Ticker

6/recent/ticker-posts

Ad Code

Responsive Advertisement

ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಹಳ್ಳಿಗಳಿಗೆ ಕುಡಿಯುವ ನೀರನ್ನು ನೀಡದಿರುವುದು ದುರಂತವೇ

 ಮಧುಗಿರಿ : ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಹಳ್ಳಿಗಳಿಗೆ ಇಂದಿಗೂ ಶುದ್ಧ ಕುಡಿಯುವ ನೀರನ್ನು ನೀಡದಿರುವುದು ದುರಂತವೇ ಸರಿ ಎಂದು ಸಂಸದ ಜಿ ಎಸ್ ಬಸವರಾಜು ಅಭಿಪ್ರಾಯಪಟ್ಟರು. 


ತಾಲೂಕಿನ ಕಸಬಾ ಹೋಬಳಿಯ ಗಂಜಲಗುಂಟೆ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಸದರ ಆದರ್ಶ ಗ್ರಾಮ ಯೋಜನೆಯ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಬರಪೀಡಿತ ಪ್ರದೇಶಗಳಾದ ಈ ಭಾಗದ ತಾಲೂಕುಗಳಲ್ಲಿ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದು, ಈ ನೀರನ್ನು ಕುಡಿದಲ್ಲಿ ವಿವಿಧ ರೋಗಗಳಿಗೆ ತುತ್ತಾಗುವ ಸಂಭವವೇ ಹೆಚ್ಚಾಗಿರುತ್ತದೆ. ಫ್ಲೋರೈಡ್ ನೀರು ಕುಡಿದ ಹಸುಗಳ ಹಾಲು ಸೇವಿಸಿದ್ದರೂ ರೋಗ-ರುಜಿನಗಳು ತಪ್ಪಿದ್ದಲ್ಲ. ಇದನ್ನು ಮನಗಂಡು ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಸರ್ಕಾರದ ವತಿಯಿಂದ ಜಲ ಜೀವನ್ ಮಿಷನ್ ಯೋಜನೆಯಡಿ ರಾಜ್ಯದಲ್ಲಿ ಮನೆ ಮನೆಗೆ ಗಂಗಾ ಮೂಲಕ ಪ್ರತಿ ಮನೆಗೆ ಶುದ್ಧಕುಡಿಯುವ ನೀರಿನ ಸೌಕರ್ಯ ಕಲ್ಪಿಸುತ್ತಿದ್ದು, 2023ರ ವೇಳೆಗೆ ರಾಜ್ಯದ ಎಲ್ಲಾ ಗ್ರಾಮಗಳ ಹಳ್ಳಿಗಳಿಗೂ ಶುದ್ದ ಕುಡಿಯುವ ನೀರಿನ ಸೌಕರ್ಯ ತಲುಪಲಿದೆ ಎಂದರು.

ತಾಲೂಕಿನಲ್ಲಿ ಗಂಜಲಗುಂಟೆ ಗ್ರಾಮವು ಅತಿ ಹಿಂದುಳಿದ ಗ್ರಾಮವಾಗಿದೆ. ಈ ಭಾಗದಲ್ಲಿ ಅಲೆಮಾರಿ ಜನಾಂಗವೇ ಹೆಚ್ಚಾಗಿ ವಾಸಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಗ್ರಾಮವನ್ನು ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆ ಮಾಡಿಕೊಂಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಸೌಲಭ್ಯಗಳನ್ನು ಗ್ರಾಮಕ್ಕೆ ಒದಗಿಸಲಿದ್ದು, ಅಧಿಕಾರಿಗಳು ಈ ಎಲ್ಲಾ ಯೋಜನೆಗಳನ್ನು ಗ್ರಾಮಕ್ಕೆ ತಲುಪಿಸುವ ಮೂಲಕ ರಾಜ್ಯದಲ್ಲಿಯೇ ಮಾದರಿ ಗ್ರಾಮವನ್ನಾಗಿ ಮಾಡಲು ಪಣ ತೊಡಬೇಕಿದೆ. ಜಿಲ್ಲೆಯಲ್ಲಿ 183 ಪಂಚಾಯಿತಿಗಳಿದ್ದು, ಅದರಲ್ಲಿ 5 ಗ್ರಾ.ಪಂಗಳನ್ನು ಮಾತ್ರ ಆದರ್ಶ ಗ್ರಾಮಕ್ಕೆ ಆಯ್ಕೆ ಮಾಡಿಕೊಳ್ಳಲು ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಯೋಜನೆಗಳು ಅಧಿಕಾರಿಗಳ ನಿರ್ಲಕ್ಷದಿಂದಾಗಿ ಸಮರ್ಪಕವಾಗಿ ಗ್ರಾಮಗಳಿಗೆ ಹಂಚಿಕೆಯಾಗುತ್ತಿಲ್ಲ. ಎಲ್ಲಾ ಯೋಜನೆಗಳು ಈ ಗ್ರಾಮಗಳಿಗೆ ತಲುಪಿದಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಸದ್ಯ ಈ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮ ವಹಿಸಬೇಕಿದೆ ಎಂದರು.

