Ticker

6/recent/ticker-posts

Ad Code

Responsive Advertisement

ಎ ಖಾತಾ ಪರಿವರ್ತನೆ- ನೂರಾರು ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ದಾರಿ : ಮೋಹನ್ ದಾಸರಿ ಎಚ್ಚರ

ಅನಧಿಕೃತ ನಿವೇಶನಗಳ ಮಾಲೀಕರಿಂದ ಲಂಚ ಪಡೆದು ಎ ಖಾತಾ ನೀಡುವ ಮೂಲಕ ಆಡಳಿತಾರೂಢ ಬಿಜೆಪಿಯು ಮುಂಬರುವ ಚುನಾವಣೆಯ ಅಕ್ರಮಕ್ಕೆ ನೂರಾರು ಕೋಟಿ ರೂಪಾಯಿ ಸಂಗ್ರಹಿಸುತ್ತಿದೆ ಎಂದು ಎಎಪಿ ನಾಯಕ ಬೆಂಗಳೂರು ನಗರಾಧ್ಯಕ್ಷ  ಮೋಹನ್ ದಾಸರಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ “ಬಿ ಖಾತಾ ಆಸ್ತಿ ಮಾಲೀಕರಿಂದ ಸುಧಾರಣಾ ಶುಲ್ಕ ಪಾವತಿಸಿಕೊಂಡು ಎ ಖಾತಾ ನೀಡಲು ಬಿಬಿಎಂಪಿ ಕೇಂದ್ರ ಭಾಗದಲ್ಲಿ ಪ್ರತಿ ಚ.ಮೀ. ವಿಸ್ತೀರ್ಣದ ನಿವೇಶನಕ್ಕೆ 200 ರೂ. ಹಾಗೂ ಹೊರವಲಯದಲ್ಲಿ 250 ರೂ. ಸುಧಾರಣಾ ಶುಲ್ಕ ನಿಗದಿಪಡಿಸಲಾಗಿದೆ. ಈ ಪ್ರಕಾರ, 30/40 ನಿವೇಶನಕ್ಕೆ ಬಿಬಿಎಂಪಿ ಕೇಂದ್ರ ವ್ಯಾಪ್ತಿಯಲ್ಲಿ ಸುಮಾರು 22 ಸಾವಿರ ರೂ. ಹಾಗೂ ಹೊರವಲಯದಲ್ಲಿ 27 ಸಾವಿರ ರೂ., ಸುಧಾರಣಾ ಶುಲ್ಕ ಕಟ್ಟಬೇಕಾಗುತ್ತದೆ. ಅದೇ ರೀತಿ 60/40ಕ್ಕೆ ಕೇಂದ್ರ ಭಾಗದಲ್ಲಿ 44 ಸಾವಿರ ರೂ. ಹಾಗೂ ಹೊರವಲಯದಲ್ಲಿ 55 ಸಾವಿರ ರೂ. ಶುಲ್ಕ ಪಾವತಿಸಬೇಕಾಗುತ್ತದೆ. 

ಆದರೆ ಇದರ ಜೊತೆಗೆ, 30/40 ನಿವೇಶನಕ್ಕೆ 25 ಸಾವಿರ ಹಾಗೂ 40/60 ನಿವೇಶನಕ್ಕೆ 50 ಸಾವಿರ ದಷ್ಟು  ಲಂಚವನ್ನೂ ಏಜೆಂಟರುಗಳ ಮೂಲಕ  ಅಧಿಕಾರಿಗಳು ಪಡೆಯುತ್ತಿದ್ದು, ಅದು ಮೂರೂ ಪಕ್ಷಗಳ ಶಾಸಕರ ಪಾಲಾಗುತ್ತಿದೆ” ಎಂದು ಹೇಳಿದರು.

