Ticker

6/recent/ticker-posts

Ad Code

Responsive Advertisement

AAM AADMI KARNATAKA : ವಕೀಲ ಜಗದೀಶ್‌ರವರಿಗೆ ಜಾಮೀನು: ಆಮ್‌ ಆದ್ಮಿ ಪಕ್ಷದ ಕಾನೂನು ಹೋರಾಟಕ್ಕೆ ಜಯ

ಎಎಪಿ ಮುಖಂಡ ಹಾಗೂ ಖ್ಯಾತ ವಕೀಲ ಜಗದೀಶ್‌ ಕೆ.ಎನ್. ಮಹಾದೇವ್‌ರವರಿಗೆ ಜಾಮೀನು ಸಿಗುವಲ್ಲಿ  ಆಮ್‌ ಆದ್ಮಿ ಪಾರ್ಟಿ ಪಾರ್ಟಿಯ ಕಾನೂನು ಘಟಕದ ಹೋರಾಟ  ಯಶಸ್ವಿಯಾಗಿದ್ದು   ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಸತ್ಯಕ್ಕೆ ಗೆಲುವು ಸಿಕ್ಕಿದೆ ಎಂದು ಹೇಳಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಇಂದು ಸಂಜೆ ನಡೆದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್‌ ಆದ್ಮಿ ಪಾರ್ಟಿಯ ಕಾನೂನು ಘಟಕದ ರಾಜ್ಯಾಧ್ಯಕ್ಷರಾದ ನಂಜಪ್ಪ ಕಾಳೇಗೌಡ, “ನಮ್ಮ ಪಕ್ಷದ ಮೂಲ ಆಶಯವೇ ಭ್ರಷ್ಟಾಚಾರವನ್ನು ತೊಲಗಿಸಿ, ಪ್ರಾಮಾಣಿಕ ಕೈಗಳಿಗೆ ಮಾತ್ರ ಅಧಿಕಾರದ ಚುಕ್ಕಾಣಿ ಸಿಗುವಂತೆ ಮಾಡುವುದು. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಕಠಿಣ ಸವಾಲುಗಳು ಸಾಮಾನ್ಯವಾಗಿದ್ದು, ಜಗದೀಶ್‌ ಮಹಾದೇವ್‌ರವರಿಗೂ ಸವಾಲು ಎದುರಾಗಿತ್ತು. ಆಮ್‌ ಆದ್ಮಿ ಪಾರ್ಟಿಯ ಕಾನೂನು ಘಟಕವು ನಿರಂತರವಾಗಿ ಪ್ರಯತ್ನಿಸಿ ಜಗದೀಶ್‌ರವರಿಗೆ ಜಾಮೀನು ಕೊಡಿಸುವುದರಲ್ಲಿ ಯಶಸ್ವಿಯಾಗಿದೆ” ಎಂದು ಹೇಳಿದರು.

“ಭ್ರಷ್ಟಾಚಾರಿಗಳಿಗೆ ಬೆನ್ನೆಲುಬಾಗಿರುವ ವ್ಯವಸ್ಥೆಯು ಜಗದೀಶ್‌ ಮಹಾದೇವ್‌ರವರ ವಿರುದ್ಧ ಸುಳ್ಳು ಆರೋಪ ಹೊರಿಸಿ ಬಂಧನವಾಗುವಂತೆ ಮಾಡಿತ್ತು. ಅವರ ದನಿಯನ್ನು ಹತ್ತಿಕ್ಕಲೆಂದೇ ಹಲವು ವರ್ಷಗಳ ಹಿಂದಿನ ಹಳೆಯ ಕೇಸುಗಳನ್ನು ಸೇರಿಸಿ, ಜಾಮೀನು ಸಿಗದಂತೆ ಮಾಡಿದ್ದರು. ಆದರೆ ಸತ್ಯಮೇವ ಜಯತೇ ಎಂಬ ಮಾತಿನಂತೆ, ನ್ಯಾಯಾಲಯವು ಕೊನೆಗೂ ಸತ್ಯಕ್ಕೆ ಜಯ ತಂದುಕೊಟ್ಟಿದೆ. ಸದ್ಯದಲ್ಲೇ ಬಿಡುಗಡೆ ಆಗಲಿರುವ ಜಗದೀಶ್‌ರವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ” ಎಂದು ನಂಜಪ್ಪ ಕಾಳೇಗೌಡ ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ಕಾನೂನು ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಚಂದ್ರರವರು ಮಾತನಾಡಿ, “ಜಗದೀಶ್‌ ಮಹಾದೇವ್‌ ಮಾತ್ರವಲ್ಲದೇ ಯಾರೇ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದರೂ ನಾವು ಅವರಿಗೆ ಅಗತ್ಯ ನೆರವು ನೀಡಲಿದ್ದೇವೆ. ರಾಜಕಾರಣಿಗಳು ಅಥವಾ ಅಧಿಕಾರಿಗಳು ಅಕ್ರಮದ ಹಾದಿಯಲ್ಲಿ ಸಾಗುವುದಕ್ಕೆ ಆಮ್‌ ಆದ್ಮಿ ಪಾರ್ಟಿ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ಭ್ರಷ್ಟರ ವಿರುದ್ಧದ ಹೋರಾಟಕ್ಕೆ ಜಗದೀಶ್‌ ಮಹಾದೇವ್‌ರವರು ಪ್ರೇರಣೆಯಾಗಲಿ” ಎಂದು ಹೇಳಿದರು

ಬೆಂಗಳೂರು ನಗರ ಎಎಪಿ ಕಾನೂನು ಘಟಕದ ಅಧ್ಯಕ್ಷರಾದ ಮಂಜುನಾಥ ಆರ್‌ ಸ್ವಾಮಿಯವರು ಸುದ್ದಿಗೋಷ್ಠಯಲ್ಲಿ ಉಪಸ್ಥಿತರಿದ್ದರು.


Post a Comment

0 Comments

Ad Code

Responsive Advertisement