Ticker

6/recent/ticker-posts

Ad Code

Responsive Advertisement

ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ

ಬೆಂಗಳೂರು, ಏಪ್ರಿಲ್ 26, (ಕರ್ನಾಟಕ ವಾರ್ತೆ) : ಬೆಂಗಳೂರು ನಗರ ಜಿಲ್ಲೆಯ ಬಾಗಲೂರು ಜವಾಹರ್ ನವೋದಯ ವಿದ್ಯಾಲಯದ 6ನೇ ತರಗತಿಗೆ 2022-23 ನೇ ಸಾಲಿನ ಪ್ರವೇಶ ಪರೀಕ್ಷೆಯನ್ನು ಏಪ್ರಿಲ್ 30, 2022ರ ಶನಿವಾರದಂದು ಸಂಬಂಧಿಸಿದ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು. ಈಗಾಗಲೇ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು ನವೋದಯ ವಿದ್ಯಾಲಯ ಸಮಿತಿಯ ವೆಬ್‍ಸೈಟ್  www.navodaya.gov.in    ನಿಂದ ಡೌನ್ ಲೋಡ್ ಮಾಡಿಕೊಂಡು ಪರೀಕ್ಷೆಯ ದಿನ ಪರೀಕ್ಷಾ ಕೇಂದ್ರಗಳಿಗೆ ತೆಗೆದುಕೊಂಡು ಹೋಗಬೇಕು. ಪ್ರವೇಶ ಪತ್ರದಲ್ಲಿ ಸೂಚಿಸಿರುವಂತೆ ವಿದ್ಯಾರ್ಥಿಗಳು ಕೋವಿಡ್ ನಿಯಮಗಳನ್ನು ಪಾಲಿಸಬೇಕು.   ಹೆಚ್ಚಿನ ಮಾಹಿತಿಗಾಗಿ ಜವಾಹರ್ ನವೋದಯ ವಿದ್ಯಾಲಯದ ದೂರವಾಣಿ ಸಂಖ್ಯೆ 08029900456 ಗೆ ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0 Comments

Ad Code

Responsive Advertisement