Ticker

6/recent/ticker-posts

Ad Code

Responsive Advertisement

Flash News: 'ದೈವ ಸಂಕಲ್ಪ' ಯೋಜನೆ ಹೆಸರಿನಲ್ಲಿ ರಾಜ್ಯದ ದೇವಾಲಯಗಳ ಅಭಿವೃದ್ದಿ

ಬೆಂಗಳೂರು, ಫೆ ೦೪: ರಾಜ್ಯದ ದೇವಾಲಯಗಳ ಖಾಸಗೀಕರಣ ಕುರಿತು ಮುಜರಾಯಿ ಇಲಾಖೆ ಸಚಿವೆ 'ಶಶಿಕಲಾ ಜೊಲ್ಲೆ' ಪ್ರತಿಕ್ರಿಯೆ ನೀಡಿದ್ದು, ದೇವಾಲಯಗಳನ್ನು ಖಾಸಗೀಕರಣ ಮಾಡುವುದಿಲ್ಲ ಬದಲಾಗಿ ದೈವ ಸಂಕಲ್ಪ ಹೆಸರಿನಲ್ಲಿ ರಾಜ್ಯದ ದೇವಾಲಯಗಳನ್ನು ಅಭಿವೃದ್ದಿ ಮಾಡುತ್ತೇವೆ ಎಂದು ಹೇಳಿದರು.

ದಾನಿಗಳ ಸಹಾಯದಿಂದ ಅಭಿವೃದ್ಧಿ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. “ಸಿ ಗ್ರೇಡ್” ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಲು ಕ್ರಮ ವಹಿಸಲಾಗುತ್ತಿದೆ. ರಾಜ್ಯದ ಎಲ್ಲಾ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದರು.

ಈ ಯೋಜನೆಯ ಮೊದಲ ಹಂತದ ಅಂದಾಜು ವೆಚ್ಚ ೧೧೪೦ ಕೋಟಿ ರೂಪಾಯಿಗಳಾಗಿವೆ. ಕುಕ್ಕೆ ಸುಬ್ರಹ್ಮಣ್ಯ, ಮಲೈಮಹದೇಶ್ವರ ದೇವಸ್ಥಾನಗಳ ರೀತಿ ಅಭಿವೃದ್ಧಿಯಾಗಬೇಕು. ರಾಜ್ಯದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ೨೫ ದೇವಸ್ಥಾನಗಳ ಸಮಗ್ರ ಅಭಿವೃದ್ದಿಗೆ ರೂಪಿಸುವ ಯೋಜನೆ ಇದಾಗಿದೆ. ಮೊದಲ ಹಂತದಲ್ಲಿ ೨೫ ದೇವಸ್ಥಾನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ರು.

ದೇವಾಲಯಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ವಸತಿ ವ್ಯವಸ್ಥೆ, ರಸ್ತೆ, ಶೌಚಾಲಯ ಅಭಿವೃದ್ಧಿ ಮಾಡುತ್ತೇವೆ. ಭಕ್ತರಿಗೆ ಪಾರ್ಕಿಂಗ್ ವ್ಯವಸ್ಥೆ, ದಾಸೋಹ ಭವನ, ಶಾಪಿಂಗ್ ಕಾಂಪ್ಲೆಕ್ಸ್, ಪಾರಂಪರಿಕ ಶೈಲಿಯಲ್ಲಿ ಕಟ್ಟಡಗಳ. ನಿರ್ಮಿಸಲು ನಿರ್ಧಾರ ಮಾಡಲಾಗಿದೆ. ದೈವ ಸಂಕಲ್ಪ ಯೋಜನೆ ಹೆಸರಿನಲ್ಲಿ ದೇವಾಲಯಗಳ ಅಭಿವೃದ್ದಿ ಮಾಡಲಾಗುತ್ತದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಮಾಹಿತಿ ನೀಡಿದರು.

Varthajala Daily, Bengaluru

Contact for advertisements 9448119247

Post a Comment

0 Comments

Ad Code

Responsive Advertisement