Ticker

6/recent/ticker-posts

Ad Code

Responsive Advertisement

ಶಾಸಕ ನಾಗೇಂದ್ರ ರಂಜಾನ್ ಪ್ರಯುಕ್ತ ಅದ್ಧೂರಿ ಇಫ್ತಾರ್ ಕೂಟ ಆಯೋಜನೆ

ಬಳ್ಳಾರಿ ಏ 28. ಬಳ್ಳಾರಿ ನಗರದ ಕೌಲ್ ಬಜಾರ್ ವ್ಯಾಪ್ತಿಯಲ್ಲಿ ಬರುವ ರೇಡಿಯೋ ಪಾರ್ಕ್ ಬಳಿಯ ಸೇಂಟ್ ಅಂಥೋನಿ ಹಾಲ್‍ನಲ್ಲಿ ದಿನಾಂಕ 27.04.2022 ಬುಧವಾರ ಸಂಜೆ 6.00 ಗಂಟೆಗೆ ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಬಿ.ನಾಗೇಂದ್ರ ರವರು ಆಯೋಜಿಸಿದ್ದ ಸೌಹಾರ್ದ ಸಮಾರಂಭ ಹಾಗೂ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಸರ್ವಧರ್ಮದ ಗುರುಗಳು, ಎಲ್ಲಾ ಮುಸ್ಲಿಂ ಭಾಂದವರು ಸುಮಾರು 4 ಸಾವಿರಕ್ಕಿಂತ ಅಧಿಕ ಜನರು ಭಾಗವಹಿಸಿದ್ದರು.

 ಬಳ್ಳಾರಿಯ ರೇಡಿಯೋ ಪಾರ್ಕ್ ಬಳಿಯ ಸೇಂಟ್ ಅಂಥೋನಿ ಹಾಲ್‍ನಲ್ಲಿ ಶಾಸಕ ನಾಗೇಂದ್ರ ಅವರು ಆಯೋಜಿಸಿದ್ದ ಇಫ್ತಾರ್ ಔತಣಕೂಟವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಕೊನೆಯ ಉಸಿರು ಇರುವವರೆಗೂ ಮುಸ್ಲಿಂ ಸೋದರರ ಜೊತೆಗೆ ನಾವು ಇರುತ್ತೇವೆ ಎಂಬುದನ್ನು ಸಾಬೀತು ಮಾಡುವುದಕ್ಕಾಗಿಯೇ ಇಂದು ನಾವು ಇಫ್ತಾರ್ ಕೂಟಕ್ಕೆ ಬಂದಿದ್ದೇವೆ. ನಮ್ಮ ಪ್ರಾಣ ಹೋದರೂ ಕೂಡ ನಾವು ಮುಸ್ಲಿಮರ ಜೊತೆಗೆ ನಿಲ್ಲುತ್ತೇವೆ. 

ನಿಮ್ಮ ಕಷ್ಟದಲ್ಲಿ ನಾವು ಬರುತ್ತೇವೆ. ನಮ್ಮ ಕಷ್ಟದಲ್ಲಿ ನೀವು ಬರುತ್ತೀರಿ, ನೀವು ಅಲ್ಲಾಹನನ್ನು ಸೇರಿಕೊಂಡಾಗ ನಾವು ಬರುತ್ತೇವೆ, ನಾವು ಭಗವಂತನನ್ನು ಸೇರಿಕೊಂಡಾಗ ನೀವು ಬರುತ್ತೀರಿ ಅಂತಹ ಬಾಂಧವ್ಯ ನಮ್ಮದು, ಒಬ್ಬರಿಗೊಬ್ಬರು ಕಷ್ಟ ಕಾಲದಲ್ಲಿ ಆಗುತ್ತ ಸೋದರ ಬಾಂಧವ್ಯದಿಂದ ಬಳ್ಳಾರಿಯಲ್ಲಿ ಬಾಳುತ್ತಿದ್ದೇವೆ, ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ ಯಾವುದೇ ಧರ್ಮದವರಿದ್ದರೂ ನಾವೆಲ್ಲ ಒಂದೇ ಭಾವನೆಯಿಂದ ಇಲ್ಲಿ ಬದುಕುತ್ತಿದ್ದೇವೆ, ಹೀಗಾಗಿಯೇ ಆ ಬಾಂಧವ್ಯದ ದ್ಯೋತಕವಾಗಿ ಈ ಇಫ್ತಾರ್ ಕೂಟವನ್ನು ಆಯೋಜಿಸಿದ್ದೇವೆ ಎಂದು ಅವರು ಹೇಳಿದರು. 

