ಮಧುಗಿರಿ - ಪುರಸಭೆ ವ್ಯಾಪ್ತಿಯಲ್ಲಿ ಕಂದಾಯ, ವ್ಯಾಪಾರ ಪರವಾನಗಿ ಮತ್ತು ಬೀದಿಬದಿ ವ್ಯಾಪಾರಿಗಳ ಪರವಾನಿಗೆ ಪಡೆಯದೆ ವ್ಯಾಪಾರ ಮಾಡುತ್ತಿರುವುದರಿಂದ ಪುರಸಭೆ ಮುಖ್ಯಾಧಿಕಾರಿಗಳು ಮತ್ತು ತಂಡ ಪಟ್ಟಣದ ಪ್ರತಿಯೊಂದು ಅಂಗಡಿಗಳಿಗೆ ಭೇಟಿ ನೀಡಿ ಸ್ಥಳದಲ್ಲೇ ಪರವಾನಿಗೆ ನವೀಕರಣ ಮಾಡಿದ ಘಟನೆ ಮಂಗಳವಾರ ನಡೆಯಿತು.
ಕರೋನಾ ಕಾರಣದಿಂದಾಗಿ ವ್ಯಾಪಾರ ಪರವಾನಗಿ ನವೀಕರಣವನ್ನು ಕೆಲವು ಅಂಗಡಿಗಳ ಮಾಲೀಕರು ಮಾಡಿಸಿಕೊಂಡಿರದ ಕಾರಣ ಸ್ಥಳದಲ್ಲೇ ಪರಿಶೀಲನೆ ನಡೆಸಿ ಪರವಾನಿಗೆ ಆದೇಶವನ್ನು ಮುಖ್ಯಾಧಿಕಾರಿ ನೀಡಿದರು.
ಇದೇ ವೇಳೆ ದಿನಸಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಸ್ಥಳದಲ್ಲೇ ಕ್ರಮ ಕೈಗೊಂಡು ದಂಡವನ್ನು ಹಾಕಲಾಯಿತು. ಪುರಸಭಾ ಮಾಜಿ ಸದಸ್ಯ ಜಿ.ಆರ್.ವೆಂಕಟೇಶ್ ಬಾಬು ರವರ ಕಾಂಪ್ಲೆಕ್ಸ್ ಗೆ ಭೇಟಿ ನೀಡಿ ಸುಮಾರು 13 ಅಂಗಡಿಗಳ ಟ್ರೈಡ್ ಲೈಸನ್ಸ್ ಅನ್ನು ಪರಿಶೀಲಿಸಿ ಎಲ್ಲರಿಗೂ ನೋಟಿಸ್ ನೀಡುವಂತೆ ಸೂಚಿಸಿದರು. ಈ ಕಾಂಪ್ಲೆಕ್ಸ್ ನಲ್ಲಿ ಕೆಲವರು ಗೋದಾಮುಗಳನ್ನು ಮಾಡಿಕೊಂಡಿದ್ದು, ಅವರಿಗೂ ನೋಟಿಸ್ ನೀಡಿ ಪರವಾನಿಗೆ ತೆಗೆದುಕೊಳ್ಳುವಂತೆ ಸೂಚಿಸಿದರು. ಸುಮಾರು ಎಪ್ಪತ್ತು ಸಾವಿರದವರೆವಿಗೂ ಕಂದಾಯ ಪಾವತಿ ಆಗದಿರುವ ಬಗ್ಗೆ ಮಾಹಿತಿ ಪಡೆದು ತಕ್ಷಣವೇ ಜಿ.ಆರ್.ವೆಂಕಟೇಶ ಬಾಬುಗೆ ನೋಟಿಸ್ ನೀಡುವಂತೆ ಕಂದಾಯ ಅಧಿಕಾರಿಗಳಿಗೆ ಮುಖ್ಯಾಧಿಕಾರಿಗೆ ಸೂಚಿಸಿದರು.
ಪಟ್ಟಣದಲ್ಲಿ ಇಂತಹ ಕಾಂಪ್ಲೆಕ್ಸ್ ನಲ್ಲಿ ಎಷ್ಟು ವ್ಯಾಪಾರಸ್ಥರು ವ್ಯಾಪಾರ ಪರವಾನಗಿ ಪಡೆದಿದ್ದಾರೆ ಮತ್ತು ಕಂದಾಯ ಕಟ್ಟಿದ್ದಾರೆ ಎಂದು ಪರಿಶೀಲಿಸುವಂತೆ ಆರೋಗ್ಯ ನಿರೀಕ್ಷಕರು ಮತ್ತು ಕಂದಾಯ ಅಧಿಕಾರಿಗಳಿಗೆ ತಿಳಿಸಿದರು.
ಪಟ್ಟಣದಲ್ಲಿರುವ ಬಹುತೇಕ ಮೊಬೈಲ್ ಅಂಗಡಿಯವರು ವ್ಯಾಪಾರ ಪರವಾನಗಿ ಪಡೆಯದೆ ವ್ಯಾಪಾರ ನಡೆಸುತ್ತಿದ್ದು, ವ್ಯಾಪಾರ ಪರವಾನಗಿ ಪಡೆಯದೆ ಇರುವವರಿಗೆ ನೋಟಿಸ್ ನೀಡಲಾಗಿದೆ ಎಂದರು.
ಈ ವೇಳೆ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಬಾಲಾಜಿ, ಕಂದಾಯ ತನಿಖಾಧಿಕಾರಿಗಳು, ಆರೋಗ್ಯ ಶಾಖೆಯವರು ಮತ್ತು ಸಿಬ್ಬಂದಿ ಇದ್ದರು.
ವರದಿ:ನಾಗೇಶ್ ಜೀವಾ ಮಧುಗಿರಿ.
0 Comments