Ticker

6/recent/ticker-posts

Ad Code

Responsive Advertisement

ವಿಶ್ವ ಮಹಿಳಾ ದಿನ: ಪೀಪಲ್ ಟ್ರೀ ಆಸ್ಪತ್ರೆಯ ಆಶ್ರಯದಲ್ಲಿ‌ ಸಾಧಕಿಯರಿಗೆ ಸನ್ಮಾನ

ಅಂತರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ನಗರದ ಪ್ರತಿಷ್ಠಿತ ಆಸ್ಪತ್ರೆಯಾದ ಪೀಪಲ್ ಟ್ರೀ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ನಿರ್ವಹಿಸಿದ  22 ಮಹಿಳಾ ಸಾಧಕರನ್ನು ಸನ್ಮಾನಿಸಲಾಯಿತು. ಮಾರ್ಚ್ 8, ಮಂಗಳವಾರದಂದು ಪೀಪಲ್ ಟ್ರೀ ಆಸ್ಪತ್ರೆಗಳಲ್ಲಿ ವಿಶೇಷ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯ್ತು. 


ಸಮಾಜದ ಹಲವು ಕ್ಷೇತ್ರಗಳ 22 ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಜೋತಿ ನೀರಜಾ (ಪೀಪಲ್ ಟ್ರೀ ಹಾಸ್ಪಿಟಲ್ ಅಧ್ಯಕ್ಷೆ ಮತ್ತು ಸಿಇಒ) "ಮಹಿಳೆಯರನ್ನು ಪ್ರತಿದಿನವೂ ಗೌರವಿಸಬೇಕು ಮತ್ತು ಆದರಿಸಬೇಕು  ಎಂದು ನಾವು ಬಲವಾಗಿ ನಂಬಿದ್ದೇವೆ ಮತ್ತು ನಮ್ಮ ಆಸ್ಪತ್ರೆಯಲ್ಲಿ ಈ ನೀತಿಯನ್ನು ಅನುಸರಿಸಲಾಗುತ್ತಿದೆ. 

ಸಾಂಕೇತಿಕ ಇವತ್ತಿನ ಕಾರ್ಯಕ್ರಮದಲ್ಲಿ, ಸಮಾಜದ ವಿವಿಧ ಕ್ಷೇತ್ರಗಳ 22 ಮಹಿಳಾ ಸಾಧಕರನ್ನು ಸನ್ಮಾನಿಸುವ ಮೂಲಕ ನಾವು ಆ ನೀತಿಯನ್ನೇ  ನಿರೂಪಿಸಿದ್ದೇವೆ. ಪ್ರಶಸ್ತಿ ಪುರಸ್ಕೃತರಲ್ಲಿ ಶತಾಯುಷಿ ಸಾಲುಮರದ ತಿಮ್ಮಕ್ಕ ಸೇರಿದಂತೆ ಕ್ಯಾಂಟೀನ್ ನಡೆಸುತ್ತಿರುವ ಮಹಿಳಾ ಉದ್ಯಮಿ, ಹಿರಿಯ ಒಬಿಜಿ ವೈದ್ಯರು, ಪ್ಯಾರಾ ಅಥ್ಲೀಟ್‌ಗಳು ಸೇರಿದಂತೆ ಹಲವು ಮುಖ್ಯ ಅತಿಥಿಗಳು ತಮ್ಮ ತಮ್ಮ ಕಾರ್ಯ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಇಂದು, ಅನೇಕ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವುದನ್ನು ನೋಡಿ ನನಗೆ ಸಂತೋಷವಾಗುತ್ತಿದೆ ಎಂದರು. 




ಈ ಸಂದರ್ಭದಲ್ಲಿ ಮಾತನಾಡಿದ ಪ್ಯಾರಾ ಅಥ್ಲಿಟ್  ಮಾಲತಿ ಕೃಷ್ಣಮೂರ್ತಿ. "ಈ ಅಭಿನಂದನೆ ನಿಜವಾದ ದೊಡ್ಡ ಮನ್ನಣೆಯಾಗಿದೆ. ವಾಸ್ತವವಾಗಿ, ಇದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ನಾನು ಮಹಿಳೆಯಾಗಿರುವುದು ಹೆಮ್ಮೆಯ ವಿಷಯ ಎಂದರು.

Post a Comment

0 Comments

Ad Code

Responsive Advertisement