Ticker

6/recent/ticker-posts

Ad Code

Responsive Advertisement

ಪಾಂಡಿತ್ಯ-ಪ್ರತಿಭೆಗಳಿಂದ ಪಂಡಿತ ಲೋಕದ ಗಮನ ಸೆಳೆದ ಶ್ರೀಸುಧೀಂದ್ರತೀರ್ಥರು

 ಕುಶಾಗ್ರಮತಯೇ ಭಾನುದ್ಯುತಯೇ ವಾದಿಭೀತಯೇ/

  ಆರಾಧಿತ ಶ್ರೀಪತಯೇ ಸುಧೀಂದ್ರಯತಯೇ   ನಮಃ//

ಕಲಿಯುಗದ ಕಲ್ಪವೃಕ್ಷ-ಕಾಮಧೇನು ಎಂದೇ ಹೆಸರು ಪಡೆದಿರುವ ಶ್ರೀರಾಘವೇಂದ್ರತೀರ್ಥರನ್ನು  ಜಗತ್ತಿಗೆ ದೊರಕಿಸಿಕೊಟ್ಟ ಮಹಾ ಮಹಿಮರು ಶ್ರೀಸುಧೀಂದ್ರತೀರ್ಥರು.

ಸುಧೀಂದ್ರತೀರ್ಥರಾಗುವುದಕ್ಕೂ ಮೊದಲು  ನಾರಾಯಣಾಚಾರ್ಯರು ಎಂಬುದು ಇವರ ಹೆಸರು.

ಶ್ರೀಸುಧೀಂದ್ರತೀರ್ಥರ ವಿದ್ಯಾಗುರುಗಳು ಶ್ರೀವಿಜಯೀಂದ್ರತೀರ್ಥರು.ಶ್ರೀವಿಜಯೀಂದ್ರತೀರ್ಥರಂತಹ ಮಹಾಜ್ಞಾನಿಗಳವರಲ್ಲಿ ವೇದಾಭ್ಯಾಸ ಮಾಡಿದವರು ಶ್ರೀಸುಧೀಂದ್ರತೀರ್ಥರು.

ಬಾಲ್ಯದಲ್ಲಿಯೇ ಅಗಾಧ ಪಾಂಡಿತ್ಯ-ಪ್ರತಿಭೆಗಳಿಂದ ಪಂಡಿತ ಲೋಕದ ಗಮನ ಸೆಳೆದವರು ಶ್ರೀಸುಧೀಂದ್ರತೀರ್ಥರು.ಇವರು ಶ್ರೀವಿಜಯೀಂದ್ರತೀರ್ಥರಿಂದ ಸಂಸ್ಥಾನವನ್ನು ವಹಿಸಿಕೊಂಡಮೇಲೆ ಭಾರತಾದ್ಯಂತ ಸಂಚರಿಸಿ, ವೇದಾಂತ ಚರ್ಚಾಗೋಷ್ಠಿಯಲ್ಲಿ ವಿಜಯಸಾಧಿಸಿ, ದ್ವೈತಸಿದ್ಧಾಂತದ ವಿಜಯ ದುಂದುಭಿ ಮೊಳಗಿಸಿದ ಮಹಾನುಭಾವರು.

