ಶ್ರೀ ರಾಯರ ಜನ್ಮದಿನೋತ್ಸವ- ಬೃಂದಾವನಕ್ಕೆ"ಲಕ್ಷ ಪುಷ್ಪಾರ್ಚನೆ -ಶ್ರೀ ರಾಯರ ಸನ್ನಿಧಿಗೆ ಭಕ್ತ ಜನಸಾಗರ"
ಜಯನಗರದ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ427ನೇ ಹುಟ್ಟುಹಬ್ಬ ಜನ್ಮದಿನೋತ್ಸವದ ಅಂಗವಾಗಿ ಶ್ರೀರಾಘವೇಂದ್ರಸ್ವಾಮಿಗಳವರ ಬಂದಾವನಕ್ಕೆ ಫಲಪಂಚಾಮೃತ ಅಭಿಷೇಕ ಸಹಿತ "ಲಕ್ಷ ಪುಷ್ಪ" ಅರ್ಚನೆ ಕಾರ್ಯಕ್ರಮಗಳು ಪರಮಪೂಜ್ಯ 108 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ವ್ಯವಸ್ಥಾಪಕರಾದ ಆರ್ , ಕೆ ವಾದೀಂದ್ರಾಚಾರ್ಯರ ನೇತೃತ್ವ ದಲ್ಲಿ ಅರ್ಚಕರಾದ ಕೃಷ್ಣಚಾರ್ ರಾಮಾಚಾರ್ಯರಿಂದ ರಾಯರ ಬೃಂದಾವನಕ್ಕೆ ವಿಶೇಷವಾಗಿ ಲಕ್ಷಾವರ್ತಿಪಾರಾಯಣಸಂಘದ ಶ್ರೀ ವೇಣು ಗೋಪಾಲ್ ವೃಂದ ದವರಿಂದ ಪಾರಾಯಣ ಸಹಿತ "ಲಕ್ಷ ಪುಷ್ಪಾರ್ಚನೆ" ಮತ್ತು ಉತ್ಸವಗಳು ಪಾದಪೂಜೆ ಕನಕಾಭಿಷೇಕಗಳು ನೆರವೇರಿತು, ಈ ಸಂದರ್ಭದಲ್ಲಿ ಭಕ್ತರೊಬ್ಬರು ಶ್ರೀ ಗುರು ರಾಯರ ಪಾದುಕೆ ಗಳನ್ನು ಇರಿಸಲು ರಜತ ತಟ್ಟೆ ಯನ್ನು ಸಮರ್ಪಿಸಿದರು.
ಶ್ರೀ ಗುರು ರಾಯರನ್ನು ದರ್ಶಿಸಲು ಭಕ್ತ ಜನಸಾಗರವೇ ಹರಿದು ಬಂದಿತ್ತುಬಂದಿರುವಪ್ರತಿಯೊಬ್ಬ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಯು ನಡೆಯಿತು , ಹಾಗೂ ಸಂಜೆ 7 ಕ್ಕೆ ಶ್ರೀಮತಿ ಅಪರ್ಣಆನಂದ್ ವೃಂದದವರು "ದಾಸವಾಣಿ" ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು ಎಂದು ಪುರೋಹಿತ ನಂದಕಿಶೋರ್ ಆಚಾರ್ಯರು ತಿಳಿಸಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳ ಹಾಗೂ ಭಕ್ತರ ಸಹ ಕಾರದೊಂದಿಗೆ ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ನೆರವೇರಿತು ಚಿತ್ರನಟಿ ಪ್ರೇಮ, ಚಿತ್ರ ನಟಿ ಪ್ರಣೀತಾ , ಕೆ ಪದ್ಮಕಲ , ಪ್ರಭಂಜನ್ ಡೈರೆಕ್ಟರ್ ನಂದಕಿಶೋರ್, ಶಿಷ್ಯ ಖ್ಯಾತಿಯ ಹೀರೋ ದೀಪಕ್ ,ಮೊದಲಾದ ಭಕ್ತರುಗಳುಶ್ರೀಮಠಕ್ಕೆಆಗಮಿಸಿ ಗುರುಗಳ ದರ್ಶನ ಪಡೆದರು.
0 Comments