ಕಾಯುತ್ತಾ ನಿಂತ ಜನರಿಗೆ ಉಚಿತ ಸಾನ್ನ ಏಕೆಂದರೇ ಅಲ್ಲಿ ಜನ ಬಸ್ ಗೆ ಕಾಯುತ್ತ ನಿಂತಾಗ ಮಳೆ ಬಂದರೆ ಅಲ್ಲಿ ಯಾವುದೇ ಮೇಲ್ಚಾವಣಿ ಇರುವ ಬಸ್ ನಿಲ್ದಾಣ ಇಲ್ಲ , ಇಲ್ಲಿಂದ ಅಂಬೇಡ್ಕರ್ ಕಾಲೇಜ್ ಹಾಗು ಮಲ್ಲತ್ ಹಳ್ಳಿ , ಹಲವೂ ಕಡೆ ಬಸ್ ಸಂಪರ್ಕ ಕಲ್ಪಿಸುವ ತಾಣ ಇದು ಆದರೆ ಇಲ್ಲಿ ಸರಿಯಾದ ಬಸ್ ನಿಲ್ದಾಣ ಇಲ್ಲ ಹಾಗೆಯೇ , ಶೌಚಾಲಯ ಇಲ್ಲ , ಕುಡಿಯುವ ನೀರಿನ ವ್ಯವಸ್ಥೆ ಇಲ್ಲ , ರಸ್ತೆ ತುಂಬಾ ಕಸದ ರಾಶಿ ಹಾಗೆಯೇ ಬಸ್  ನಿಲ್ದಾಣದ    ಬಳಿ   ಜನ   ನಿಲ್ಲುವ  ಸ್ಥಳದಲ್ಲಿ  ಒಂದು  ವಿದ್ಯುತ್   ಮಿಟರ್  ಇದ್ದು  ಅದರ  ಡಬ್ಬಿ  ತುಕ್ಕು  ಹಿಡಿದು  ಇದ್ದು  , ಆ ಡಬ್ಬಿ   ತೆರೆದ  ಸ್ಥಿತಿಯಲ್ಲಿದ್ದು  , ಬಸ್  ಕಾಯುವ  ಪ್ರಯಾಣಿಕರು     ಅದರ  ಬಳಿಯೇ  ನಿಂತು  ಬಸ್  ಕಾಯುತ್ತ  ನಿಲ್ಲುವ  ಜನರಿಗೆ  ಜೋರಾಗಿ  ಮಳೆ  ಬಂದಾಗ  ಅಲ್ಲಿ  ವಿದ್ಯುತ್   ಹರಿದರೆ   ಜನರ  ಪ್ರಾಣ ಕ್ಕೆ  ಅಪಾಯ  ಕಟ್ಟಿಟ್ಟ  ಬುತ್ತಿ  - ಹಾಗು ಅಲ್ಲಿಯೇ  ಸ್ವಲ್ಪ  ದೊರದಲ್ಲಿ  ಇರುವ  ವಿದ್ಯುತ್ ಕಂಬದ  ಬುಡದಲ್ಲಿ  ಹಾಕಿರುವ  ಸಿಮೆಂಟ್  ಬಿರುಕು  ಬಿಟ್ಟಿದ್ದ್ದೆ  -    ಆದರೆ  ಇದಕ್ಕೆ   ಸಂಬಂಧಪಟ್ಟ  ಅಧಿಕಾರಿಗಳು  ಮಾತ್ರ  ನಿದ್ದೆ ಗೆ  ಜಾರಿದ್ದಾರೆಯೇ  ಎಂಬ  ಯಕ್ಷ    ಪ್ರಶ್ನೆ  ಕಾಡುತ್ತಿದೆ  ಹಾಗೆಯೇ   ಎಲ್ಲೇ ನೋಡಿದರು  ಈಗ ಪರ್ಸೆಂಟೇಜ್   ವ್ಯವಹಾರ  ಜೋರಾಗಿಯೇ  ಇದೆ ... ಕಳೆದ 25 ವ ರುಷಗಳಿಂದ  ಸಾಗಿದೆ  ಎನ್ನುತ್ತಾರೆ  ವಾಟಾಳ್  ನಾಗರಾಜ್  !!
ಒಟ್ಟಿನಲ್ಲಿ  ಜನ  ಸಾಮಾನ್ಯರ  ಗೋಳು  ಕೇಳುವವರು  ಯಾರು  ಎಂಬುದು  ಮಿಲಿಯನ್  ಡಾಲರ್  ಪ್ರಶ್ನೆ 
" ಮತದಾರರು ಬೇಕಲ್ಲವೇ ನಿಮ್ಮಗೆ " ?? 
ಗೋವಿಂದರಾಜ ನಗರ ವಿಧಾನ ಸಭಾ  ಕ್ಷೇತ್ರದ   ಹೊರವರ್ತುಲ  ರಸ್ತೆ  ಕಡೆ  ನೋಡಿ ಕ್ಷೇತ್ರದ ಶಾಸಕರೇ ??     ಸಮಸ್ಯೆಗಳ  ಆಗರವಾಗಿರುವ  ಕ್ಷೇತ್ರದ  ಸಮಸ್ಯೆ  ಬಗೆಹರಿಸಿ ... ಹೆಚ್ಚಿನ ವಾಹನ  ದಟ್ಟಣೆಯಿರುವ  ಈ ಸ್ಥಳದಲ್ಲಿ  ನಾಗರಿಕರಿಗೆ  ಅನುಕೊಲ ವಾಗುವಂತಹ  ಕ್ರಮ  ತೆಗೆದುಕೊಳ್ಳಿ ... ಏಕೆಂದರೆ  ಈ ಬಸ್ ನಿಲ್ದಾಣ ದಲ್ಲಿ ಬಸ್ ಹತ್ತಲು ಹಾಗು ಇಳಿಯಲು ಹೆಚ್ಚು ಕಾಲೇಜು ವಿದ್ಯಾರ್ಥಿ ಗಳು ಹಾಗು ಶಾಲಾ ಮಕ್ಕಳು ಬಸ್ ಕಾಯುತ್ತಾ ನಿಂತಿರುತ್ತಾ ರೇ ... ಭವ್ಯ ಭಾರತದ ಮುಂದಿನ ಪ್ರಜೆಗಳು ಅವರು ಹಾಗು ನಿಮ್ಮ ಮುಂದಿನ ಚುನಾವಣೆಗೆ ಮತ ಹಾಕಲು ಮತದಾರರು ಬೇಕಲ್ಲವೇ ನಿಮ್ಮಗೆ ಅದಕ್ಕೆ ???

ಇನ್ನಾದರೂ ಈ ಸಮಸ್ಯೆ ಗೆ ಬಿ.ಬಿ.ಎಂ.ಪಿ ಹಾಗು ರಾಜ್ಯ ಸರ್ಕಾರ ಕ್ರಮಕೈಗೊಳ್ಳುವ ಮನಸ್ಸು ಮಾಡುವುದೇ ಎಂದು ಕಾದು ನೋಡಬೇಕಿದೆ !!


ಚಿತ್ರ : ವರದಿ : ತೀರ್ಥಹಳ್ಳಿ ಅನಂತ ಕಲ್ಲಾಪುರ


Post a Comment

0 Comments

Ad Code

Responsive Advertisement