Ticker

6/recent/ticker-posts

Ad Code

Responsive Advertisement

ಧಾರ್ಮಿಕ ಕಾರ್ಯಗಳಿಂದ ಗ್ರಾಮಗಳಲ್ಲಿ ಒಗ್ಗಟ್ಟು ಉಂಟಾಗಿ ಶಾಂತಿ ಮೂಡುತ್ತದೆ

 ಮಧುಗಿರಿ : ಧಾರ್ಮಿಕ ಕಾರ್ಯಗಳಿಂದ ಗ್ರಾಮಗಳಲ್ಲಿ ಒಗ್ಗಟ್ಟು ಉಂಟಾಗಿ ಶಾಂತಿ  ಮೂಡುತ್ತದೆ ಹಾಗೂ ದೇವತಾ ಕಾರ್ಯಗಳಿಂದ ಲೋಕ ಕಲ್ಯಾಣವಾಗುತ್ತದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ತಾಲೂಕಿನ ದೊಡ್ಡೇರಿ ಹೋಬಳಿ ಕವಣದಾಲ ಗ್ರಾಮದಲ್ಲಿ ಶ್ರೀ ರಾಮಾಂಜನೇಯ ಸ್ವಾಮಿ ನೂತನ ದೇವಾಲಯ ಉದ್ಘಾಟನೆ, ಪುರಾತನ ವಿಗ್ರಹ ಪುನರ್ ಪ್ರತಿμÁ್ಟಪನೆ, ಧ್ವಜಸ್ತಂಭ, ಹಾಗೂ ಶಿಖರ ಕಲಶ ಪ್ರತಿμÁ್ಟಪನೆ ಮಹೋತ್ಸವದ 4ನೇ ದಿನದ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ಪವಮಾನ ಹೋಮ ಮತ್ತು ಚಂಡಿ ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಾನಿಗಳ ಉದಾರ ಕೊಡುಗೆಯಿಂದ, ಅಕ್ಕಪಕ್ಕದ ಗ್ರಾಮಸ್ಥರು ಮತ್ತು ಅನೇಕ ಭಕ್ತಾದಿಗಳ ಸಹಕಾರದಿಂದ ಮತ್ತು ಸೀತಾರಾಮ ಶಾಸ್ತ್ರಿಯವರ ಮಾರ್ಗದರ್ಶನ ದಲ್ಲಿ ದೇವಾಲಯವು ಸುಂದರವಾಗಿ ಆಕರ್ಷಣೀಯವಾಗಿ ಮೂಡಿಬಂದಿದೆ.  ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಶಾಸಕರ ನಿಧಿಯಿಂದ 5 ಲಕ್ಷ ಹಾಗೂ ವೈಯಕ್ತಿಕವಾಗಿಯೂ ನನ್ನ ಕೈಲಾದ ಸಹಾಯ ನೀಡಿದ್ದೇನೆ.  ಶ್ರೀ ರಾಮಾಂಜನೇಯ ಸ್ವಾಮಿ ಆಶೀರ್ವಾದ ಎಲ್ಲರ ಮೇಲಿರಲಿ. ಸ್ವಾಮಿಯ ಕೃಪೆಯಿಂದ ಉತ್ತಮ ಮಳೆ ಬೆಳೆಯಾಗಿ ಈ ಭಾಗವು  ಸುಭಿಕ್ಷವಾಗಲಿ ಎಂದು ತಿಳಿಸಿದರು.

ಇದೇ ವೇಳೆ ಯುವಕರು ಊರಿನ ಮುಂಭಾಗ 20 ಅಡಿ ಎತ್ತರದ ಆಂಜನೇಯನ ಪ್ರತಿಮೆ ಮತ್ತು ದೊಡ್ಡದಾದ ಆರ್ಚ್ ನಿರ್ಮಿಸಿಕೊಡುವಂತೆ ಮನವಿ ಮಾಡಿದಾಗ ಸುಂದರವಾದ ಎಲ್ಲರಿಗೂ ಇಷ್ಟವಾಗುವ ಪ್ರತಿಮೆ ಕೊಡಿಸುವುದಾಗಿ ಭರವಸೆ ನೀಡಿದರು.

ಬಡವನಹಳ್ಳಿ ಗ್ರಾ.ಪಂ ಸದಸ್ಯ ಬೋರ್‍ವೆಲ್ ಕುಮಾರ್ ಮಾತನಾಡಿ, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಸಿಕೊಡುವುದಾಗಿ ಭರವಸೆ ನೀಡಿದರು. 

ಕಾರ್ಯಕ್ರಮದಲ್ಲಿ ತುಮಕೂರು ವೈಶ್ಯ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಗೋವಿಂದರಾಜು, ಶ್ರೀನಿವಾಸ್, ನಟರಾಜ ಶೆಟ್ಟರು,  ರಮೇಶ್ ಬಾಬು, ಮುಖಂಡರಾದ ಗ್ರಾ.ಪಂ ಮಾಜಿ ಅಧ್ಯಕ್ಷ ಮಂಜುನಾಥ್, ಚಂದ್ರ ಕುಮಾರ್,  ಶ್ರೀ ಕುಮಾರ್, ದೇವಸ್ಥಾನದ ಸಮಿತಿಯ ಪದಾಧಿಕಾರಿಗಳು ಹಾಗೂ ಸಾವಿರಾರು ಭಕ್ತರು ಹಾಜರಿದ್ದರು.

Post a Comment

0 Comments

Ad Code

Responsive Advertisement