Ticker

6/recent/ticker-posts

Ad Code

Responsive Advertisement

ಕಾಂಗ್ರೆಸ್ ಮುಖಂಡರ ವಿರುದ್ಧ ಕಿಡಿಕಾರಿದ ಸಿ.ಎಂ.ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು-ಶಾಲಾ- ಕಾಲೇಜುಗಳಲ್ಲಿ ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ತೀರ್ಪಿನಿಂದ ಕಾಂಗ್ರೆಸ್ ಮುಖಂಡರಿಗೆ ಕಪಾಳ ಮೋಕ್ಷವಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಸಂಘಟನೆಗಳು ಶಾಂತಿ ಕದಡುವ ಕೆಲಸ ಮಾಡಿದ್ದವು. ವಿನಾಃ ಕಾರಣ ಹಿಜಾಬ್ ಮೂಲಭೂತ ಹಕ್ಕು ಎಂದು ಶಾಂತಿ ಕದಡುವ ಪ್ರಯತ್ನ ನಡೆಸಿದ್ದವು ಎಂದು ಆರೋಪಿಸಿದರು.

ವಿನಾ:ಕಾರಣ ಹಿಜಾಬ್ ಮೂಲಭೂತ ಹಕ್ಕು ಎಂದು ಶಾಂತಿ ಕದಡುವ ಪ್ರಯತ್ನವನ್ನು ಹಲವು ಸಂಘಟನೆಗಳು ಮಾಡಿದ್ದವು. ಶಿಕ್ಷಣದಿಂದ ವಂಚಿತರಾದರೆ ಭಯೋತ್ಪಾದಕರನ್ನಾಗಿ ಬಳಸಿಕೊಳ್ಳುವ ಚಿಂತನೆ ನಡೆದಿತ್ತು. ಸಮವಸ್ತ್ರ ಕಡ್ಡಾಯ ಎಂಬ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಹೀಗಾಗಿ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ ಎಂದರು.

ಶಿಕ್ಷಣದಿಂದ ವಂಚಿತರಾದರೆ ಭಯೋತ್ಪಾದಕನ್ನಾಗಿ ಬಳಸಿಕೊಳ್ಳುವ ಚಿಂತನೆ ನಡೆದಿತ್ತು. ರಾಜ್ಯ ಸರ್ಕಾರದ ನಿಲುವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಸಮವಸ್ತ್ರ ಕಡ್ಡಾಯ ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ನ್ಯಾಯಾಲಯದ ತೀರ್ಪು ಬಂದಿದೆ. ಹೈಕೋರ್ಟ್ ತೀರ್ಪನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.

ಈಗಾಗಲೇ ಎಸ್ ಸಿ/ ಎಸ್ ಟಿ ಇವರಿಂದ ದೂರ ಆಗಿದ್ದಾರೆ. ಅಂಬೇಡ್ಕರ್ ಅವರನ್ನ ಸೋಲಿಸಿದ್ದು ಇವರೇ ಅಲ್ಲವೇ? ಮುಸ್ಲಿಮರು ಸಹ ಕಾಂಗ್ರೆಸ್‌ನಿಂದ ದೂರ ಆಗ್ತಾರೆ ಎಂದ ರೇಣುಕಾಚಾರ್ಯ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಯಾರೂ ಹರ್ಷೋದ್ಘಾರ ಮಾಡಬಾರದು‌. ಸಂಘರ್ಷಕ್ಕೆ ಅವಕಾಶ ಕೊಡಬಾರದು‌ ಎಂದು ಮನವಿ ಮಾಡಿದರು.
ನಾವೆಲ್ಲರೂ ಒಂದು ಕುಂಟುಂಬ ಸದಸ್ಯರಂತೆ ಈ ದೇಶದಲ್ಲಿ ವಾಸ ಮಾಡಬೇಕಾಗುತ್ತದೆ. ಕೆಲವೊಂದು ಕಡೆಗೆ ವಿದ್ಯಾರ್ಥಿಗಳು ನಮಗೆ ಹಿಜಬ್ ಮುಖ್ಯ ಶಿಕ್ಷಣ ಬೇಡ ಎಂದು ಪಟ್ಟು ಹಿಡಿದು ಕುಳಿತಿರುವ ವಿಚಾರವಾಗಿ ಅವರು ಮಾತನಾಡಿ, ಅವರಿಗೆ ನಾನು ವಿನಂತಿ ಮಾಡುತ್ತೇನೆ. ಅವರು ಕೂಡಾ ನಮ್ಮ ಮಕ್ಕಳು ಇದ್ದಹಾಗೆ ಎಂದು ಕಳಕಳಿ ವ್ಯಕ್ತಪಡಿಸಿದರು.

ಆ ಮುಗ್ಧ ಮನಸ್ಸಿನ ವಿದ್ಯಾರ್ಥಿನಿಯರ ಮೇಲೆ ಈ ಕೆಲ ಸಂಘಟನೆಗಳು ಕಾಂಗ್ರೆಸಿನ ಮುಖಂಡರು ಪ್ರಚೋದನೆ ಮಾಡುತ್ತಿದ್ದಾರೆ. ಅವರು ಎಲ್ಲಿ ಓದಿ ವಿದ್ಯಾವಂತರಾದರೆ ಅವರು ಎಲ್ಲಿ ಶಿಕ್ಷಣ ಪಡೆದು ಈ ದೇಶದ ಸತ್ತಪ್ರಜೆಗಳಾಗುತ್ತಾರೆ. ಶಿಕ್ಷಣದಿಂದ ವಂಚಿತರಾದರೆ ಅವರ ಮನಸ್ಸು ವಿಕೃತವಾಗುತ್ತೆ. ಎಲ್ಲಿಯೋ ಒಂದು ಕಡೆ ಇದು ಭಯೋತ್ಪಾದನೆಗೆ ಕುಮ್ಮಕ್ಕು ಆಗುತ್ತದ ಎಂದರು.

ಹರ್ಷೋದ್ಘಾರ ಮಾಡಬಾರದು, ಸಂಘರ್ಷಕ್ಕೆ ಅವಕಾಶ ಕೊಡಬಾರದು, ಮುದ್ದು ಮನಸ್ಸಿನ ಹೆಣ್ಣು ಮಕ್ಕಳಿಗೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ನಡೆದಿತ್ತು. ಯಾವುದೇ ಕಾಂಗ್ರೆಸ್ ಮುಖಂಡರ ಮಾತು ಕೇಳಬೇಡಿ ಎಂದು ಮನವಿ ಮಾಡಿದರು.
ನಿಮಗೆ ನಿಮ್ಮ ಭವಿಷ್ಯ ಮುಖ್ಯ. ಈ ದೇಶದ ಕಾನೂನನ್ನು ನಾವು ಗೌರವಿಸಬೇಕು. ಈ ನೆಲದ ಕಾನೂನ ಅನ್ನು ಗೌರವಿಸಬೇಕು. ತಾವು ಕೂಡಾ ಗೌರವಿಸುವಂತೆ ಶಾಸಕರು ವಿನಂತಿಸಿಕೊಂಡರು.


Post a Comment

0 Comments

Ad Code

Responsive Advertisement