Ticker

6/recent/ticker-posts

Ad Code

Responsive Advertisement

Breaking News: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ವಿಧಿವಶ

ಕೊಹ್ ಸಮುಯಿ, ಮಾ.04: ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ಇತಿಹಾಸ ಕಂಡ ಶ್ರೇಷ್ಠ ಲೆಗ್ಸ್ಪಿನರ್ಗಳಲ್ಲಿ ಒಬ್ಬರಾದ ಶೇನ್ ವಾರ್ನ್ ಶಂಕಿತ ಹೃದಯ ಸ್ತಂಭನದಿ0ದ ನಿಧನರಾಗಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. 

ಶೇನ್ವಾರ್ನ್ ಥೈಲ್ಯಾಂಡ್ನ ಕೊಹ್ ಸಮುಯಿದಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದ ದಂತಕತೆಯಾಗಿರುವ ಶೇನ್ ವಾರ್ನ್ ತಮ್ಮ ಲೆಗ್ ಸ್ಪಿನ್ ಬೌಲಿಂಗ್ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 708 ವಿಕೆಟ್ಗಳನ್ನು ಕಬಳಿಸಿದ್ದರು. ಶೇನ್ವಾರ್ನ್ ನಿಧನವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಇನ್ನೂ ಖಚಿತಪಡಿಸಿಲ್ಲ.

ವಾರ್ನ್ ಅವರ ಆಡಳಿತವು ಶನಿವಾರದ ಮುಂಜಾನೆ (AEDT) ಸಂಕ್ಷಿಪ್ತ ಹೇಳಿಕೆಯನ್ನು ಬಿಡುಗಡೆ ಮಾಡಿತು, ವಾರ್ನ್ ಶಂಕಿತ ಹೃದಯಾಘಾತದಿಂದ ಥೈಲ್ಯಾಂಡ್ನ ಕೊಹ್ ಸಮುಯಿಯಲ್ಲಿ ನಿಧನರಾದರು.

ಶೇನ್ ತಮ್ಮ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬ0ದಿದ್ದಾರೆ. ವೈದ್ಯಕೀಯ ಸಿಬ್ಬಂದಿಯ ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ಅವರು ಬದುಕುಳಿಯಲಿಲ್ಲ ಎಂದು ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.

Varthajala, Daily, Bengaluru

Post a Comment

0 Comments

Ad Code

Responsive Advertisement