Ticker

6/recent/ticker-posts

Ad Code

Responsive Advertisement

ಉಲ್ಲಾಳದಲ್ಲಿ ಬಿಜೆಪಿಯ ಬೃಹತ್ ಕಾರ್ಯಕರ್ತರ ಸಮಾವೇಶ*

ಬೆಂಗಳೂರು : ರಾಜರಾಜೇಶ್ವರಿ  ನಗರ ವಿಧಾನಸಭಾ ಕ್ಷೇತ್ರದ  ಜ್ಞಾನಭಾರತಿ ವಾರ್ಡ್ ನಂ.129 ರ, ಉಲ್ಲಾಳ ಸರ್ಕಲ್ ಬಳಿ ಇರುವ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ *ಬೃಹತ್ ಕಾರ್ಯಕರ್ತರ  ಸಮಾವೇಶವನ್ನು* ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಶಾಸಕರು ಹಾಗೂ ಸಚಿವರೂ ಆದ ಮುನಿರತ್ನರವರು ಮಂಡಲದ ನೂತನ ಅಧ್ಯಕ್ಷರಾದ ಗೋವಿಂದರಾಜು ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಡಲದ ಹಾಗೂ ವಾರ್ಡಿನ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳಿಗೆ  ಪದಗ್ರಹಣದ ಅಧಿಕಾರ ಪತ್ರಗಳನ್ನು ವಿತರಿಸಿದರು. 

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಆರ್. ದೇವೇಗೌಡರು, ಗೋಪಿನಾಥ್ ರೆಡ್ಡಿರವರು ಹಾಗೂ ಬೆಂಗಳೂರು ಕೇಂದ್ರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಸಚ್ಚಿ ಅಣ್ಣ ಮತ್ತು ಉಪಾಧ್ಯಕ್ಷರಾದ ಮಂಜಣ್ಣ,  ಮಾಜಿ ಮೇಯರ್ ನಾರಾಯಣಸ್ವಾಮಿ, ಮಾಜಿ ಬಿಬಿಎಂಪಿ ಸದಸ್ಯರುಗಳಾದ  ಲಕ್ಷ್ಮೀಕಾಂತ್ ರೆಡ್ಡಿ, ರಾಮಚಂದ್ರ, ವೇಲು ನಾಯ್ಕರ್, ಶ್ರೀಮತಿ ಆಶಾ ಸುರೇಶ್, ಜಿ.ಕೆ.ವೆಂಕಟೇಶ್, ಸಿದ್ದೆ ಗೌಡರು, ಸುರೇಶ್ ಬಾಬು, ಮೋಹನ್ ಕುಮಾರ್ , ವೆಂಕಟೇಶ್ ಬಾಬು, ಮಲ್ಲತಳ್ಳಿ ಮಂಜು, ರವಿ ಗೌಡರು, ಬಿ.ಎಸ್. ವಾಸುದೇವ್, ಕ್ಷೇತ್ರದ ಬಿಜೆಪಿ ಮುಖಂಡರುಗಳಾದ ಶ್ರೀಮತಿ ಸುನಂದಮ್ಮ ಬೋರೇಗೌಡ, ಕೃಷ್ಣಮೂರ್ತಿ,  ರಾಜರಾಜೇಶ್ವರಿನಗರ ನಗರ ಮಂಡಲ ಮಾಧ್ಯಮ ಸಂಚಾಲಕ ರವಿಕುಮಾರ್ ಬಿ.ಸಿ., ಮಾಧ್ಯಮ ಸಹ ಸಂಚಾಲಕ ಮೋಹನ್,  ಬೆಂ. ಕೇಂದ್ರ ಜಿಲ್ಲೆ ಆರ್.ಆರ್. ನಗರ ಮಂಡಲ ಹಿಂದುಳಿದ ಮೋರ್ಚಾದ ಅಧ್ಯಕ್ಷ ಹರೀಶ್ ಎನ್., ಶ್ರೀಮತಿ ಶೋಭಾ ಶಿವಾನಂದ್, ಶ್ರೀನಿವಾಸ್,

ಗೋವಿಂದರಾಜುರವರೊಂದಿಗೆ ಹಲವಾರು ಹಿರಿಯ ಮುಖಂಡರುಗಳು ಉಪಸ್ಥಿತರಿದ್ದರು.  ಸಾವಿರಕ್ಕೂ ಹೆಚ್ಚು ಭಾಜಪ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement