ಲಯನ್ ಜಿಲ್ಲಾ 317 ಎಫ್ ಪ್ರಾಂತೀಯ-5 ವತಿಯಿಂದ 40 ಲಕ್ಷದ 370 ಸೇವಾ ಕಾರ್ಯಗಳನ್ನು ಮಾಡಿ 27 ಸಾವಿರ ಜನಕ್ಕೆ ಅನುಕೂಲ ಮಾಡಿದೆ ಎಂದು ಪ್ರಾಂತೀಯ ಅಧ್ಯಕ್ಷೆ ಕಲ್ಯಾಣಿ ಗಣಪತಿ ತಿಳಿಸಿದರು.
ಬೆಂಗಳೂರಿನ ಕಲ್ಯಾಣ ನಗರದಲ್ಲಿ ನಡೆದ ಲಯನ್ ಜಿಲ್ಲಾ 317f ನ ಪ್ರಾಂತೀಯ 5ರ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿಂಧಿ ಕಾಲೇಜಿನ ಪ್ರಾಧ್ಯಾಪಕ ಡಾಕ್ಟರ್.ರಾಜದೀಪ್ ಮಣ್ವನಿ ಹಾಗೂ ಮಕ್ಕಳ ಮನೋವೈದ್ಯ ಸಲಹೆಗಾರರಾದ ಡಾಕ್ಟರ್ ಶೋಭಾ ರಮೇಶ್ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿದರು.
ಲಯನ್ ಜಿಲ್ಲಾ ರಾಜ್ಯಪಾಲರಾದ ಮನೋಹರ ನಂಬಿಯಾರ್, ಉಪರಾಜ್ಯಪಾಲರಾದ ರಾಜಶೇಖರಯ್ಯ, ಬಿ.ಎಸ್. ನಾಗರಾಜ್, ಸಿಕೆ ಕೃಷ್ಣಮೂರ್ತಿ, ರಾಮನಾಥನ್, ಬಿ.ಎಸ್. ಶ್ರೀಧರ್, ಗ್ರೇಸಿ ರೆಬೆಲ್ಲೊ , ವಿ. ಅರ್. ಶ್ರೀಧರನ್ , ಕ್ಯಾಬಿನೆಟ್ ಸದಸ್ಯರು,ಅನೇಕ ಲಯನ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
0 Comments