ಬೆಂಗಳೂರು ನಗರ ಸಂಚಾರ ಪಶ್ಚಿಮ ವಿಭಾಗದ ವ್ಯಾಪ್ತಿಗೆ ಸೇರಿದ ಮಲ್ಲೇಶ್ವರ 2 ನೇ ಟೆಂಪಲ್ ಸ್ಟ್ರೀಟ್ ನಲ್ಲಿರುವ ಬಿ.ಜೆ.ಪಿ ಕಛೇರಿ ( ಜಗನ್ನಾಥ ಭವನ) ಗೆ ದಿನಾಂಕ 01.04.2022 ರಂದು ಕೇಂದ್ರ ಗೃಹ ಸಚಿವರು ಬೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಭದ್ರತೆ ಹಾಗು ಸುಗಮ ಸಂಚಾರದ ಸಲುವಾಗಿ ಗಣ್ಯ ವ್ಯಕ್ತಿಗಳು ಬಂದು ಹೋಗುವವರಗೆ ತಾತ್ಕಾಲಿವಾಗಿ ಗಣ್ಯರು ಸಂಚರಿಸುವ ಮಾರ್ಗದಲ್ಲಿ ವಾಹನ ನಿಲುಗಡೆ ನಿಷೇದಿತ ರಸ್ತೆಯನ್ನಾಗಿಸಲು ಮಲ್ಲೇಶ್ವರಂ ಸಂಪಿಗೆ ರಸ್ತೆ, ಮಾರ್ಗೋಸಾ ರಸ್ತೆ 18 ನೇ ಅಡ್ಡರಸ್ತೆ, 15 ನೇ ಅಡ್ಡರಸ್ತೆ, 4 ನೇ ಮುಖ್ಯರಸ್ತೆ, 2 ನೇ ಟೆಂಪಲ್ ಸ್ಟ್ರೀಟ್ ರಸ್ತೆಗಳಲ್ಲಿ ಹೆಚ್ಚಿನ ಅಂಗಡಿ ಮುಂಗಟ್ಟುಗಳು, ಶಾಲಾ- ಕಾಲೇಜು ಇನ್ನಿತರೆ ವ್ಯಾಪಾರ ನಡೆಸುವ ಅಂಗಡಿಗಳಿದ್ದು, ಸದರಿ ರಸ್ತೆಗಳಲ್ಲಿ ವಾಹನ ನಿಲುಗಡೆ ಹೆಚ್ಚಾಗಿರುತ್ತದೆ.
ಇದರಿಂದ ಗಣ್ಯ ವ್ಯಕ್ತಿಗಳು ಸಂಚರಿಸಲು ಅಡಚಣೆಯಾಗುವುದರಿಂದ ಈ ಕೆಳಕಂಡ ರಸ್ತೆಗಳ ಎರಡು ಬದಿಗಳಲ್ಲಿ ಗಣ್ಯ ವ್ಯಕ್ತಿಗಳು ಬಂದು ಹೋಗುವವರೆಗೆ ತಾತ್ಕಾಲಿಕವಾಗಿ ವಾಹನ ನಿಲುಗಡೆ ನಿಷೇದಿತ ಸ್ಥಳವನ್ನಾಗಿಸಿರುತ್ತದೆ.
ನಿಲುಗಡೆ ನಿಷೇದಿತ ಸ್ಥಳವನ್ನಾಗಿಸುವ ರಸ್ತೆಗಳು ಈ ಕೆಳಕಂಡ0ತಿರುತ್ತವೆ.
1 ಮಲ್ಲೇಶ್ವರಂ 18 ನೇ ಅಡ್ಡರಸ್ತೆ ಸಂಪಿಗೆ ರಸ್ತೆ 4 ನೇ ಮುಖ್ಯರಸ್ತೆ 18 ನೇ ಅಡ್ಡರಸ್ತೆ ಜಂಕ್ಷನ್
2 ಮಾರ್ಗೋಸಾ ರಸ್ತೆ ಮಾರ್ಗೋಸಾ ರಸ್ತೆ 18 ನೇ ಅಡ್ಡರಸ್ತೆ ಜಂಕ್ಷನ್ ಮಾರ್ಗೋಸಾ ರಸ್ತೆ 15 ನೇ ಅಡ್ಡರಸ್ತೆ ಜಂಕ್ಷನ್
3 ಮಲ್ಲೇಶ್ವರಂ 15 ನೇ ಅಡ್ಡರಸ್ತೆ 4 ನೇ ಮುಖ್ಯರಸ್ತೆ 15 ನೇ ಅಡ್ಡರಸ್ತೆ ಜಂಕ್ಷನ್ 15 ನೇ ಕ್ರಾಸ್ 2 ನೇ ಟೆಂಪಲ್ ಸ್ಟ್ರೀಟ್ ಜಂಕ್ಷನ್
4 ಮಲ್ಲೇಶ್ವರಂ 4 ನೇ ಮುಖ್ಯರಸ್ತೆ 4 ನೇ ಮುಖ್ಯರಸ್ತೆ 15 ನೇ ಅಡ್ಡರಸ್ತೆ ಜಂಕ್ಷನ್ 4 ನೇ ಮುಖ್ಯರಸ್ತೆ 18 ನೇ ಅಡ್ಡರಸ್ತೆ ಜಂಕ್ಷನ್
5 2 ನೇ ಟೆಂಪಲ್ ಸ್ಟ್ರೀಟ್ ರಸ್ತೆ 15 ನೇ ಕ್ರಾಸ್ 2 ನೇ ಟೆಂಪಲ್ ಸ್ಟ್ರೀಟ್ ಜಂಕ್ಷನ್ 2 ನೇ ಟೆಂಪಲ್ ಸ್ಟ್ರೀಟ್ ಜಂಕ್ಷನ್ 11 ನೇ ಅಡ್ಡರಸ್ತೆ ಜಂಕ್ಷನ್ ವರೆಗೆ.
ಆದ್ದರಿಂದ ಮೇಲ್ಕಂಡ ರಸ್ತೆಯ ಎರಡು ಕಡೆ ವಾಹನ ನಿಲುಗಡೆ ನಿಷೇದಿಸಲಾಗಿದ್ದು ಸಾರ್ವಜನಿಕರು ಸಂಚಾರ ಪೊಲೀಸರಿಗೆ ಸಹಕರಿಸಲು ಕೋರಿದೆ.


0 Comments