ಸಕಲ ಶಾಸ್ತ್ರಗಳಲ್ಲಿ ಪ್ರೌಢ ಗ್ರಂಥಗಳನ್ನು ರಚಿಸಿ ರಾಜ ಮಹಾರಾಜರುಗಳಿಂದ ,ಪಂಡಿತರುಗಳ ಸಮೂಹದಿಂದ,ಭಕ್ತ ಜನರಿಂದ ಸೇವಿತರಾಗಿ ಜಗನ್ಮಾನ್ಯರಾದರು. ಶ್ರೀಮನ್ಮಧ್ವಾಚಾರ್ಯರ ದ್ವೈತ ಸಿದ್ಧಾಂತ, ವ್ಯಾಕರಣ, ನ್ಯಾಯಶಾಸ್ತ್ರಗಳಲ್ಲೂ, ಕಾವ್ಯ ನಾಟಕಾಲಂಕಾರಾದಿ ಸಾಹಿತ್ಯ ಶಾಸ್ತ್ರಗಳಲ್ಲೂ ಗ್ರಂಥಗಳನ್ನು ರಚಿಸಿ,ವಿಜಯನಗರ ರಾಜರಿಂದ,ದಕ್ಷಿಣ ಭಾರತದ ತಂಜಾವೂರು-ಮಧುರೆ-ಕೇರಳ ರಾಜ್ಯಗಳ ಆಡಳಿತ ಮುಖ್ಯಸ್ಥರಿಂದಲೂ, ಗ್ವಾಲಿಯರ್    ರಾಜ್ಯಾಧಿಪತಿಗಳು ಮೊದಲಾದವರಿಂದ ರತ್ನಾಭಿಷೇಕ,ಕನಕಾಭಿಷೇಕ ಗಳಿಂದ ಸನ್ಮಾನಿಸಲ್ಪಟ್ಟವರುಶ್ರೀಸುಧೀಂದ್ರತೀರ್ಥರು.

ಶ್ರೀರಾಘವೇಂದ್ರ ತೀರ್ಥರಿಗೆ ವ್ಯಾಸರಾಜರ ತಾತ್ಪರ್ಯಚಂದ್ರಿಕ,ಮೀಮಾಂಸ,ಭಾಮತಿ, ವ್ಯಾಕರಣ ಮಹಾಭಾಷ್ಯ ಮುಂತಾದ ಗ್ರಂಥಗಳನ್ನು ಅವುಗಳ ಮೇಲೆ ಟೀಕೆ,ವ್ಯಾಖ್ಯಾನ ಸಹಿತ ಮೂರುವರ್ಷಗಳ ಕಾಲ ಬೋಧಿಸಿದ್ದಾರೆ.ನಂತರ ಗ್ರಂಥದ ಪಾಠ ಮುಗಿದ ಮೇಲೆ ಅದನ್ನು ಶ್ರೀಹರಿಗೆ ಸಮರ್ಪಣೆಮಾಡಿದ್ದಾರೆ.ಮುಖ್ಯವಾದ ಗ್ರಂಥಗಳು ತರ್ಕತಾಂಡವ ವ್ಯಾಖ್ಯಾನ,ಆಪಸ್ತಂಬ ಸುಲಭ ಸೂತ್ರಪ್ರದೇಪ,ಭಾಗವತದ ಎರಡನೇ ಮತ್ತು ಹನ್ನೊಂದನೇ ಸ್ಕಂಧಗಳ ಮೇಲೆ ಬರೆದಿರುವ ವ್ಯಾಖ್ಯಾನ.

ಶ್ರೀಸುಧೀಂದ್ರತೀರ್ಥ ಗುರುಗಳು ಸಂಚಾರಮಾಡುತ್ತಾ ಒಮ್ಮೆ ಬಿಜಾಪುರಕ್ಕೆ ಬಂದಾಗ,ಬಿಜಾಪುರದ ನಾಡು ಹನ್ನೆರಡು ವರ್ಷಗಳಷ್ಟು ದೀರ್ಘಕಾಲ ಬರಗಾಲದ ಸುಳಿಯಲ್ಲಿ ಸಿಕ್ಕು ನಲುಗಿಹೋಗಿತ್ತು.ಆದಿಲ್ ಶಾ ನವಾಬನು ಶ್ರೀಗಳವರಲ್ಲಿಬರಗಾಲದಬವಣೆಯನ್ನು ಪರಿಹರಿಸುವಂತೆ ಪ್ರಾರ್ಥಿಸುತ್ತಾನೆ.ಸ್ವಾಮಿಗಳವರು

ತಮ್ಮಜಪ,ತಪಸಿದ್ಧಿಯಿಂದಶ್ರೀಹರಿಯನ್ನು,ವರುಣದೇವನನ್ನು ಪ್ರಾರ್ಥಿಸಿದಾಗ ಧಾರಾಕಾರ ಮಳೆ ಸುರಿದು ಕೆರೆ ಕಟ್ಟೆಗಳೆಲ್ಲಾ ತುಂಬಿ ರಾಜ್ಯದಲ್ಲಿ ದೀರ್ಘ ಕಾಲದಿಂದಿದ್ದ ಬರಗಾಲದ ಬವಣೆ ಪರಿಹಾರ ವಾಗುತ್ತದೆ.ನವಾಬನು ಶ್ರೀಗಳವರಿಗೆ ಗೌರವ ಪೂರ್ವಕ ನಮಸ್ಕಾರಗಳನ್ನು ಸಲ್ಲಿಸುತ್ತಾನೆ.

