Ticker

6/recent/ticker-posts

Ad Code

Responsive Advertisement

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಪ್ರೇರಣಾ ಪರೀಕ್ಷಾ ಸಿದ್ಧತಾ ಕಾರ್ಯಾಗಾರ

 ಪ್ರೇರಣಾ ಫೌಂಡೇಶನ್ ಮಧುಗಿರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮಧುಗಿರಿ ಹಾಗೂ ಮಹೇಶ್ ಶಿಕ್ಷಣ ಸಂಸ್ಥೆ‌ ಅಶೋಕ ನಗರ ತುಮಕೂರು ವತಿಯಿಂದ ಇಂದು ಕನ್ನಡ ಭವನ ಮಧುಗಿರಿಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಪ್ರೇರಣಾ ಪರೀಕ್ಷಾ ಸಿದ್ಧತಾ ಕಾರ್ಯಾಗಾರ ನಡೆಸಲಾಯಿತು


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸದ್ದ ಪ್ರೇರಣಾ ಫೌಂಡೇಶನ್ ಅಧ್ಯಕ್ಷರಾದ ಶ್ರೀ ರಮೇಶ್ ಎಸ್ ಆರ್ ರವರು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಪ್ರೇರಣಾ ಫೌಂಡೇಶನ್ ಪ್ರತಿ ವರ್ಷ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ‌ ಅನುಕೂಲ ಹಾಗೂ ಮಧುಗಿರಿ ತಾಲ್ಲೂಕು ಮಕ್ಕಳು ರಾಜ್ಯದಲ್ಲಿ ಮೂದಲ ಶ್ರೇಣಿಯಲ್ಲಿ ತೇರ್ಗಡೆ ಹೊಂದಿಬೇಕೆಂದು ತಿಳಿಸಿದ್ದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಜನಾರ್ಧನ ರವರು ಪರೀಕ್ಷಾ ಸಿದ್ಧತಾ ಕಾರ್ಯಾಗಾರದ ಬಗ್ಗೆ ವಿದ್ಯಾರ್ಥಿಗಳೂಂದಿಗೆ ಸಂವಾದ ನಡೆಸಿದ್ದರು.

ಕಾರ್ಯಕ್ರಮದಲ್ಲಿ ‌ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಸಹನಾ ನಾಗೇಶ್, ಮಾರುತಿ ಇಂಟರ್ನೆಟ್ ಸಂಸ್ಧೆಯ ರಮೇಶ್, ಮಹೇಶ್ ಶಿಕ್ಷಣ ಸಂಸ್ಥೆ‌ಯ‌ ಪ್ರಾಂಶುಪಾಲರಾದ ಶ್ರೀಮತಿ ವಿದ್ಯಾ ಪಾಟೇಲ್, ಎಸ್ ಎಸ್ ಎಲ್ ಸಿ ನೂಡಲ್ ಅಧಿಕಾರಿಗಳಾದ ಶ್ರೀಮತಿ ಹೇಮಲತಾ ,ಮಾರುತಿ, ಪ್ರಾಣೇಶ್, ಎಲ್ಲಾ ಶಾಲೆಯ  ಮುಖ್ಯೋಪಾಧ್ಯಾಯರು ಗಳೂ ಹಾಗೂ ಅಧ್ಯಾಪಕರುಗಳು ಮತ್ತು ಸುಮಾರು 850 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ:ನಾಗೇಶ್ ಜೀವಾ ಮಧುಗಿರಿ

Post a Comment

0 Comments

Ad Code

Responsive Advertisement