ಬೆಂಗಳೂರು, ಫೆ 22: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ), ಗಾಂಧಿನಗರ, ಬೆಂಗಳೂರು ರವರು ಏಪ್ರಿಲ್-2021ರ ಮಾಹೆಯಲ್ಲಿ ಹಮ್ಮಿಕೊಂಡಿದ್ದ ಮುಷ್ಕರಕ್ಕೆ ಸಂಬ0ದಿಸಿದ0ತೆ,
ಹಲವಾರು ನೌಕರರನ್ನು ಸಂಸ್ಥೆಯ ಸೇವೆಯಿಂದ ವಿಮುಕ್ತಿಗೊಳಿಸಲಾಗಿದೆ. ಈ ಪೈಕಿ 100 ತರಬೇತಿ ಹಾಗೂ ಪರೀಕ್ಷಣಾರ್ಥಿ ನೌಕರರನ್ನು ಉಭಯತ್ರರು ಘನ ಕಾರ್ಮಿಕ ನ್ಯಾಯಾಲಯದ ಮುಂದೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಮಾನ್ಯ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಶ್ರೀ.ಬಿ.ಶ್ರೀರಾಮುಲು ರವರ ಸಮ್ಮುಖದಲ್ಲಿ ದಿನಾಂಕ:10-02-2022 ರಂದು ನೇಮಕಾತಿ ಆದೇಶಗಳನ್ನು ವಿತರಿಸಲಾಗಿದೆ. ಮುಂದುವರೆದು, ಸಂಸ್ಥೆಯ ಅಧ್ಯಕ್ಷರಾದ ಶ್ರೀ.ಎನ್.ಎಸ್.ನಂದೀಶ್ ರೆಡ್ಡಿ, ಉಪಾಧ್ಯಕ್ಷರಾದ ಶ್ರೀ.ಎಂ.ಆರ್.ವೆ0ಕಟೇಶ್ , ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಅನ್ಬುಕುಮಾರ್ ರವರು ದಿನಾಂಕ:22-02-2022 ರಂದು 49 ತರಬೇತಿ ಹಾಗೂ ಪರೀಕ್ಷಣಾರ್ಥಿ ನೌಕರರಿಗೆ ನೇಮಕಾತಿ ಆದೇಶಗಳನ್ನು ವಿತರಿಸಿದರು.
Varthajala daily, Bengaluru
0 Comments