Ticker

6/recent/ticker-posts

Ad Code

Responsive Advertisement

ಭಕ್ತಾದಿಗಳ ಮನಸೂರೆಗೊಂಡ ಪ್ರತಿಷ್ಠಿತ ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ

 ಪ್ರತಿಷ್ಠಿತ ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವವು ದೇವಸ್ಥಾನದಿಂದ ಹೊರಟು ದೇವಸ್ಥಾನದ ರಸ್ತೆ, 8ನೇ ಕ್ರಾಸ್ ಮತ್ತು ಸಂಪಿಗೆ ರಸ್ತೆಯಲ್ಲಿ ಸಾಗುತ್ತಿದ್ದ ದೃಶ್ಯಗಳು ಭಕ್ತಾದಿಗಳ ಮನಸೂರೆಗೊಂಡಿತ್ತು. ಈ ಸಮಯದಲ್ಲಿ ಮಲ್ಲೇಶ್ವರದ ಮೂಲ ನಿವಾಸಿಗಳು ಅನ್ನಸಂತರ್ಪಣೆ, ಪ್ರಸಾದ ವಿನಿಯೋಗ ಮಾಡಿ ಭಗವಂತನ ಕೃಪೆಗೆ ಭಾಜನರಾದರು.

ಮಲ್ಲೇಶ್ವರದ 8ನೇ ಅಡ್ಡ ರಸ್ತೆಯಲ್ಲಿ ಮಹೇಶ್ವರಿ ಪರಮೇಶ್ವರಿ ದೇವಸ್ಥಾನದ ಬಳಿ ಪ್ರಸಾದ ವಿನಿಯೋಗ ನಡೆಯುತ್ತಿದ್ದ ಸ್ಥಳದಲ್ಲಿ ಪುನಿತ್ ಅಭಿಮಾನಿಗಳು ಪುನಿತ್ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡುತ್ತಿದ್ದುದು ಕಂಡು ಬಂದಿತು. ಮಲ್ಲೇಶ್ವರ ಹಾಗೂ ವೈಯಾಲಿಕಾವಲ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಬಿಗಿ ಬಂದೋ ಬಸ್ತ್ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರದಿಂದ ರಥೋತ್ಸವ ಕಾರ್ಯಕ್ರಮದುದ್ದಕ್ಕೂ ಜತೆಯಲ್ಲೇ ತೆರಳುತ್ತಿದ್ದುದು ಕಾಣಿಸುತ್ತಿತ್ತು.































ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದ್ದುದು ಕಂಡು ಬಂದಿತು.

Post a Comment

0 Comments

Ad Code

Responsive Advertisement