ಬೆಂಗಳೂರು, ಫೆ 22: ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟಲು ಮುನ್ನೆಚ್ಚರಿಕೆ ಸಲುವಾಗಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು/ಅಧಿಕಾರಿಗಳ ಆರೋಗ್ಯದ ಹಿತದೃಷ್ಟಿಯಿಂದ, ಅಕ್ಷಯ ಪಾತ್ರ ಘೌಂಡೇಶನ್ ರವರು ಸಕಾರಿಯಾ ಹಾಸ್ಪಿಟಲ್ ಸಹಯೋಗದೊಂದಿಗೆ ಶಾಂತಿನಗರದಲ್ಲಿರುವ ಘಟಕ-02 ರಲ್ಲಿ ದಿನಾಂಕ 22.02.2022 ರಂದು ಬೆಳಿಗ್ಗೆ 11:00 ಗಂಟೆಗೆ ಕೋವಿಶೀಲ್ಡ್ 3ನೇ ಡೋಸ್ (ಬೂಸ್ಟರ್) ಉಚಿತ ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂಸ್ಥೆಯ ಅಧ್ಯಕ್ಷರಾದ ಶ್ರೀ. ನಂದೀಶ್ರೆಡ್ಡಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧಿಕಾರಿಗಳು ಹಾಗೂ ಅಕ್ಷಯ ಪಾತ್ರ ಘೌಂಡೇಶನ್ ನ ಅಧಿಕಾರಿಗಳು ಮತ್ತು ಇತರೆ ಗಣ್ಯರು ಭಾಗಿಯಾಗಿದರು.
ಘಟಕ-02 ರ ಶಿಬಿರದಲ್ಲಿ ಒಟ್ಟು 991 ಮಂದಿ ಸಿಬ್ಬಂದಿಗಳಿಗೆ ಕೋವಿಶೀಲ್ಡ್ 3ನೇ ಡೋಸ್ (ಬೂಸ್ಟರ್) ಉಚಿತ ಲಸಿಕೆ ಹಾಕಲಾಗಿರುತ್ತದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಎಲ್ಲಾ ಘಟಕಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
Varthajala daily, Bengaluru
0 Comments