Ticker

6/recent/ticker-posts

Ad Code

Responsive Advertisement

ತೂಬಗೆರೆ: ಅದ್ದೂರಿ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾವ್ ಜಯಂತಿ

 ಜೈ ಭೀಮ್ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಡಾಕ್ಟರ್ ಬಿಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾವ್ ಜಯಂತಿ ಆಚರಣೆ. ರಾರಾಜಿಸಿದ ಪುನೀತ್ ರಾಜಕುಮಾರ್ ಕಟೌಟ್

ತೂಬಗೆರೆ: ಪಟ್ಟಣದ ಜೈ ಭೀಮ್ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾವ್ ಜಯಂತಿಗಳನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಬಸ್ ನಿಲ್ದಾಣದಲ್ಲಿ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾವ್ ರವರ ಬೃಹತ್ ಕಟೌಟ್ ನಿಲ್ಲಿಸಿ ಪುಷ್ಪಾರ್ಚನೆ, ಅನ್ನದಾನ ಮಾಡುವುದರ ಮೂಲಕ ಮಹನೀಯರ ಜಯಂತಿಯನ್ನು ಆಚರಿಸಿದರು. ಊರಿನ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಚಾಲನೆ ನೀಡಿದ ಜೈ ಭೀಮ್ ಯುವಕ ಸಂಘದ ಅಧ್ಯಕ್ಷರಾದ ಮುನಿರಾಜು, ಡಾ. ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ಅವಕಾಶವನ್ನು ಸಂವಿಧಾನದ ಮೂಲಕ ಮಾಡಿಕೊಟ್ಟ ನಿಜವಾದ ಸಾಮಾಜಿಕ ನ್ಯಾಯದ ಹರಿಕಾರ  ಮತ್ತು ಬಾಬೂಜಿ ಎಂದೇ ಖ್ಯಾತರಾಗಿದ್ದ ಜಗಜೀವನ್ ರಾಮ್ ಶೋಷಿತರ, ದಮನಿತರ ಪರವಾಗಿ, ಅವರ ಹಕ್ಕಿಗಾಗಿ ಮಾಡಿದ ಹೋರಾಟ ಈ ದೇಶಕ್ಕೆ ಅವರು ನೀಡಿರುವ ಅನುಪಮ ಸೇವೆಯನ್ನು ನಾವು ಸದಾ ಸ್ಮರಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ  ಯುವ ಮುಖಂಡರಾದ ಉದಯ ಆರಾಧ್ಯ  ರವರು ಮಾತನಾಡಿ ಬಾಬೂಜಿ ಮತ್ತು ಅಂಬೇಡ್ಕರ್ ಕಟೌಟ್ ನ ಜೊತೆಗೆ ಪುನೀತ್ ರಾಜಕುಮಾರ್ ಕಟೌಟ್ ರಾರಾಜಿಸುತ್ತಿರುವುದು ಬಹಳ ಆಕರ್ಷಣೀಯವಾಗಿದೆ.  ಅಂಬೇಡ್ಕರ್ ವಿಶ್ವದ ಮಹಾನ್ ಚಿಂತಕರಲ್ಲಿ ಒಬ್ಬರಾಗಿದ್ದಾರೆ.  ಅಂಬೇಡ್ಕರ್‌  ಶೋಷಿತರ ಬದುಕನ್ನು ಕಟ್ಟಿಕೊಳ್ಳಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು.  ಕೇವಲ ದಲಿತ ವರ್ಗದವರಲ್ಲದೇ ಇಡೀ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಎಲ್ಲಾ ವರ್ಗದ ಜನರ ಧ್ವನಿಯಾಗಿ ಸಮಾನತೆ, ಸಹೋದರತೆಗಾಗಿ, ಮೇಲು-ಕೀಳು ಎಂಬ ಭೇದ-ಭಾವ ಇರಬಾರದೆಂದು ತಿಳಿಸಿದ್ದಾರೆ ಎಂದರು.

ಜೈ ಭೀಮ್ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳಾದ ರಾಮಕೃಷ್ಣ ಮುನಿರಾಜು ಸುರೇಶ್ ,ಪ್ರಭು ,ಗಂಗರಾಜು. ತೂಬಗೆರೆ ಗ್ರಾಮ ಪಂಚಾಯಿತಿ ಸದಸ್ಯರುಗಳು ಊರಿನ ಮುಖಂಡರುಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

Post a Comment

0 Comments

Ad Code

Responsive Advertisement