ನವಾಬರ ಆಸ್ಥಾನದಲ್ಲಿ ಇದ್ದ ಘನಶ್ಯಾಮ್ ಎಂಬ ಪಂಡಿತನಿಗೆ ಶ್ರೀಗಳವರ ತಪಃಶಕ್ತಿಯಿಂದ ಮಳೆಯಾಯ್ತು ಎಂಬುದನ್ನು ಒಪ್ಪದೇ,ಸ್ವಾಮಿಗಳವರಿಗೆ ತಪಃಶಕ್ತಿಯಿಂದ ಆಕಾಶದಲ್ಲಿನ ಸೂರ್ಯನನ್ನು ಕ್ಷಣ ಕಾಲ ಮರೆಮಾಡಿ ಕತ್ತಲುಕವಿಯುವಂತೆ ಮಾಡಲಿ ನೋಡೋಣ ಎಂಬ ಸವಾಲು ಹಾಕುತ್ತಾನೆ.ಶ್ರೀಸುಧೀಂದ್ರತೀರ್ಥರು ಶ್ರೀಹರಿಯನ್ನು ಪ್ರಾರ್ಥಿಸಿದಾಗ ಮಟಮಟ ಮಧ್ಯಾಹ್ನದಲ್ಲಿ ಸ್ವಲ್ಪ ಹೊತ್ತು ಕತ್ತಲು ಕವಿಯುತ್ತದೆ.ಇದನ್ನು ಕಣ್ಣಾರೆ ಕಂಡ ಪಂಡಿತನು ಶ್ರೀಗಳವರಿಗೆ ದೀರ್ಘದಂಡ ಪ್ರಣಾಮವನ್ನು ಸಲ್ಲಿಸಿ ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದು ಪ್ರಾರ್ಥಿಸುತ್ತಾನೆ.ಕೃಷ್ಣಾವತಾರದಲ್ಲಿ ಶ್ರೀಕೃಷ್ಣನು ಅರ್ಜುನನನ್ನು ಕಾಪಾಡಲು ತನ್ನ ಸುದರ್ಶನ ಚಕ್ರದಿಂದ ಕತ್ತಲಾಗುವಂತೆ ಮಾಡುತ್ತಾನೆ. ಈ ಘಟನೆಯಿಂದ ಭಗವಂತ ಭಕ್ತರ ಅಧೀನ ಎನ್ನುವುದನ್ನು ದೃಢಪಡಿಸುತ್ತದೆ.

