Ticker

6/recent/ticker-posts

Ad Code

Responsive Advertisement

ಮತ್ತಿಕೆರೆ: ಸಚಿವರಿಂದ ಪಾದಯಾತ್ರೆ

ಬೆಂಗಳೂರು : ಮಲ್ಲೇಶ್ವಂ ವಿಧಾನಸಭಾ ಕ್ಷೇತ್ರದ ಮತ್ತಿಕೆರೆ ಬಿಬಿಎಂಪಿ ವಾರ್ಡ್ ನಂ.36 ರಲ್ಲಿ ರಾಜ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಸ್ಥಳೀಯ ಶಾಸಕರೂ ಆಗಿರುವ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್ ರವರು ಇಂದು ಬೆಳಿಗ್ಗೆ ಪಾದಯಾತ್ರೆ ಮುಖಾಂತರ ಸಾರ್ವಜನಿಕರನ್ನು ಭೇಟಿ ಮಾಡಿ ಅವರ ಕುಂದುಕೊರತೆಗಳನ್ನು ಆಲಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸ್ಥಳದಲ್ಲೇ ಉಪಸ್ಥಿತರಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಮಾರ್ಗದರ್ಶನ ಹಾಗೂ ಸಲಹೆ ಸೂಚನೆಗಳನ್ನು ನೀಡಿದರು. 





 ವಾರ್ಡಿನಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಸುಮಾರು 11 ಕಿಲೋ ಮೀಟರ್ ಉದ್ದದ ಡಕ್ಟೈಲ್ ಐರನ್ ಪೈಪ್ ಗ್ಯಾಸ್ಕೆಟ್ ಜೋಡಣೆ ಕಾಮಗಾರಿಯ ಪ್ರಗತಿಯನ್ನು ಸಚಿವರು ಈ ವೇಳೆ ಪರಿಶೀಲನೆ ಮಾಡಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರುಗಳಾದ ಮುನಿಸ್ವಾಮಿ ಗೌಡರು, ಎಂ.ಸಿ.ಜಯಪ್ರಕಾಶ್, ಎನ್.ಜೈಪಾಲ್, ವೇಲು ನಾಯ್ಕರ್, ಬಿ.ಸಿ.ಯು. ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾದ ಎಂ. ಚನ್ನಕೇಶವ, ಅಧಿಕಾರಿಗಳಾದ ಬಿಡಬ್ಲ್ಯುಎಸ್ಎಸ್ ಬಿ ಎಇಇ ಕೆ.ಎಸ್.ಹೆಗಡೆ, ಎಇಇ ರೇಖಾ, ಕಂದಾಯ ಇಲಾಖೆಯ ಬಸವರಾಜ್, ಆರೋಗ್ಯ ಇಲಾಖೆಯ ಪೂಜಾ, ವಿಶೇಷಾಧಿಕಾರಿ ಚಂದ್ರಪ್ರಕಾಶ್, ಪೊಲೀಸ್ ಅಧಿಕಾರಿ ನಾರಾಯಣ, ತೇಜಸ್, ಡಾ. ಜಿ.ಎಸ್‌.ಚೌಧರಿ, ಡಾ. ಅಂಬರೀಷ್ ಜಿ., ಎಂ. ಮುನಿರಾಜಯ್ಯ (ಅಯ್ಯು), ಪಕ್ಷದ ಮುಖಂಡರುಗಳಾದ ಡಿ.ಹೆಚ್.ಶಿವಣ್ಣ, ಎಂ. ಸತ್ಯನಾರಾಯಣ (ನಾಣಿ), ಭಾಸ್ಕರ್ ನಾಯ್ಡು, ಸುಬ್ಬಣ್ಣ, ಬಾಬು, ದತ್ತಣ್ಣ, ನಾಗರಾಜು, ಸಾವಿತ್ರಮ್ಮ, ಕೃಷ್ಣ ಮುಂತಾದವರು ಸಚಿವರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Post a Comment

0 Comments

Ad Code

Responsive Advertisement