ವಿದ್ಯಾರ್ಥಿಗಳು ಕೇವಲ ಅಂಕ ಪಡೆಯುವತ್ತ ಗಮನಹರಿಸದೆ ಅಂಕಗಳ ಜೊತೆ ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕಾರಯುತ ಶಿಕ್ಷಣ ಪಡೆಯಬೇಕೆಂದು ಪ್ರಾಂಶುಪಾಲ ಡಿಎಸ್ ಮುನಿಂದ್ರ ಕುಮಾರ್ ತಿಳಿಸಿದರು.
ಮಧುಗಿರಿ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ತುಮಕೂರು ಶಾಖೆ ವತಿಯಿಂದ 29 ವಿದ್ಯಾರ್ಥಿನಿಯರಿಗೆ 5000 ರೂಗಳಿಂದ 10000 ರೂ ವರಿಗೆ ನೀಡುವ ಉಚಿತ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ತುಮಕೂರು ಶಾಖೆ ರವರು ಮುಂದಿನ ವರ್ಷದಿಂದ ಬರುವ ಏಪ್ರಿಲ್ ಮಾಹೆ ಇಂದ 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಿದ್ದಾರೆ ಈ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ಈ ಸೌಲಭ್ಯವನ್ನು ಪಡೆದುಕೊಂಡು ಕಾಲೇಜಿಗೆ ವಿದ್ಯಾರ್ಥಿವೇತನ ನೀಡಿದ ಸಂಸ್ಥೆಗೆ ಶಿಕ್ಷಕರಿಗೆ ತಂದೆ-ತಾಯಿಗಳಿಗೆ ಕೀರ್ತಿಯನ್ನು ತರಬೇಕು ಎಂದ ಅವರು ಎಲ್ಲಾ ರಂಗದಲ್ಲಿ ಮಹಿಳೆಯರು ಅತ್ಯುನ್ನತ ಸಾಧನೆಗಳನ್ನು ಮಾಡುತ್ತಿದ್ದಾರೆ ಸಾಧಕರ ಆದರ್ಶ ತತ್ವಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಬೇಕು ಎಂದರು ಈ ಸಂದರ್ಭದಲ್ಲಿ ಸಂಚಾಲಕರಾದ ಕೆ ದಿವಾಕರ್ ಉಪನ್ಯಾಸಕರಾದ ಅಶೋಕ್,ರಾಘವೇಂದ್ರ,ಮಂಜುನಾಥ್, ರೇಖಾ, ಪುರುಷೋತ್ತಮ್,ಡಾ : ನಾಗ್ಭೂಷಣ್, ವಿಜಯಲಕ್ಷ್ಮಿ,ಗಿರಿಜಾ, ಇನ್ನು ಮುಂತಾದವರು ಇದ್ದರು.
ವರದಿ: ನಾಗೇಶ್ ಜೀವಾ ಮಧುಗಿರಿ
0 Comments