ಶ್ರೀಯಾದವೇಂದ್ರರೆಂಬುವರುಶ್ರೀಸುಧೀಂದ್ರ ತೀರ್ಥರಪೂರ್ವಾಶ್ರಮಸೋದರಳಿಯಂದಿರು. ಯಾದವೇಂದ್ರರು ಶ್ರೀಗಳವರಿಗೆ ತಮಗೆ ಸನ್ಯಾಸದೀಕ್ಷೆ ದಯಪಾಲಿಸಬೇಕೆಂತ ಬೇಡಿಕೊಂಡಾಗ ಶ್ರೀಗಳವರು ಅವರಿಗೆ ನೀವು ಸನ್ಯಾಸದೀಕ್ಷೆಯನ್ನುಸಂಸ್ಥಾನದ ಅಧಿಕಾರವನ್ನು ಬಯಸಿಬಂದಿದ್ದೀರೋಅಥವಾವೈರಾಗ್ಯಭಾವನೆಯಿಂದಸಾಧನೆ ಮಾಡಲು ದೀಕ್ಷೆಯನ್ನು ಕೇಳುತ್ತಿದ್ದೀರೋ ಎಂದು ಪ್ರಶ್ನೆ ಮಾಡುತ್ತಾರೆ.ಯಾದವೇಂದ್ರರುತಮಗೆ ಸಂಸ್ಥಾನಾಪೇಕ್ಷೆಯು ಕಿಂಚಿತ್ತೂ ಇಲ್ಲವೆಂತಲೂ ,ಸಾಧನೆಗಾಗಿ ಸನ್ಯಾಸದೀಕ್ಷೆ ಬೇಡುತ್ತಿರುವುದಾಗಿಯೂ ಹೇಳಿದಾಗ ಅವರ ಮಾತಿನಲ್ಲಿ ನಂಬಿಕೆ ಬಂದು ಶ್ರೀಗಳವರು ಅವರಿಗೆ ಸನ್ಯಾಸದೀಕ್ಷೆಯನ್ನು ಬೋಧಿಸಿ "ಶ್ರೀಯಾದವೇಂದ್ರ ತೀರ್ಥ"ರು ಎಂದು ನಾಮಕರಣ ಮಾಡುತ್ತಾರೆ. 

ಯಾದವೇಂದ್ರರು ಸ್ವಲ್ಪಕಾಲ ಗುರುಗಳಾದ ಸುಧೀಂದ್ರತೀರ್ಥ ರೊಂದಿಗೆ ಮೂಲರಾಮದೇವರ ಪೂಜೆ ಮಾಡಿಕೊಂಡಿದ್ದು ಶ್ರೀಗಳವರಆಜ್ಞಾನುಸಾರ ದೇಶ ಪರ್ಯಟನೆಗೆ ಹೊರಡುತ್ತಾರೆ. ಮುಂದೆ ಶ್ರೀಸುಧೀಂದ್ರತೀರ್ಥ ಗುರುಗಳಿಗೆ ದೇಹಾಲಸ್ಯವಾಗಿ ಸಂಸ್ಥಾನಕ್ಕೆ ತಮ್ಮ ಶಿಷ್ಯರಾದ ವೆಂಕಟನಾಥಾಚಾರ್ಯರಿಗೆ ಉತ್ತರಾಧಿಕಾರಿ ಪಟ್ಟಾಭಿಷೇಕ ಮಾಡಿ "ಶ್ರೀರಾಘವೇಂದ್ರತೀರ್ಥ"ರು ಎಂದು ನಾಮಕರಣ ಮಾಡುತ್ತಾರೆ. ಶ್ರೀರಾಘವೇಂದ್ರತೀರ್ಥರೇ ಇಂದುಕಲಿಯುಗ ಕಲ್ಪತರು ಎಂದು ಪ್ರಖ್ಯಾತರಾಗಿ ಭಕ್ತರನ್ನು ಅನುಗ್ರಹಿಸುತ್ತಾ ಮಂತ್ರಾಲಯ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀರಾಘವೇಂದ್ರಗುರುಸಾರ್ವಭೌಮರು.

ಶ್ರೀಸುಧೀಂದ್ರತೀರ್ಥರ ಆರಾಧನೆ ಫಾಲ್ಗುಣ ಬಹುಳದ್ವಿತೀಯದಂದುನೆರವೇರುತ್ತದೆ.ಇವರ ಮೂಲಬೃಂದಾವನ ಇರುವುದು ಆನೆಗೊಂದಿ ಯಲ್ಲಿರುವ ನವವೃಂದಾವನ ಕ್ಷೇತ್ರದಲ್ಲಿ.ನಾವೂ ಭಕ್ತಿಯ ನಮನಗಳನ್ನು ಸಲ್ಲಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.

ಮಾರ್ಚ್ 20, 2022  ಭಾನುವಾರ - ಗುರುಗಳ ಆರಾಧನೆ

-ಜಯಭೀಮ್ ಜೊಯ್ಸ್.ಶಿವಮೊಗ್ಗ


Post a Comment

0 Comments

Ad Code

Responsive Advertisement