ಮಹಾಲಯ ಮಹಿಳಾ ಸಬಲೀಕರಣ ದಿಂದ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ. ಜೀವನ ಶೈಲಿಯನ್ನು ಬದಲಾಯಿಸಿಕೊಂಡು ನೈರ್ಮಲ್ಯವನ್ನು ಹೋಗಲಾಡಿಸಿ ಸ್ವಚ್ಛತೆಯನ್ನು ಅಳವಡಿಸಿಕೊಂಡಲ್ಲಿ ಜೀವನಮಟ್ಟ ಸುಧಾರಣೆ ಸಾಧ್ಯ. ಕುಡಿತಕ್ಕೆ ಒಳಗಾಗಿ ಆರೋಗ್ಯ ಕೆಡಿಸಿಕೊಳ್ಳದೇ ನೆಮ್ಮದಿಯ ಜೀವನ ರೂಪಿಸಿಕೊಂಡು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಸಮಾಜದ ಮುಖ್ಯ ವಾಹಿನಿಗೆ ತನ್ನಿ ಎಂದು ಗ್ರಾಮಸ್ಥರಿಗೆ ಕಿವಿಮಾತು ಹೇಳಿದ ಅವರು ಸರ್ಕಾರ ಮದ್ಯಮಾರಾಟ ನಿಲ್ಲಿಸಿದರೆ ಗ್ರಾಮಗಳಲ್ಲಿ ಕಳ್ಳಭಟ್ಟಿ ದಂಧೆ ಹೆಚ್ಚಾಗುತ್ತದೆ. ಇದರಿಂದ ಅನಾರೋಗ್ಯ ಹೆಚ್ಚಾಗಿ ಅಶಾಂತಿಯ ವಾತಾವರಣ ನಿರ್ಮಾಣವಾಗಲಿದೆ ಎಂದರು.

ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಮಾತನಾಡಿ ಗ್ರಾಮಗಳ ಉದ್ಧಾರ ದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗದ ಹೊರತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಮಹಾತ್ಮ ಗಾಂಧೀಜಿಯವರ ಮಾತಿನಂತೆ ತಳಮಟ್ಟದಿಂದ ಯೋಜನೆಗಳು ರೂಪುಗೊಂಡಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ. ಇದಕ್ಕೆ ಗ್ರಾಮಸ್ಥರ ಸಹಕಾರವೂ ಅಗತ್ಯ. ದೇಶದಲ್ಲಿ ಬಹಳಷ್ಟು ಮೂಲಭೂತ ಸೌಕರ್ಯಗಳಿದ್ದು, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಪಣ ತೊಡಬೇಕು ಎಂದರು

  •  ತಾಲೂಕಿನ ಜನತೆ ನನಗೆ ಅತ್ಯಂತ ಪ್ರೀತಿಪಾತ್ರರಾಗಿದ್ದು, ನನಗೆ ಮಡಿವಂತಿಕೆ ರಾಜಕೀಯ ಮಾಡುವುದು ಗೊತ್ತಿಲ್ಲ. ಪಕ್ಷಬೇದ ಮಾಡುವುದೂ ನನಗೆ ಗೊತ್ತಿಲ್ಲ. ಪಕ್ಷಾತೀತವಾಗಿ ಬಂದು ನಿಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಿ. - ಜಿ.ಎಸ್. ಬಸವರಾಜು, ಸಂಸದ. ಬಾಕ್ಸ್ : ಕೇಂದ್ರ ಸರ್ಕಾರದ ಕನಸಿನ ಯೋಜನೆಯಾದ ಆದರ್ಶ ಗ್ರಾಮ ಯೋಜನೆ ಯಲ್ಲಿ ಅಧಿಕಾರಿಗಳ ಪಾತ್ರ ಬಹಳ ಮಹತ್ವದ್ದಾಗಿದ್ದು, ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ ಯೋಜನೆಯಲ್ಲಿ ಲೋಪದೋಷಗಳಾದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಡಿಸ್ ಮಿಸ್ ಮಾಡಿಸುತ್ತೇನೆ.
  • - ಜಿ.ಎಸ್. ಬಸವರಾಜು, ಸಂಸದ.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಮಲಮ್ಮ, ತಾ.ಪಂ ಇಓ ಲಕ್ಷ್ಮಣ್, ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಯೋಜನಾಧಿಕಾರಿ ನರಸಿಂಹಮೂರ್ತಿ, ತಾಲೂಕು ಯೋಜನಾಧಿಕಾರಿ ಗುರುಮೂರ್ತಿ, ಗಂಜಲಗುಂಟೆ ಗ್ರಾ.ಪಂ ಅಧ್ಯಕ್ಷೆ ಸಾವಿತ್ರಮ್ಮ ಡಿ.ಹೆಚ್. ನಾಗರಾಜು, 

ಮಾಜಿ ಅಧ್ಯಕ್ಷರಾದ ಎಚ್.ಎಸ್ ನಾಗರಾಜು, ದೊಡ್ಡಣ್ಣ, ಮಧುಚಂದ್ರ, ಉಪಾಧ್ಯಕ್ಷೆ ಚೇತನ, ಗ್ರಾಪಂ ಸದಸ್ಯರಾದ ವೀರೇಶ್, ಚಂದ್ರಕಲಾ, ನರಸಿಂಹಮೂರ್ತಿ, ವಿಜಯಲಕ್ಷ್ಮಿ, ದೇವರಾಜು, ದಾಸೇಗೌಡ, ಮಾಲಾ, ಮಹೇಶ್, ರಂಗರಾಜು, ನಾಗಭೂಷಣ ನಾಗಭೂಷಣ ಮುದ್ದುರಂಗಪ್ಪ ನಂದಿನಿ, ಪಿಡಿಒ ರವಿಚಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ನಾಗೇಶ್ ಬಾಬು, ಎಪಿಎಂಸಿ ಮಾಜಿ ಅಧ್ಯಕ್ಷ ಎಂ ಬಿ ಮರಿಯಣ್ಣ, ಮುಖಂಡ ಎಂ ಜಿ ಶ್ರೀನಿವಾಸಮೂರ್ತಿ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

-ವರದಿ:ನಾಗೇಶ್ ಜೀವಾ ಮಧುಗಿರಿ.

Post a Comment

0 Comments

Ad Code

Responsive Advertisement