Ticker

6/recent/ticker-posts

Ad Code

Responsive Advertisement

Flash News: ಭೋಯಿಗುಡದ ಬೆಂಕಿ ದುರಂತ: ಪ್ರಧಾನಮಂತ್ರಿ ಸಂತಾಪ

ಬೆಂಗಳೂರು, ಮಾ.23: ಹೈದರಾಬಾದ್‌ನ ಭೋಯಿಗುಡದ ಬೆಂಕಿ ದುರಂತದಲ್ಲಿ ಸಂಭವಿಸಿದ ಜೀವಹಾನಿಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿಗಳು ಅನುಕಂಪದ ಅನುದಾನ ಅನುಮೋದಿಸಿದ್ದಾರೆ. ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿದಿಯಿಂದ ತಲಾ 2 ಲಕ್ಷ ರೂಪಾಯಿಗಳನ್ನು ಮೃತರ ವಾರಸುದಾರ ಸಂಬ0ಧಿಕರಿಗೆ ನೀಡಲಾಗುತ್ತದೆ.

ಟ್ವೀಟ್‌ಗಳ ಸರಣಿ ಸಂದೇಶದಲ್ಲಿ, ಪ್ರಧಾನಮಂತ್ರಿ ಕಚೇರಿ ಹೀಗೆ ಹೇಳಿದೆ; "ಹೈದರಾಬಾದ್‌ನ ಭೋಯಿಗುಡದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಾಗಿರುವ ಪ್ರಾಣಹಾನಿಯಿಂದ ಬಹಳ ನೋವಾಗಿದೆ. ದುಃಖದ ಈ ಸಮಯದಲ್ಲಿ ನನ್ನ ಆಲೋಚನೆಗಳು ದುಃಖತಪ್ತ ಕುಟುಂಬಗಳೊ0ದಿಗೆ ಇವೆ. ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ರೂ. 2 ಲಕ್ಷ ರೂಪಾಯಿಗಳ ಪರಿಹಾರವನ್ನು ಮೃತರ ವಾರಸುದಾರ ಸಂಬ0ಧಿಕರಿಗೆ ನೀಡಲಾಗುತ್ತದೆ.

Varthajala, Daily, Bengaluru

Post a Comment

0 Comments

Ad Code

Responsive Advertisement