Ticker

6/recent/ticker-posts

Ad Code

Responsive Advertisement

ಕಲಾತಂಡದವರಿಂದ ನಾಟಕಗಳನ್ನು ಪ್ರದರ್ಶಿಸಲು ಅರ್ಜಿ ಆಹ್ವಾನ

ಬೆಂಗಳೂರು, ಏಪ್ರಿಲ್ 26, (ಕರ್ನಾಟಕ ವಾರ್ತೆ) :ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ವತಿಯಿಂದ, ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ನಿರ್ಮೂಲನೆ ಮಾಡಲು ಎಂ.ಎಸ್.ಕಾಯ್ದೆ 2013 ರ ಪ್ರಮುಖ ಅಂಶಗಳನ್ನು ಸಾರ್ವಜನಿಕರು / ಕಾರ್ಮಿಕರಲ್ಲಿ ಅರಿವು ಮೂಡಿಸಲು 60 ನಿಮಿಷಗಳ ಅವಧಿಗೆ ಜಿಲ್ಲಾ / ತಾಲ್ಲೂಕು ಮಟ್ಟಗಳ ರಂಗಮಂದಿರ / ಒಳಾಂಗಣಗಳಲ್ಲಿ ಕಲಾತಂಡದವರಿಂದ ನಾಟಕಗಳನ್ನು ಪ್ರದರ್ಶಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಆಸಕ್ತ ಪೌರಕಾರ್ಮಿಕರು / ಸಫಾಯಿ ಕರ್ಮಚಾರಿ / ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಕಲಾವಿದರಿಂದ ಕಲಾತಂಡ ರಚಿತವಾಗಿರಬೇಕು. ಪೌರ ಕಾರ್ಮಿಕರ ತಂಡಗಳಿಗೆ ಆದ್ಯತೆ ನೀಡಲಾಗುವುದು.

ಕಲಾತಂಡ ನೋಂದಣಿಯಾಗಿ 3 ವರ್ಷಗಳ ಅನುಭವವಿರಬೇಕು. ತಂಡದ ಹೆಸರಿನಲ್ಲಿ ಬ್ಯಾಂಕ್ ಖಾತೆ ಮತ್ತು ಪ್ಯಾನ್ ನಂಬರ್ ಹೊಂದಿರಬೇಕು. ಈ ದಾಖಲಾತಿಗಳೊಂದಿಗೆ ಅರ್ಜಿಯನ್ನು ಮೇ 9, 2022 ಸಂಜೆ 4 ಗಂಟೆಯೊಳಗೆ ತಲುಪಿಸಬೇಕು.

ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್  www.skc.karnataka.gov.in     ಹಾಗೂ ದೂರವಾಣಿ ಸಂಖ್ಯೆ 08022240445 / 22240446 ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0 Comments

Ad Code

Responsive Advertisement