Ticker

6/recent/ticker-posts

Ad Code

Responsive Advertisement

ಯುಗಾದಿಯಂದು ರಾಜ್ಯ ಧಾರ್ಮಿಕ ದಿನ ಆಚರಣೆ: ಜೆ ಮಂಜುನಾಥ್

ಬೆಂಗಳೂರು ನಗರ ಜಿಲ್ಲೆ, ಮಾ. 31 (ಕರ್ನಾಟಕ ವಾರ್ತೆ): ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಾಲಯಗಳಲ್ಲಿ ಹೊಸ ವರ್ಷದ ಆರಂಭದ ಸಂಕೇತವಾಗಿರುವ ಚಂದ್ರಮಾನ ಯುಗಾದಿ/ ಸೌರಮಾನ ಯುಗಾದಿಯ ದಿನವನ್ನು ರಾಜ್ಯ ಧಾರ್ಮಿಕ ದಿನವನ್ನಾಗಿ  ಆಚರಿಸಲು ಧಾರ್ಮಿಕ ದತ್ತಿ ಇಲಾಖೆ ಸೂಚಿಸಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್ ಅವರು ತಿಳಿಸಿದ್ದಾರೆ.



ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಚಂದ್ರಮಾನ ಯುಗಾದಿ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ, ಹರಿಕಥೆ, ಪ್ರಸಾದ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಈ ದಿನವನ್ನು 'ರಾಜ್ಯ ಧಾರ್ಮಿಕ ದಿನ' ಎಂದು ಆಚರಣೆ ಮಾಡಲು ಕ್ರಮ ವಹಿಸಲಾಗಿದ್ದು, ಈ ಆಚರಣೆಯಲ್ಲಿ ನಾಡಿನ ಭಕ್ತಾದಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೊಸ ವರ್ಷವನ್ನು ಭಕ್ತಿಭಾವದಿಂದ ಸ್ವಾಗತಿಸುವಂತೆ ಜಿಲ್ಲಾಧಿಕಾರಿಗಳು ಕೋರಿದ್ದಾರೆ.

Post a Comment

0 Comments

Ad Code

Responsive Advertisement