“ಪ್ರತಿಯೊಂದು ವಾರ್ಡ್‌ ಆಫೀಸ್‌ಗಳಲ್ಲಿ ಖಾತಾ ಮಾಡಿಕೊಡಲು ಸರ್ವಿಸ್‌ ಚಾರ್ಜ್‌ ಹೆಸರಿನಲ್ಲಿ ಲಂಚ ಪಡೆಯುತ್ತಿದ್ದಾರೆ. ದಾಸರಹಳ್ಳಿ, ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ ಹಾಗೂ ಯಶವಂತಪುರ ವಲಯಗಳಲ್ಲಿ ಈ ದಂಧೆಯು ಅವ್ಯಾಹತವಾಗಿ ನಡೆಯುತ್ತಿದೆ. ಇದರ ವಿರುದ್ಧ ಎಸಿಬಿ ನಿರಂತರ ದಾಳಿ ಮಾಡಬೇಕು ಎಂದು ಆಗ್ರಹಿಸಿದರು.

ಮಹದೇವಪುರ ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷ ಅಶೋಕ್‌ ಮೃತ್ಯುಂಜಯ ಮಾತನಾಡಿ, “ಖಾತಾ ಪರಿವರ್ತನೆ ಬಗ್ಗೆ ಮಾಹಿತಿ ನೀಡಲು ಹಾಗೂ ಲಂಚ ಕೇಳಿದರೆ ದೂರು ನೀಡಲು ಸಾರ್ವಜನಿಕರಿಗೆ ಸಹಾಯವಾಣಿ ಆರಂಭಿಸಬೇಕು. ಖಾತಾ ಪರಿವರ್ತನೆ ಪ್ರಕ್ರಿಯೆಗೆ ಆನ್‌ಲೈನ್‌ನಲ್ಲಿ ಅವಕಾಶ ಕಲ್ಪಿಸುವ ಮೂಲಕ, ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆಯದೇ ಪರಿವರ್ತನೆ ಆಗುವಂತೆ ಮಾಡಬೇಕು. ಬಿಬಿಎಂಪಿಯು ಖಾತಾ ಮೇಳಗಳನ್ನು ಆಯೋಜಿಸುವ ಮೂಲಕ ಸುಲಲಿತವಾಗಿ ಪರಿವರ್ತನೆ ಪ್ರಕ್ರಿಯೆ ಆಗುವಂತೆ ಮಾಡಬೇಕು” ಎಂದು ಸರ್ಕಾರವನ್ನು  ಆಗ್ರಹಿಸಿದರು.

ಬೆಂಗಳೂರಿನಲ್ಲಿ 8.ಲಕ್ಷಕ್ಕೂ ಹೆಚ್ಚು ಇದ್ದ ಬಿ ಖಾತಾ ಆಸ್ತಿಗಳ ಸಂಖ್ಯೆಯು 6.18 ಲಕ್ಷಕ್ಕೆ ಇಳಿಕೆಯಾಗಿದೆ. ಹತ್ತು ವರ್ಷಗಳಲ್ಲಿ ಸುಮಾರು 2 ಲಕ್ಷ ಬಿ ಖಾತಾಗಳನ್ನು ಅಕ್ರಮವಾಗಿ ಎ ಖಾತಾ ಮಾಡಲಾಗಿದೆ. ಭ್ರಷ್ಟ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಅವಧಿಯಲ್ಲಿ ನಡೆದ ಈ  ದಂಧೆಯನ್ನು ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ. ಈ ಬಗ್ಗೆ ಸಮಗ್ರ ನ್ಯಾಯಾಂಗ ತನಿಖೆ ಮಾಡಬೇಕು.ತಪ್ಪಿತಸ್ಥ ಪ್ರಭಾವಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು  ಎಂದು ಅಶೋಕ್‌ ಮೃತ್ಯುಂಜಯ ಆಗ್ರಹಿಸಿದರು. ಈ ಅವ್ಯಾಹತ ದಂದೆ ಕೂಡಲೇ ನಿಲ್ಲದಿದ್ದಲ್ಲಿ  ಬಿ ಬಿ ಎಂ ಪಿ ಕಚೇರಿಯ ಮುಂದೆ ಬೃಹತ್ ಮಟ್ಟದ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಎಪಿ  ನಾಯಕಿ ಪಲ್ಲವಿ ಚಿದಂಬರಂ  ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement