ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಲಾವಿದರ ತಂತ್ರಜ್ಞರ ಒಕ್ಕೂಟದ ಆಶ್ರಯದಲ್ಲಿ ಅಂಗ ಸಂಸ್ಥೆಗಳ ಸದಸ್ಯರಿಗಾಗಿ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಭಾರತ ಸರ್ಕಾರ ಕಾರ್ಮಿಕ ಕಲ್ಯಾಣ ಇಲಾಖೆಯ ಆಯುಕ್ತರಾದ ಕೆ.ಶೇಖರ್ ರವರು ಉದ್ಘಾಟಿಸಿದರು. ಕಾರ್ಮಿಕ ಕಲ್ಯಾಣ ಇಲಾಖೆಯ ವೈದ್ಯರು ಮತ್ತು ಸ್ಪರ್ಶ ಆಸ್ಪತ್ರೆಯ ವೈದ್ಯರ ತಂಡ ಪಾಲ್ಗೊಂಡು, ಐನೂರಕ್ಕೂ ಹೆಚ್ಚು ಜನರನ್ನು ವಿವಿಧ ಖಾಯಿಲೆಗಳ ಬಗ್ಗೆ ತಪಾಸಿಸಿ, ತೆಗೆದುಕೊಳ್ಳಬೇಕಾದ ಆರೋಗ್ಯ ಕ್ರಮಗಳನ್ನು ಸಂಬಂಧಪಟ್ಟವರಿಗೆ ಸಲಹೆಗಳನ್ನು ತಜ್ಞ ವೈದ್ಯರು ನೀಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಕೆ.ಮಹಾಬಲ, ಪ್ರಧಾನ ಕಾರ್ಯದರ್ಶಿ ಸೋಮಸುಂದರಮೂರ್ತಿ, ಉಪಾಧ್ಯಕ್ಷರಾದ ಕೆ.ಮಲ್ಲಿಕಾರ್ಜುನ್, ಕೆ.ಬಾಲಕೃಷ್ಣ ಶೆಟ್ಟಿ, ಸಿ.ನಂಜುಂಡ, ಜಂಟಿ ಕಾರ್ಯದರ್ಶಿಗಳಾದ ಸುರೇಶ್ ಪೂಜಾರಿ, ಜಿ.ವಿ.ಧರ್ಮೆಂದ್ರ(ಕಡೂರು ರಘು), ಖಜಾಂಚಿ ವಿ.ಉಮೇಶ್ ಕುಮಾರ್ ಮತ್ತು ಅದರ ಅಂಗ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
0 Comments