Ticker

6/recent/ticker-posts

Ad Code

Responsive Advertisement

ಪ್ರಣವಾಂಜಲಿ ಶಿವಾರ್ಪಣ ನೃತ್ಯ ಕಾರ್ಯಕ್ರಮ ಯಶಸ್ವಿ

 ಪ್ರಣವಾಂಜಲಿ ಸಂಸ್ಥೆಯು ಆಯೋಜಿಸಿದ್ದ ಶಿವಾರ್ಪಣ ನೃತ್ಯ ಕಾರ್ಯಕ್ರಮ ಬಹಳ ಅದ್ಭುತವಾಗಿ ಮೂಡಿ ಬಂತು. ಶಿವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಈ ನೃತ್ಯ ಕಾರ್ಯಕ್ರಮದಲ್ಲಿ ಸುಮಾರು 40ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. 




ಕಾರ್ಯಕ್ರಮ ನಿರೂಪಣೆಯನ್ನು ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಪವಿತ್ರ ಪ್ರಶಾಂತ್ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಗಣೇಶ ಸ್ತುತಿಯೊಂದಿಗೆ ಪ್ರಾರಂಭಿಸಿ, ನಂತರ ಪುಷ್ಪಾಂಜಲಿ, ನಟೇಶ ಕೌತ್ವಂ, ಲಿಂಗಾಷ್ಟಕಂ, ಶಿವ ಪಂಚಾಕ್ಷರ ಸ್ತೋತ್ರ, ನಾಗೇಂದ್ರ ಹಾರಾಯ, ಐಗಿರಿ ನಂದಿನಿ, ಹೀಗೆ ಇನ್ನಷ್ಟು ನೃತ್ಯಗಳನ್ನು ಮಾಡಿ, ಬೃಂದಾವನಿ ತಿಲ್ಲಾನದೊಂದಿಗೆ ಕಾರ್ಯಕ್ರಮವನ್ನು ಸಂಪೂರ್ಣಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದ ಕಲಾವಿದರು : ಕುಮಾರಿಯರಾದ ಅದಿತಿ, ಅನನ್ಯ, ಸಾನ್ವಿ, ದೀಪಾಂಜಲಿ, ನಕ್ಷತ್ರ, ಹಿತಾಸಿನಿ, ಭೂಮಿಕಾ ಕುಲಕರ್ಣಿ, ರಮ್ಯಾ, ಶ್ರೀನಿಧಿ, ಶ್ರೀಮಹಿ, ದೀಕ್ಷಾ ಎ. , ದೀಕ್ಷಾ ಟಿ., ಶ್ರೇಷ್ಠ, ಶ್ರೀಹಿತ, ಮೃದುಲಾ, ಸಾರಿಕಾ, ಪೂರ್ವಿ, ಆದ್ಯ, ಈಶಾನ, ಪ್ರೇರಣ,ಇಶಿತಾ, ತನ್ಮಯಿ ಭಟ್, ಧನ್ಯಾ, ಕಶವಿ, ರೀತನ್ಯ, ಸಿರಿ ಹಾಗೂ ಇನ್ನೂ ಮತ್ತಷ್ಟು ಮಕ್ಕಳು ಭಾಗವಹಿಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಶಿವನಿಗೆ ಮಹಾ ಮಂಗಳಾರತಿ ಮಾಡಿ, ಪ್ರಸಾದ ವಿತರಿಸಲಾಯಿತು.

Post a Comment

0 Comments

Ad Code

Responsive Advertisement