ಪದ್ಮನಾಭನಗರದಲ್ಲಿ ಎನ್‌ಯು ಆಸ್ಪತ್ರೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಸೈಕ್ಲಾಥಾನ್‌ನಲ್ಲಿ, ಆಟೋ ಮತ್ತು ಆಂಬ್ಯುಲೆನ್ಸ್ ಚಾಲಕರಿಗೆ ದಿನಸಿ ಕಿಟ್ ವಿತರಿಸಲಾಯಿತು. ಸಮಾಜದ ರಕ್ಷಣೆಯಲ್ಲಿ ನಿರಂತರ ಕರ್ತವ್ಯ ನಿರ್ವಹಿಸಿದ ಪೊಲೀಸರನ್ನು ಸಹ ಸನ್ಮಾನಿಸಲಾಯಿತು. ಇದಕ್ಕೂ ಪೂರ್ವದಲ್ಲಿ ರಾಜಾಜಿನಗರದ ಎನ್‌ಎಚ್ ಆಸ್ಪತ್ರೆಯಲ್ಲಿ ಸೈಕ್ಲಾಥಾನ್‌ಗೆ ಚಾಲನೆ ನೀಡಲಾಯಿತು. ವಿಶ್ವ ಕಿಡ್ನಿ ದಿನದ ಅಂಗವಾಗಿ ಎನ್‌ಯು ಆಸ್ಪತ್ರೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಎನ್‌ಯು ಆಸ್ಪತ್ರೆಯು 2022 ರ ವಿಶ್ವ ಕಿಡ್ನಿ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಿದೆ. ಸೈಕ್ಲಿಂಗ್ ಉತ್ತಮ ವ್ಯಾಯಾಮ ಮತ್ತು ನಮ್ಮೆಲ್ಲರನ್ನು ಆರೋಗ್ಯಕ್ಕೆ ಸಹಕಾರಿ. ಈ ಅಭಿಯಾನವು ದೈಹಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿ.
ಈ ಸಂದರ್ಭದಲ್ಲಿ ನಟಿ ಸೋನು ಗೌಡ ಮಾತನಾಡಿ, "ಕಿಡ್ನಿ ರೋಗಗಳು ಆತಂಕಕಾರಿಯಾಗಿದ್ದು, ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಾಗೃತಿ ಮೂಡಿಸಲು ಮುಂದಾಗಿರುವ ಎನ್‌ಯು ಆಸ್ಪತ್ರೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಮತ್ತು ನಾವೆಲ್ಲರೂ ಇದನ್ನು ಅನುಸರಿಸೋಣ"ಎಂದರು.
ಡಾ.ದಿಲೀಪ್ ರಂಗರಾಜನ್ (ಹಿರಿಯ ಕನ್ಸಲ್ಟೆಂಟ್ ನೆಫ್ರಾಲಜಿಸ್ಟ್ ಮತ್ತು ಗ್ರೂಪ್ ಮೆಡಿಕಲ್ ಡೈರೆಕ್ಟರ್, ಎನ್‌ಯು ಹಾಸ್ಪಿಟಲ್ಸ್, ಬೆಂಗಳೂರು) ಮಾತನಾಡಿ, "ಸಾರ್ವಜನಿಕರಿಗೆ ಮೂತ್ರಪಿಂಡ ಕಾಯಿಲೆಗಳ ಬಗ್ಗೆ ಅರಿವು ಮೂಡಿಸಲು ಸೈಕ್ಲಾಥಾನ್ ಆಯೋಜಿಸಲಾಗಿದೆ. ಕೆಲವರ ಜೀವನಶೈಲಿ, ಮಧುಮೇಹ ಮತ್ತು ರಕ್ತದೊತ್ತಡ, ವಾತಾವರಣದ ವೈಪರೀತ್ಯ, ಸಾಕಷ್ಟು ನೀರು ಸೇವಿಸದೇ ಇರುವುದು, ಹೀಗೆ ಹಲವಾರು ಕಾರಣಗಳಿಂದ ಮೂತ್ರಪಿಂಡದ ಕಾಯಿಲೆಗಳು ಹೆಚ್ಚಾಗುತ್ತಿವೆ. ಮಧುಮೇಹ ಇರುವವರು ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ತಮ್ಮ ಮೂತ್ರಪಿಂಡಗಳನ್ನು ವಾರ್ಷಿಕವಾಗಿ ಪರೀಕ್ಷಿಸಬೇಕು. ಗರ್ಭಾವಸ್ಥೆಯಲ್ಲಿ ಮಾಡಲಾಗುವ ಅಲ್ಟ್ರಾಸೌಂಡ್ ಪರೀಕ್ಷೆಯಿಂದ ಜನ್ಮಜಾತ ಮತ್ತು ಮಕ್ಕಳ ಮೂತ್ರಪಿಂಡದ ಅಸ್ವಸ್ಥತೆಗಳು ಈಗ ಗುರುತಿಸಲ್ಪಡುತ್ತಿದೆ. ಅನೇಕ ಸಮಸ್ಯೆಗಳನ್ನು ಗುಣಪಡಿಸಲು ಸಾಧ್ಯ. ಅವುಗಳಲ್ಲಿ ಕೆಲವು ದೀರ್ಘಕಾಲದ ಆರೈಕೆ ಅಗತ್ಯವಿರುತ್ತದೆ. ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಸಾರ್ವಜನಿಕರಿಗೆ ನೀಡುವ ಸಲಹೆ, ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯನ್ನು (ಶುದ್ಧ ನೀರು, ವ್ಯಾಯಾಮ, ಆರೋಗ್ಯಕರ ಆಹಾರ, ತಂಬಾಕು ನಿಯಂತ್ರಣ ಮತ್ತು ಹವಾಮಾನ ಬದಲಾವಣೆ ತಡೆಗಟ್ಟುವಿಕೆ) ಅಳವಡಿಸಿಕೊಳ್ಳಲು ವಿನಂತಿಸುತ್ತೇನೆ. ಇದರಿಂದ CKD ಸಮಸ್ಯೆ ಇರುವವರಿಗೂ ಅನುಕೂಲ ಆಗಲಿದೆ. ಮೂತ್ರಪಿಂಡಗಳ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಸಾರ್ವಜನಿಕರು ಮಾಡಿಕೊಳ್ಳುವುದು ಅತ್ಯಗತ್ಯ" ಎಂದು ಹೇಳಿದರು.
ಶ್ರೀ ಮಂಜುನಾಥ್ (ಸಬ್ ಇನ್ಸ್‌ಪೆಕ್ಟರ್, ಬನಶಂಕರಿ ಪೊಲೀಸ್ ಠಾಣೆ) ಮುಖಂಡರಾದ ಶ್ರೀ ಆಂಜಿನಪ್ಪ, ಬನಶಂಕರಿ ಮಾಜಿ ಕಾರ್ಪೋರೇಟರ್ ಶ್ರೀಮತಿ ಶೋಭಾ ಆಂಜಿನಪ್ಪ ಮತ್ತು ಖ್ಯಾತ ಚಲನಚಿತ್ರ ನಟಿ ಎಂ. ಎಸ್. ಸೋನು ಗೌಡ ಉಪಸ್ಥಿತರಿದ್ದರು.

.jpg)






0 Comments