ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಗುಡಿಸಲು ಸುಟ್ಟು ಕರಕಲಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಗ್ರಾಪಂ ವ್ಯಾಪ್ತಿಯ ಗುಟ್ಟೆ ಗ್ರಾಮ ನಾಗರತ್ನಮ್ಮ ಎಂಬುವವರ ಸರಕಾರಿ ಜಾಗದಲ್ಲಿ ಕಳೆದ 20 ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ಜೀವನ ಮಾಡುತಿದ್ದರು.
ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಗುಡಿಸಲು ಬೆಂಕಿ ಆಹುತಿಯಾಗಿದ್ದು ಗುಡಿಸಲಿನಲ್ಲಿದ್ದ ದವಸ ದಾನ್ಯ, ಬಟ್ಟೆ, ಬೀರು ಗೃಹ ಉಪಯೋಗಿ ವಸ್ತುಗಳು ಕಣ್ಣುಮುಂದೆ ಸಂರ್ಪೂಣ ಸುಟ್ಟು ಕರಕಲಾಗಿವೆ.
ನಾವು ವಾಸವಿದ್ದ ಗುಡಿಸಲಿನ ಮೇಲೆ ಯಾರು ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದು ಬೆಂಕಿಗೆ ಸಂಪೂರ್ಣ ಸುಟ್ಟು ಹೋಗಿರುತ್ತದೆ ಇವರ ಉಟ್ಟ ಬಟ್ಟೆ ಬಿಟ್ಟು ದಿನ ನಿತ್ತದ ಅವಸರದ ಆಹಾರ ದಾನ್ಯಗಳು ಸುಟ್ಟು ಹೋಗಿದೆ ಗಂಗಾಧರಪ್ಪ ಅಲವತ್ತುಕೊಂಡಿದ್ದಾರೆ.
ಈ ಬಗ್ಗೆ ಕೊಡಿಗೇನಹಳ್ಳಿ ಠಾಣೆಯಲ್ಲಿ ದೂರು ನೀಡಲಾಗಿದೆ ಎನ್ನಲಾಗಿದೆ, ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಗ್ರಾಪಂ ಸದಸ್ಯ ಶ್ರಿರಂಗ ನಾಯಕ ಸೇರಿದಂತೆ ಮುಖಂಡರು ಸ್ಥಳಕೆಕ ಭೇಟಿ ನೀಡಿದ್ದಾರೆ.
-ವರದಿ:ನಾಗೇಶ್ ಜೀವಾ ಮಧುಗಿರಿ
0 Comments