ಲಕ್ನೋ, ಮಾ.02: ಉತ್ತರ ಪ್ರದೇಶದಲ್ಲಿ ಆರನೇ ಹಂತದ ಚುನಾವಣೆಗೆ ಇನ್ನೇನು ಒಂದೇ ದಿನ ಬಾಕಿ ಇದೆ. ರಾಜಕೀಯ ಪಕ್ಷಗಳ ನೇತಾರರು ಪ್ರಚಾರಕಣದಲ್ಲಿ ಮತದಾರರನ್ನು ಓಲೈಸಲು ಸರ್ವರೀತಿಯ ತಂತ್ರ ಪ್ರತಿತಂತ್ರಗಳನ್ನು ಮಾಡುತ್ತಿದ್ದಾರೆ. ಈಗ ಪ್ರಚಾರ ಕಣದಲ್ಲಿ ಕ್ರಿಕೆಟ್ ಸದ್ದು ಮಾಡತೊಡಗಿದೆ. ಖುಷಿನಗರ ಚುನಾವಣಾ ಸಭೆಯಲ್ಲಿ ಮಾತನಾಡಿದ ಬಿಜೆಪಿ ಚಾಣಕ್ಯ ಅಮಿತ್ ಶಾ, ಕ್ರಿಕೆಟ್ಅನ್ನು ಪ್ರಸ್ತಾಪಿಸಿ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದರು.
ಅಖಿಲೇಶ್ ಯಾದವ್ ಫುಲ್ ಟಾಸ್ ಬೌಲಿಂಗ್ ಮಾಡಿದರೆ ಯಾವ ಒಳ್ಳೆಯ ಬ್ಯಾಟ್ಸ್ಮನ್ ಕೂಡ ಇಂತಹ ಅವಕಾಶವನ್ನು ಸುಮ್ಮನೆ ಬಿಡುವುದಿಲ್ಲ. ಹೀಗಾಗಿಯೇ 2022ರಲ್ಲೂ ಬಿಜೆಪಿ ಬೆಂಬಲಿಗರು ಖಂಡಿತವಾಗಿ ಬೌಂಡರಿ ಬಾರಿಸುತ್ತಾರೆ, ಎಂದು ಅಮಿತ್ ಶಾ ಹೇಳಿದರು.
2013ರಲ್ಲಿ ಬಿಜೆಪಿ ಖುಷಿನಗರದಿಂದಲೇ ವಿಜಯ್ ಅಭಿಯಾನ್ ಅನ್ನು ಆರಂಭಿಸಿತ್ತು. 2014ರಲ್ಲಿ ಇಡಿ ದೇಶ ಮೋದಿಗೆ ಮತನೀಡಿ ಅಧಿಕಾರಕ್ಕೆ ತಂದರು. ಅಖಿಲೇಶ್ ಒಬ್ಬ ದುರ್ಬಲ ಬೌಲರ್, ನಾವು ಬೌಂಡರಿ ಬಾರಿಸಬೇಕಾಗಿದೆ, ಎಂದು ಅಮಿತ್ ಶಾ ಹೇಳಿದ್ದಾರೆ.
ಮೊದಲು, ಉತ್ತರ ಪ್ರದೇಶದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತಿತ್ತು, ಇದನ್ನು ಜನರನ್ನು ಹೆದರಿಸಲು ಅಥವಾ ಕೊಲ್ಲಲು ಬಳಸಲಾಗುತ್ತಿತ್ತು. ಇಂದು ಇಲ್ಲಿ ಶೆಲ್ಗಳು ಮತ್ತು ಕ್ಷಿಪಣಿಗಳನ್ನು ತಯಾರಿಸಲಾಗುತ್ತಿದೆ, ಇವುಗಳನ್ನು ಭಾರತವನ್ನು ರಕ್ಷಿಸಲು ಬಳಸಲಾಗುತ್ತದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಬದಲಾವಣೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆಯಲ್ಲಿ ಹೇಳಿದರು.
Varthajala daily, Bengaluru
0 Comments