ಎಂಬ ಸನ್ನಿವೇಶ ಯಾಕೆ ನಾವು ಇಂದು ಇಫ್ತಾರ್‍ಕೂಟದ ನೆಪದಲ್ಲಿ ಸೌಹಾರ್ದತೆಯ ಸಂದೇಶ ನೀಡುವಂತಹ ನಿರ್ಮಾಣವಾಗಿದೆ. ಇಂತಹ ಸನ್ನಿವೇಶ ಬಂದಿದೆಯೆಂದರೆ ದೇಶದಲ್ಲಿ ಇಂದು ದುಷ್ಕøತ್ಯಗಳು ನಡೆಯುತ್ತಿವೆ. ಧರ್ಮಗಳ ಆಧಾರದಲ್ಲಿ ಜನರನ್ನು ವಿಭಜನೆ ಮಾಡುತ್ತಿದ್ದಾರೆ ಎಂದು ಹೇಳಿದ ಶಾಸಕ ಬಿ.ನಾಗೇಂದ್ರ, ಆದರೆ ನಮ್ಮೆಲ್ಲರ ರಕ್ತ ಒಂದೇ ಆಗಿದೆ, ಆದರೆ ಸಾಕಷ್ಟು ಇಂದು ಕೆಟ್ಟ ರಾಜಕೀಯ ಮಾದರಿಯನ್ನು ಹುಟ್ಟು ಹಾಕುತ್ತಿದ್ದಾರೆ, ಆ ಉರಣಕ್ಕಾಗಿ ನಾವು ಎಲ್ಲ ಒಂದೇ ಎಂದು ಸಾಧಿಸಿ ತೋರಿಸುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು. ಎಲ್ಲರೂ ಶುಭವಾಗಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶಾಸಕ ನಾಗೇಂದ್ರ ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಸರ್ವಧರ್ಮದ ಗುರುಗಳು, ಶ್ರೀ ಕಲ್ಯಾಣ ಸ್ವಾಮೀಜಿ, ಬಿಷಪ್ ಹೆನ್ರಿ ಡಿಸೋಜಾ, ಖಾಜಿಸಾಬ್, ರಾಜ್ಯಸಭಾ ಸದಸ್ಯರಾದ ಸೈಯ್ಯದ್ ನಾಸಿರ್ ಹುಸೇನ್, ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ರಾಜೇಶ್ವರಿ ಸುಬ್ಬರಾಯ್ಡು, ಉಪ ಮೇಯರ್ ಶ್ರೀಮತಿ ಮಾಲಾನ್ ಬೀ, ಶಾಸಕರ ಆಪ್ತರಾದ ಅಣ್ಣ ನಾಗರಾಜ್, ಗೋವರ್ಧನ್ ರೆಡ್ಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಮುಂಡ್ರಿಗಿ ನಾಗರಾಜ್, ನಾರಾ ಭರತ್ ರೆಡ್ಡಿ, ಅಲ್ಲಂ ಪ್ರಶಾಂತ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಎಂ.ಹನುಮ ಕಿಶೋರ್, ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಪಿ.ಶಶಿಕಲಾ ಜಗನ್ನಾಥ್, ಪಿ.ಗಾದೆಪ್ಪ, ಎನ್.ಎಂ.ಡಿ ಆಸೀಫ್ ಭಾಷ, ಸೋಮು, ಉಮಾಪತಿ, ಕೆ. 

Post a Comment

0 Comments

Ad Code

Responsive Advertisement