Ticker

6/recent/ticker-posts

Ad Code

Responsive Advertisement

ಬಹುಶಿಸ್ತೀಯ ಸಂಶೋಧನೆಗೆ ಒತ್ತು ನೀಡಿರಿ; ಪ್ರೊ. ಆಲಗೂರ

ಬಳ್ಳಾರಿ ಏ 28. ಸಂಶೋಧನೆಯೂ ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ ಸಮಾಜದ ಬೆಳವಣಿಗೆಗಾಗಿ ಉಪಯುಕ್ತವಾಗಬೇಕು ಎಂದು ವಿವಿ ಕುಲಪತಿಗಳಾದ ಪ್ರೊ. ಸಿದ್ದು ಪಿ ಆಲಗೂರ ಹೇಳಿದರು. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ  ಗುರುವಾರ ರಸಾಯನಶಾಸ್ತ್ರ ವಿಭಾಗ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಆಕಾಡೆಮಿ ಬೆಂಗಳೂರು ಜಂಟಿಯಾಗಿ ಆಯೋಜಿಸಿರುವ ಎರಡು ದಿನಗಳ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವವಿದ್ಯಾಲಯದ ಆವರಣದಲ್ಲಿ ಸುಮಾರು 3.25 ಕೋಟಿ ವೆಚ್ಚದಲ್ಲಿ ಬಹುಶಿಸ್ತೀಯ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರ ಸ್ಥಾಪನೆಯಾಗಲಿದೆ. ಇದರಿಂದ ಸಂಶೋಧನಾ ಚಟುವಟಿಕೆಗಳು ಕಾರ್ಯನಿರತವಾಗಿರಲಿವೆ. ಈಗಿನ ನೂತನ ಶಿಕ್ಷಣ ನೀತಿಯಲ್ಲಿ ಬಹುಶಿಸ್ತೀಯ ಸಂಶೋಧನೆಗೆ ಹೆಚ್ಚು ಒತ್ತು ನೀಡಲಾಗಿದೆ. ಆದ್ದರಿಂದ ಸಂಶೋಧನಾ ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ಸಂಶೋಧನೆಯಲ್ಲಿ ನಿರತವಾಗಿರದೆ ಬಹುಶಿಸ್ತಿಯ ಸಂಶೋಧನೆಗೆಳಿಗೆ ಒತ್ತು ನೀಡಬೇಕು. ಇದರಿಂದ ಸಮಾಜ, ಜನಾಂಗ ಹಾಗೂ ದೇಶದ ಬೆಳವಣಿಗೆಗೆ ಸಂಶೋಧನೆ ಪೂರಕವಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ರಸಾಯನಶಾಸ್ತ್ರ ಅಧ್ಯಯನ ವಿಭಾಗವು ಕಳೆದ 9 ವರ್ಷಗಳ ಕಾಲಾವಧಿಯಲ್ಲಿ ಸರಿಸುಮಾರು 2.5 ಕೋಟಿ ಅನುದಾನವನ್ನು ವಿವಿಧ ಸಂಸ್ಥೆಗಳಿಂದ ಪಡೆದು, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಮಾಡುವಲ್ಲಿ ಉಪಯುಕ್ತ ಕಾರ್ಯಕ್ರಮಗಳನ್ನು ಕಾಲಾನುಕ್ರಮ ಆಯೋಜಿಸುತ್ತಿದೆ ಎಂದು ಹೇಳುತ್ತ ವಿಭಾಗದ ಒಟ್ಟಾರೆ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿರುವ ಯುಜಿಸಿ-ಡಿಎಇ, ಸಿಎಸ್‍ಆರ್ ಮುಂಬೈನ ಮಾಜಿ ಅಧ್ಯಕ್ಷರಾದ ಪ್ರೊ. ವಾಸುದೇವ ಸಿರುಗುರಿ ಮಾತನಾಡಿ, ರಸಾಯನಶಾಸ್ತ್ರ ಸಂಶೋಧನೆಯಲ್ಲಿ ವಿಪುಲ ಅವಕಾಶಗಳಿವೆ. ಕೆಮಿಕಲ್ ಸೈನ್ಸ್‍ನಲ್ಲಿ ಸಾಕಷ್ಟು ಸಂಶೋಧನಾತ್ಮಕ ಆಯಾಮಗಳಿವೆ ಅವುಗಳ ಮಾಹಿತಿಯನ್ನು ಇಲ್ಲಿ ಆಯೋಜಿಸಿರುವ ವಿಶೇಷ ಉಪನ್ಯಾಸ ಮಾಲಿಕೆಯಿಂದ ತಿಳಿದುಕೊಂಡು ಈ ಭಾಗದ ವಿದ್ಯಾರ್ಥಿಗಳು ನೂತನ ಸಂಶೋಧನೆಯೆಡೆಗೆ ಸಾಗಲಿ ಎಂದರು. ಇದೇ ಸಂದರ್ಭದಲ್ಲಿ ಸೇವಾ ನಿವೃತ್ತಿಗೊಳ್ಳುತ್ತಿರುವ ಅನ್ವಯಿಕ ವಿಜ್ಞಾನ ನಿಕಾಯದ ಡೀನರು ಹಾಗೂ ಔದ್ಯೋಗಿಕ ರಸಾಯನಶಾಸ್ತ್ರದ ಪ್ರಾಧ್ಯಾಪಕರಾದ ಪ್ರೊ ಕೆ.ಎಚ್. ಶಿವಪ್ರಸಾದ್ ಇವರು ತಮ್ಮ ಸೇವಾನುಭವದ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು. ಬಳಿಕ ವೇದಿಕೆಯಲ್ಲಿದ್ದ ಗಣ್ಯರು ಅವರನ್ನು ಸನ್ಮಾನಿಸಿದರು.ಈ ಕಾರ್ಯಕ್ರಮವನ್ನು ಅಶ್ವಿನಿ ದಿಲೀಪ್ ನಿರೂಪಿಸಿದರು. ಪ್ರೊ. ಕೆ. ಎಸ್. ಲೋಕೇಶ್ ಅತಿಥಿಗಳನ್ನು ಸ್ವಾಗತಿಸಿದರು.  ಡಾ. ಎಂ. ಕೆ. ಅಂಶುಮಾಲಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಯ ಕುಲಸಚಿವರಾದ ಪ್ರೊ. ಎಸ್ ಸಿ ಪಾಟೀಲ್, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಅರುಣ ಕುಮಾರ ಲಗಶೆಟ್ಟಿ, ಪ್ರೊ. ಕೆ. ಎಸ್. ಲೋಕೇಶ್, ಹಾಗೂ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.  


Post a Comment

0 Comments

Ad Code

Responsive Advertisement