ಜಯನಗರದ 5 ನೇ ಬಡಾವಣೆ ಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ದಲ್ಲಿ ಪರಮ ಪೂಜ್ಯ 108 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪ ಕರಾದ ರಾಜಾ ಕೆ ವಾದೀಂದ್ರ ಆಚಾರ್ಯರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಿಶೋರ್ ಆಚಾರ್ಯರು ತಿಳಿಸಿದರು,
ಈ ಸಂದರ್ಭದಲ್ಲಿ ವ್ಯವಸ್ಥಾಪಕರಾದ ಆರ್ , ಕೆ ವಾದೀಂದ್ರಾಚಾರ್ಯರು ಮಾತ ನಾಡುತ್ತಾ ಶ್ರೀ ರಾಘವೇಂದ್ರ ಸ್ವಾಮಿಗಳ ಜನ್ಮದಿನೋತ್ಸವದ ಅಂಗವಾಗಿ 9-3-2022 ರಂದು ಬೆಳಗ್ಗೆ 7-30 ಕ್ಕೆ ಗುರು ರಾಯರ ಬೃಂದಾವನಕ್ಕೆ ಅರ್ಚಕರಿಂದ ಫಲಪಂಚಾಮೃತ ಅಭಿಷೇಕವು ಶ್ರೀ ರಾಘವೇಂದ್ರ ಅಷ್ಟೋತ್ತರ ಸಹಿತ ಪಾರಾಯಣದೊಂದಿಗೆ ನೆರವೇರಲಿದೆ,
ಬೆಳಗ್ಗೆ8 ಕ್ಕೆ ಶ್ರೀ ಧನ್ವಂತರಿ ಹೋಮ ಹಾಗೂ ಬೆಳಗ್ಗೆ 10- ಕ್ಕೆ ನಾನಾವಿಧವಾದ ಉತ್ಸವಗಳು ನೆರವೇರುವುದು, ವಿಶೇಷವಾಗಿ"ಲಕ್ಷ ಪುಷ್ಪಾರ್ಚನೆ" ಯನ್ನು ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ ಬೆಳಗ್ಗೆ11ಗಂಟೆಗೆ ಲಕ್ಷಾವರ್ತಿ ಪಾರಾಯಣಸಂಘದ ಶ್ರೀಯುತ ವೇಣುಗೋಪಾಲಾಚಾರ್ಯರ ವೃಂದದವರಿಂದ ಶ್ರೀ ವೆಂಕಟೇಶ ಸ್ತೋತ್ರ, ಶ್ರೀ ವಿಷ್ಣು ಸಹಸ್ರ ನಾಮ ಸ್ತೋತ್ರ,ಶ್ರೀಹರಿವಾಯು ಸ್ತುತಿಸ್ತೋತ್ರ ಹಾಗೂ ಶ್ರೀ ಗುರು ರಾಘವೇಂದ್ರ ಸ್ತೋತ್ರ ಅಷ್ಟೋತ್ತರ ದೊಂದಿಗೆ ಅರ್ಚಕ ರಿಂದ "ಲಕ್ಷ ಪುಷ್ಪಾರ್ಚನೆ"ಯೂ ನೆರವೇರಿಸಿ ಮಹಾಮಂಗಳಾರತಿ ಯೊಂದಿಗೆ ಭಕ್ತಜನರಿಗೆ ಅನ್ನ ಸಂತರ್ಪಣೆಯೂ ನೆರವೇರಲಿದೆ. ಸೇವೆಯಲ್ಲಿ ಭಾಗವಹಿಸುವಂತಹ ಭಕ್ತರು, 9449133929 ಈ ನಂಬರ್ ವಾಟ್ಸಪ್ನಲ್ಲಿ ಕ್ಯಾಟ್ಲಾಗ್ ಮುಖಾಂತರ ಸೇವೆ ಸಲ್ಲಿಸಬ ಹುದು, ಈ ದಿನ ಸಂಜೆ 5 ಕ್ಕೆ ಶ್ರೀಹರಿ ಭಜನೆ, ಪ್ರವಚನ , ದೀಪೋತ್ಸವ , ಮಂಗಳಾರತಿ, ಹಾಗೂ ಸಂಜೆ 7-15 ಕ್ಕೆ ಶ್ರೀಮತಿ ವಿದುಷಿ - ಅಪರ್ಣಆನಂದ್ ವೃಂದದವರು "ದಾಸವಾಣಿ" ಕಾರ್ಯಕ್ರಮವನ್ನು ಶ್ರೀ ಯುತ ಸುಧೀಂದ್ರ ದೇಸಾಯಿಯವರ ಹಾಗೂ ಶ್ರೀ ಯುತ ಎನ್ , ವಿ ಶ್ರೀ ಲಕ್ಷ್ಮೀನಾರಾಯಣರವರ ಸಹಕಾರದೊಂದಿಗೆನೆರವೇರಲಿದೆ ಈ ಸಂದರ್ಭದಲ್ಲಿ ಭಕ್ತಾದಿಗಳು ರಾಯರ ಸನ್ನಿಧಿಗೆ ಆಗಮಿಸಿ ಶ್ರೀ ಗುರು ರಾಯರ ದರ್ಶನ ಪಡೆದು ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ರಾಜಾ ,ಕೆ ವಾದೀಂದ್ರ ಆಚಾರ್ಯರು ತಿಳಿಸಿದರು.
0 Comments