Ticker

6/recent/ticker-posts

Ad Code

Responsive Advertisement

ನರ್ಸ್ ಮತ್ತು ವ್ಯೆಧ್ಯರ ಅಮಾನತ್ತು ಪಡಿಸಬೇಕು ಹಾಗೂ ಅಂಬ್ಯುಲೆನ್ಸ್ ವ್ಯವಸ್ಥೆಗೆ ಅಗ್ರಹಿಸಿ ಪ್ರತಿಭಟನೆ

 ಮಧುಗಿರಿ - ತಾಲೂಕಿನ ಹೊಸಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಬಂದ ಬ್ರಹ್ಮಸಮುದ್ರ ಮೂಲದ ಕೋಮಲ ಎಂಬ ಮಹಿಳೆ ಫೆ.24 ರಂದು  ಮಗು ಸಮೇತ ಮರಣಹೊಂದಿದ್ದು, ಇದಕ್ಕೆ ಕಾರಣರಾದ ನರ್ಸ್ ಮತ್ತು ವ್ಯೆಧ್ಯರನ್ನು ಅಮಾನತ್ತು ಪಡಿಸಬೇಕು ಹಾಗೂ ಅಂಬ್ಯುಲೆನ್ಸ್  ವ್ಯವಸ್ಥೆ ಕಲ್ಪಿಸುವಂತೆ ಅಗ್ರಹಿಸಿ ಕನ್ನಡ ಪರ ಸಂಘಟನೆಗಳು ಪಟ್ಟಣದಲ್ಲಿ ಪ್ರತಿ ಭಟನೆ ನಡೆಸಿ ಉಪವಿಭಾಗಧಿಕಾರಿ ಸೋಮಪ್ಪ ಕಡಕೊಳ ಅವರಿಗೆ  ಮಂಗಳವಾರ ಮನವಿ ಪತ್ರ ಸಲ್ಲಿಸಿದರು.

ಹೊಸಕೆರೆ ಸರ್ಕಾರಿ ಆಸ್ಪತ್ರೆಗೆ ಕೋಮಲ ಅವರ ಪತಿ ನವೀನ ಹಾಗೂ ಸಂಬಂಧಿಕರು ನೋವಿನಿಂದ ಬಳಲುತ್ತಿದ್ದ ಕೋಮಲ ಅವರನ್ನು ಅಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿದ್ದ ನರ್ಸ್ ನಾನೇ ಹೆರಿಗೆ ಮಾಡುವೆ ಎಂದು ಹೇಳಿ ಸರಿಯಾಗಿ ಚಿಕಿತ್ಸೆ ನೀಡದೆ ಬೇಜವಾಬ್ದಾರಿ ತನದಿಂದ ಮಗು ಮರಣಹೊಂದಿರುತ್ತದೆ. ನಂತರ ತಾಯಿಗೂ ಸರಿಯಾದ ಚಿಕಿತ್ಸೆ ನೀಡದೆ 3 ಗಂಟೆಗಳ ಕಾಲ ಹೊಸಕೆರೆ ಸರ್ಕಾರಿ ಅಸ್ಪತ್ರೆಯಲ್ಲಿ ಕಾಲಹರಣ ಮಾಡಿ  ಅಂಬ್ಯುಲೆನ್ಸ್ ವ್ಯವಸ್ಥೆ ಮಾಡದೆ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ನಂತರ ಕುಟುಂಬದವರು ಕಾರಿನ ವ್ಯವಸ್ಥೆ ಮಾಡಿಕೊಂಡು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗಮಧ್ಯದಲ್ಲಿ ಕೋಮಲ ಅವರು ಕೂಡ ಮೃತ ಪಟ್ಟಿರುತ್ತಾರೆ, ಆದ್ದರಿಂದ ಇಂತಹ ವೈದ್ಯರು ಮತ್ತು ನರ್ಸ್ ಗಳ ಮೇಲೆ ಕಾನೂನು ರೀತಿಯ ಕ್ರಮಕೈಗೊಂಡು , ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳಬೆಕೆಂದು ಹಾಗೂ ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 20 ಲಕ್ಷ ರೂಗಳ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿರುವ ಅವರು,  ಈಗಾಗಲೆ ವಿದಾನ ಪರಿಷತ್ ಸದಸ್ಯರಾದ ಚಿದಾನಂದ ಗೌಡರು ಮಧುಗಿರಿ ಸಾರ್ವಜನಿಕ ಆಸ್ಪತ್ರೆ ಗೆ ಅಂಬ್ಯುಲೆನ್ಸ್ ನೀಡಿದ್ದರೂ ಸಹ ರೋಗಿಗಳಿಗೆ ಉಪಯೋಗವಾಗುತ್ತಿಲ್ಲ . ಅದಷ್ಟು ಬೇಗ ಸಂಬಂದ ಪಟ್ಟ ಅಧಿಕಾರಿಗಳು ಇದರ ಕಡೆ ಗಮನಹರಿಸಬೇಕು ಹಾಗೂ ಪ್ರತಿಯೊಂದು ಹೋಬಳಿಗೆ ಎರಡು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡ ಪರ ಸಂಘಟನೆಗಳ ಓಕ್ಕೂಟದ ಅಧ್ಯಕ್ಷ ಎ.ಶಿವಕುಮಾರ್, ಉಪಾಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಶಿವಕುಮಾರ, ಪಾಂಡುರಂಗಯ್ಯ, ಪಿ.ರಾಜಕುಮಾರ್, ಎಸ್.ಚಂದ್ರಕಾಂತ್, ಸಿ.ಜಿ.ಬಾಬು, ಮಹಲಿಂಗಯ್ಯ ಹಾಗೂ ಇತರರು ಇದ್ದರು.

-ವರದಿ:ನಾಗೇಶ್ ಜೀವಾ ಮಧುಗಿರಿ

Post a Comment

0 Comments

Ad Code

Responsive Advertisement